ಕ್ರೈಸ್ಟ್ ಕಿಂಗ್ ಕಾಲೇಜಿನಿಂದ ವಾಣಿಜ್ಯ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ: ಗೋಶಾಲೆ ಮತ್ತು ವೃದ್ಧಾಶ್ರಮಕ್ಕೆ ನೆರೆದ ಭಾವಪೂರ್ಣ ಅನುಭವ
* ಹೈನುಗಾರಿಕೆ ಅರಿವುಗಾಗಿ ಗೋಶಾಲೆ ಭೇಟಿ.
* ಮಾನವೀಯ ಮೌಲ್ಯಗಳಿಗಾಗಿ ವೃದ್ಧಾಶ್ರಮ ಭೇಟಿ.
NAMMUR EXPRESS NEWS
ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಕ್ಷೇತ್ರದ ಕುರಿತು ಆಸಕ್ತಿ ಬೆಳೆಸುವುದು ಮತ್ತು ಹಿರಿಯ ನಾಗರೀಕರಿಗೆ ತೋರಬೇಕಾದ ಗೌರವ, ಪ್ರೀತಿ ಹಾಗೂ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರವಾಸದ ಭಾಗವಾಗಿ ವಿದ್ಯಾರ್ಥಿಗಳು ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿರುವ ಶ್ರೀ ವೆಂಕಟರಮಣ ಗೋಶಾಲೆಗೆ ಭೇಟಿ ನೀಡಿ, ಹೈನುಗಾರಿಕೆಯ ಮಹತ್ವ ಮತ್ತು ವಿವಿಧ ಗೋವು ತಳಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಅಲ್ಲಿನ ವ್ಯವಸ್ಥಾಪಕರಾದ ಕೇಶವ ನಾಯಕ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದಲ್ಲದೆ, ವಿದ್ಯಾರ್ಥಿಗಳು ಗಜ್ರಿಯಾ ಆಸ್ಪತ್ರೆಗೆ ಸಮೀಪವಿರುವ ವಾತ್ಸಲ್ಯ ಸೇವಾ ಟ್ರಸ್ಟ್‌ನ ವೃದ್ಧಾಶ್ರಮಕ್ಕೆ ಭೇಟಿನೀಡಿದ್ದು, ಹಿರಿಯರ ಜೀವನದ ಅನುಭವಗಳು ಮತ್ತು ಪ್ರತಿದಿನದ ಚಟುವಟಿಕೆಗಳ ಬಗ್ಗೆ ಅರಿವು ಹೊಂದಿದರು. ವೃದ್ಧಾಶ್ರಮದ ವ್ಯವಸ್ಥಾಪಕರಾದ ಸಂದೀಪ್ ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡರು.
ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ಪ್ರಕಾಶ್ ಭಟ್, ಉಮೇಶ್ ಬೆಳ್ಳಿಪ್ಪಾಡಿ, ಕೃಷ್ಣ ಪ್ರಸಾದ್, ಶ್ರೀಮತಿ ಶಹನಾಝ್, ಶ್ರೀಮತಿ ಸುಕನ್ಯಾ ಮತ್ತು ಶ್ರೀಮತಿ ಶಿಜಿ ನೇತೃತ್ವ ನೀಡಿದರು. ಈ ರೀತಿಯ ಅಧ್ಯಯನಾತ್ಮಕ ಹಾಗೂ ಮಾನವೀಯ ಮೌಲ್ಯಗಳ ಸಾರವಿರುವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸದ್ಗುಣಗಳ ಬಿತ್ತನೆಗೈದು, ನಿಜವಾದ ಸಮಾಜದ ಬಗೆಗಿನ ಬುದ್ಧಿವಂತಿಕೆಯನ್ನು ಹೆಚ್ಚಿಸುವಂತೆ ಸೇವೆಸಲ್ಲಿಸಿತು.
