Categories
ಕಾರ್ಕಳ

ಕಾರ್ಕಳದಲ್ಲಿ ರಸ್ತೆ ಅಪಘಾತ: ನಿರ್ಲಕ್ಷ್ಯ ಸವಾರಿಯಿಂದ ಪಾದಚಾರಿ ಗಾಯಗೊಂಡರು

ಕಾರ್ಕಳದಲ್ಲಿ ರಸ್ತೆ ಅಪಘಾತ: ನಿರ್ಲಕ್ಷ್ಯ ಸವಾರಿಯಿಂದ ಪಾದಚಾರಿ ಗಾಯಗೊಂಡರು

ಕಾರ್ಕಳ: ಆಗಸ್ಟ್ 18, 2025ರಂದು ಮಧ್ಯಾಹ್ನ 1.00 ಗಂಟೆಗೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸರ್ಕಾರಿ ಆಸ್ಪತ್ರೆ ಬಳಿ ಬಜಗೊಳಿ–ಹೊಸ್ಮಾರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ.

ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೀನ ಮೂಲ್ಯ ರವರಿಗೆ, ಕಾರ್ಕಳ ದಿಕ್ಕಿನಿಂದ ಹೊಸ್ಮಾರು ಪೇಟೆ ಕಡೆಗೆ ಬರುತ್ತಿದ್ದ KA20-EG-8034ಮೋಟಾರ್ಸೈಕಲ್ ಸವಾರ ಭರತ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಹತ್ತಿಸಿಕೊಂಡು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸೀನ ರವರಿಗೆ ಬಲ ತೊಡೆಗೆ ಗಾಯವಾಗಿದೆ.

ಈ ಬಗ್ಗೆ ನಾಗೇಂದ್ರ (44), ಈದು ಕ್ರಾಸ್, ಹೊಸ್ಮಾರು ರವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪರಾಧ ಕ್ರಮಾಂಕ 97/2025ರಲ್ಲಿ ಕಲಂ 281, 125(ಎ) ಭಾರತೀಯ ನ್ಯಾಯ ಸಂಹಿತೆ 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.