Categories
ಕೊಪ್ಪ

ಕೊಪ್ಪದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಕೊಪ್ಪದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
– ಶಾಲೆಯ ವಸತಿ ಗೃಹದಲ್ಲೇ ಘಟನೆ
– ಮೊರಾರ್ಜಿ ವಸತಿ ಶಾಲೆ ಆತ್ಮಹತ್ಯೆ ನಡುವೆ ಮತ್ತೊಂದು ದುರಂತ
– ಶೃಂಗೇರಿಯಲ್ಲಿ ಪ್ರಿಯತಮೆ ಕೊಲೆ ಮಾಡಿ ಸಿಕ್ಕಿ ಬಿದ್ದ!

NAMMUR EXPRESS NEWS – ಕೊಪ್ಪ: ಕೊಪ್ಪ ಪಟ್ಟಣದ ಹೊರ ವಲಯದಲ್ಲಿರುವ ವೆಂಕಟೇಶ್ವರ ವಿದ್ಯಾ ಮಂದಿರ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿ (ವಿ.ಎ) ರಮೇಶಪ್ಪ ಎಂಬುವವರ ಮಗ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜಿಎಸ್ ನಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆನ್ನಲ್ಲೆ ಈ ಘಟನೆ ನಡೆದಿದೆ.

ಪ್ರಿಯತಮೆ ಮರ್ಡರ್ ಮಾಡಿ ಹೂತು ಹಾಕಿದ್ದವ ಅರೆಸ್ಟ್!

ಮೂರು ತಿಂಗಳ ಹಿಂದೆ ಕೊಲೆ ಮಾಡಿ ಶವವನ್ನು ಮನೆಯ ಸಮೀಪ ಹೂತುಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದ್ದು ಪೊಲೀಸರು ಆರೋಪಿಯ ಕಾಲ್ ರೆಕಾರ್ಡ್ ಮೂಲಕ ಸೆರೆ ಹಿಡಿದಿದ್ದಾರೆ.
ವಾಸಂತಿ (42) ಕೊಲೆಯಾಗಿರುವ ಮಹಿಳೆ. ಎಪ್ರಿಲ್ 29ರ ಬೆಳಿಗ್ಗೆ, ಶೃಂಗೇರಿ ತಾಲ್ಲೂಕಿನ ತ್ಯಾವಣ ಸಮೀಪದ ವಾಸಂತಿ ಮನೆ ಬಿಟ್ಟು ಹೋಗಿದ್ದಳು. ಆ ಬಳಿಕ ಪುತ್ರ ನವೀನ್ ಇಲ್ಲೇ ಎಲ್ಲಾದರೂ ಸಂಬಂಧಿಗಳ ಮನೆಗೆ ಹೋಗಿರಬಹುದು ಎಂದು ಹುಡುಕಾಡಿದ್ದಾರೆ. ಹತ್ತು ದಿನಗಳ ಬಳಿಕವೂ ಕಾಣೆಯಾದ ತನ್ನ ತಾಯಿಯ ಕುರಿತಂತೆ ಸುಳಿವು ಸಿಗದ ಹಿನ್ನಲೆ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಳಸ ಮೂಲದ ಪ್ರಕಾಶ್ (29) ತ್ಯಾವಣದ ಪ್ಯಾಂಟೇಶನ್ ಒಂದರಲ್ಲಿ ಕೆಲಸಕ್ಕೆ ಇದ್ದ. ಕಳೆದ ಒಂದು ವರ್ಷದಿಂದ ಆರೋಪಿ ಪ್ರಕಾಶ್ ವಾಸಂತಿ ಜೊತೆಗೆ ಸಂಪರ್ಕದಲ್ಲಿದ್ದ. ಮಾರ್ಚ್ 17ನೇ ತಾರೀಖು ಪ್ರಕಾಶ್ ಬೇರೊಬ್ಬರ ಜೊತೆ ಮದುವೆಯಾಗಿದ್ದ ಆ ಬಳಿಕ ವಾಸಂತಿ ಪ್ರಕಾಶ್ ಗೆ, ತನ್ನನ್ನು ಭೇಟಿಯಾಗಲು ತಿಳಿಸಿದ್ದಾಳೆ. ನನ್ನ ಜೊತೆ ಸಂಬಂಧ ಹೊಂದಿದ್ದು, ಹೇಗೆ ಬೇರೆಯವರನ್ನ ಮದುವೆಯಾಗಿದ್ದೀಯಾ, ನಾನು ಈಗ ವಿಷ ಕುಡಿತೀನಿ ಎಂದು ಹೆದರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ಕೋಪಗೊಂಡ ಪ್ರಕಾಶ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಲವಾಗಿ ಹೊಡೆತ ಬಿದ್ದ ಹಿನ್ನಲೆ ವಾಸಂತಿ ಜ್ಞಾನ ತಪ್ಪಿದ್ದಾಳೆ. ಬಳಿಕ ಪ್ರಕಾಶ್ ಆಕೆಗೆ ನೀರು ಕುಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಎದ್ದೇಳದ್ದನ್ನು ಕಂಡ ಪ್ರಕಾಶ್ ಗೆ ವಾಸಂತಿ ಸತ್ತಿರೋದು ವಿಚಾರ ತಿಳಿದಿದೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.