Categories
ಕಾರ್ಕಳ

ಪರೀಕ್ಷೆ ಒತ್ತಡವಾಗುತ್ತಾ..! ಡೋಂಟ್ ಕೇರ್..!

ಪರೀಕ್ಷೆ ಒತ್ತಡವಾಗುತ್ತಾ..! ಡೋಂಟ್ ಕೇರ್..!
– ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರ
– ಮಕ್ಕಳ ಪರೀಕ್ಷೆ ಭಯ ಹೋಗಲಾಡಿಸಿದ ತನುಜಾ ಮಾಬೆನ್

NAMMUR EXPRESS NEWS
ಕಾರ್ಕಳ: ಪರೀಕ್ಷೆ ಒತ್ತಡವಾಗುತ್ತಾ..! ಡೋಂಟ್ ಕೇರ್… ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು ಮಕ್ಕಳಿಗೆ ಅಂತಾರಾಷ್ಟ್ರೀಯ ಜೆಸಿ ತರಬೇತುದಾರರಾದ ತನುಜಾ ಮಾಬೆನ್ ಧೈರ್ಯ ತುಂಬಿದರು. ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸುಂದರ ಮತ್ತು ಸ್ವಸ್ಥ ಬದುಕಿಗಾಗಿ ನಾವು ಇಂದು ವಿಪರೀತ ಮಾನಸಿಕ ಒತ್ತಡದ ನಡುವೆ ಬದುಕುತ್ತಿದ್ದೇವೆ. ಪರೀಕ್ಷೆಗಳ ಕಾರಣ ನಾವು ಮಾನಸಿಕ ಸಮತೋಲನ ಕಳೆದುಕೊಂಡು ಉದ್ವಿಗ್ನ ಸ್ಥಿತಿಗೆ ತಲುಪಿದ್ದೇವೆ. ಬದುಕನ್ನು ಬದಲಿಸುವುದು ಮತ್ತು ನಮ್ಮನ್ನು ಉನ್ನತಿಗೆ ಕರೆದೊಯ್ಯುವುದು ಸ್ಪರ್ಧಾತ್ಮಕ ಪರೀಕ್ಷೆಗಳೇ ಆದರೂ ನಾವೆಲ್ಲ ಸಮತೋಲಿತ, ಸಕಾರಾತ್ಮಕ ಚಿಂತನೆಗಳನ್ನು ನಡೆಸಬೇಕಾಗಿದೆ.

ಹಲವು ಒತ್ತಡಗಳ ನಡುವೆ ಸಮಚಿತ್ತವಾಗಿ ವ್ಯವಹರಿಸುವುದನ್ನು ಕಲಿಯಬೇಕಾಗಿದೆ. ಅತಿಯಾದ ಒತ್ತಡ. ಅನೇಕ ಅವಘಡಗಳನ್ನು ಉಂಟುಮಾಡಿದ ಉದಾಹರಣೆಗಳಿವೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಧನಾತ್ಮಕ ಅಂಶಗಳನ್ನು ಪ್ರಚೋದಿಸಿ ಒತ್ತಡದಿಂದ ಮುಕ್ತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಂತರಾಷ್ಟ್ರೀಯ ಜೆಸಿ ತರಬೇತುದಾರರಾದ ತನುಜಾ ಮಾಬೆನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗುರಿಯ ಕಡೆಗೆ ಸಾಗುವಾದ ಅನೇಕ ಅಡ್ಡಿ ತಡೆಗಳು ಸಾಮಾನ್ಯ. ಅದನ್ನು ಎದುರಿಸುವ ಮನಃಸ್ಥಿತಿ, ದೃಢ ನಿರ್ಧಾರ ನಮ್ಮದಾಗಿ, ಒತ್ತಡ – ನಿವಾರಣೆಯಾದಾಗ ನಮ್ಮ ಗುರಿ ಸಾಧನೆಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಆದರ್ಶ ಎಂ. ಕೆ. ಉಪಸ್ಥಿತರಿದ್ದರು ಮತ್ತು ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.