Categories
ಕಾರ್ಕಳ

ಈಶ್ವರನ ಪಾದ ಸೇರಿದ ಕ್ಷೇತ್ರ ಪುರೋಹಿತರಾದ ಶ್ರೀ ಜಗದೀಶ್ ಭಟ್!

ಈಶ್ವರನ ಪಾದ ಸೇರಿದ ಕ್ಷೇತ್ರ ಪುರೋಹಿತರಾದ ಶ್ರೀ ಜಗದೀಶ್ ಭಟ್!

– ಕರ್ತವ್ಯಗಳನ್ನೆಲ್ಲವನ್ನು ಮುಗಿಸಿ ಇಹಲೋಕ ತ್ಯಜಿಸಿದ ಮಹಾಲಕ್ಷ್ಮಿ ದೇವಸ್ಥಾನದ ಪುರೋಹಿತರು

NAMMUR EXPRESS NEWS
ಕಾರ್ಕಳ: ತನ್ನ ಕರ್ತವ್ಯವನ್ನು ನೆರವೇರಿಸುತ್ತಿರುವಾಗಲೇ ಭಗವಂತನ ಪಾದ ಸೇರುವುದು ಎಂದರೆ ಆತನ ಇಹಲೋಕದ ಕರ್ತವ್ಯಗಳೆಲ್ಲವೂ ಮುಗಿದು ಆತ್ಮವೂ ಚಿರಸ್ಥಾಯಿಯಾಗಿ ಭಗವಂತನಲ್ಲಿ ಲೀನವಾಗುತ್ತದೆ ಎಂದು ಅರ್ಥ. ಇಂತಹ ಅವಕಾಶಗಳು ಕೋಟಿಯಲ್ಲಿ ಒಬ್ಬನಿಗೆ ಮಾತ್ರ ದೊರೆಯಲು ಸಾಧ್ಯ.
ಇಂತಹ ಸಂದರ್ಭಗಳು ಬಂದ ವ್ಯಕ್ತಿ ನೂರಕ್ಕೆ ನೂರು ಪರಿಪೂರ್ಣನು, ಭಗವಂತ ಸ್ವರೂಪಿಯು ಆಗಿರುತ್ತಾನೆ ಎಂಬ ನಂಬಿಕೆ ಸ್ಥಳೀಯರದ್ದು.
ಹೌದು ಮೇ. 05ರಂದು ಅಂದರೆ ಇಂದು ದೇವರ ಸೇವೆಯ ಕಾರ್ಯದಲ್ಲಿರುವಾಗಲೇ ಹೃದಯದಲ್ಲಿ ನೋವು ಬಂದು ತಕ್ಷಣವೇ ಆಸ್ಪತ್ರೆಗೆ
ದಾಖಲಿಸಲಾಗಿತ್ತು.
ಆದರೂ ಕೆಲವೇ ಕ್ಷಣಗಳಲ್ಲಿ 3.30ಕ್ಕೆ ಇಹಲೋಕವನ್ನು ತ್ಯಜಿಸಿ ಕ್ಷೇತ್ರದ ಪುರೋಹಿತರಾದ ಶ್ರೀ ಜಗದೀಶ್ ಭಟ್,ಎಣ್ಣೆಹೊಳೆ ಈಶ್ವರನ ಪಾದ ಸೇರಿರುತ್ತಾರೆ. ಇವರಿಗೆ ಕ್ಷೇತ್ರ ಹಾಗೂ ಸಮಾಜದ ಪರವಾಗಿ
ಅರ್ಚಕವೃಂದ, ಬ್ರಹ್ಮ ವೃಂದ, ಆಡಳಿತ ಮಂಡಳಿ, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಕಳ ಆರ್ ಎಸ್ ಬಿ ಸಮಾಜ್, ಆರ್ ಎಸ್ ಬಿ ಮಹಿಳಾ ಮಂಡಳಿ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಎಣ್ಣೆ ಹೊಳೆ ಹಿರ್ಗಾನ ಕಾರ್ಕಳ ಉಡುಪಿ ಶ್ರದ್ಧಾಂಜಲಿಯನ್ನು ಈ ಮೂಲಕ ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.