Categories
ಕೊಪ್ಪ

ಕೊಪ್ಪದಲ್ಲಿ ಅನುಶ್ರೀ ಮಾತಿಗೆ ಜನರು ಫಿದಾ..!

ಕೊಪ್ಪದಲ್ಲಿ ಅನುಶ್ರೀ ಮಾತಿಗೆ ಜನರು ಫಿದಾ..!
– ಕೊಪ್ಪ ಉತ್ಸವಕ್ಕೆ 5 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ
– ಕ್ರಿಯೇಟಿವ್ ಕಾಲೇಜು ಸಂಸ್ಥಾಪಕ ಎಸ್. ಎಲ್. ಅಶ್ವಥ್ ಭಾಷಣಕ್ಕೆ ಜನರ ಮೆಚ್ಚುಗೆ
– ಹಾಡು, ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್

NAMMUR EXPRESS NEWS
ಕೊಪ್ಪ: ಕೊಪ್ಪದಲ್ಲಿ ನಡೆಯುತ್ತಿರುವ ಕೊಪ್ಪ ಉತ್ಸವದಲ್ಲಿ ಜ.18ರಂದು ಖ್ಯಾತ ನಿರೂಪಕಿ ಅನುಶ್ರೀ ಅವರು ಜನರಿಗೆ ಮಾತಿನ ಮೋಡಿ ಮಾಡಿದರು. ಕೊಪ್ಪದ ಜಯಪುರ ರಸ್ತೆಯ ಅನ್ನಪೂರ್ಣ ಲೇ ಔಟಿನಲ್ಲಿ ಗುರುವಾರ ರಾತ್ರಿ ಸುಮಾರು 5000ಕ್ಕೂ ಹೆಚ್ಚು ಜನ ಕೊಪ್ಪ ಉತ್ಸವದಲ್ಲಿ ಭಾಗಿಯಾದರು. ತಾಜ್ ಇವೆಂಟ್ಸ್ ಮತ್ತು ಖ್ಯಾತ ಗಾಯಕಿ ನದೀರಾ ಬಾನು ಅವರ ಸಂಗೀತ ಜನಮನ ಸೆಳೆಯಿತು. ಇಡೀ ಕಾರ್ಯಕ್ರಮದಲ್ಲಿ ಅನುಶ್ರೀ ಅವರ ಮಾತು, ಹಾಡು, ಡಾನ್ಸ್ ಗಮನ ಸೆಳೆಯಿತು.
ನಿರೂಪಕಿ ಅನುಶ್ರೀ ಮಾತನಾಡಿ, ಕೊಪ್ಪದಂತಹ ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಅಸಮಾನ್ಯದ ಕೆಲಸ. ಸಿದ್ದಿಕ್ ಅವರ ಸೇವೆಗೆ ನಾವೆಲ್ಲರೂ ಆಭಾರಿಯಾಗಬೇಕು. ಜೊತೆಗೆ ಅವರ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು. ಕೊಪ್ಪ, ಮಲೆನಾಡು ಅಂದರೆ ನನಗೆ ಇಷ್ಟ. ಪ್ರವಾಸಿಗರ ಸ್ವರ್ಗ ಮಲೆನಾಡು ಎಂದರು.

ಅಶ್ವಥ್ ಅವರ ಮಾತಿಗೆ ತಲೆದೂಗಿದ ಜನ!

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಕೊಪ್ಪ ತಾಲೂಕು ಭಂಡಿಗಡಿ ಸಮೀಪದ ಸಕ್ರೆಬೈಲಿನ ಅಶ್ವಥ್ ಎಸ್ ಎಲ್ ಅವರು, ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಪ್ರೇರಣಾದಾಯಕ ಹಾಗೂ ಸಾಂಸ್ಕೃತಿಕ ಸೊಗಡಿನ ಮಾತಿನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಸನ್ಮಾನದ ಬಳಿಕ ಮಾತನಾಡಿದ ಅಶ್ವಥ್ ಎಸ್.ಎಲ್ ಅವರು ಕೊಪ್ಪದಂತಹ ತಾಲೂಕಿನಲ್ಲಿ ಇಂತಹ ದೊಡ್ಡ ವೇದಿಕೆಗಳು ಎಲ್ಲರಿಗೂ ಸಿಕ್ಕಿರುವುದು ಸಂತಸದ ವಿಚಾರ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವೆಲ್ಲರೂ ಸೇರಿ ಬೆಳೆಸಬೇಕಿದೆ. ಮುಂದಿನ ತಲೆಮಾರಿಗೆ ಇಂತಹ ಕಾರ್ಯಕ್ರಮಗಳನ್ನು ನಾವು ತಲುಪಿಸಬೇಕಿದೆ. ಜೊತೆಗೆ ಕೊಪ್ಪ ಅನೇಕ ಸಾಧಕರ ತವರೂರು. ಹೀಗಾಗಿ ನಮ್ಮ ಊರಿನ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಮಲೆನಾಡಿನವರು ನಂಬಿಕೆಯ ಜನ. ಇದು ನಮ್ಮ ಹೆಮ್ಮೆ. ಮಲೆನಾಡಿನ ಮಣ್ಣು, ಪರಿಸರ, ಪ್ರಕೃತಿ ಎಲ್ಲವೂ ಶಕ್ತಿಯುತವಾದುದು. ಕುವೆಂಪು ಅವರು ಹುಟ್ಟಿದ ಮಣ್ಣಲ್ಲಿ ನಾವೆಲ್ಲ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಮಲೆನಾಡಿನ ಶಾಲೆಗಳಿಗೆ ನಮ್ಮ ಪುಸ್ತಕ ಮನೆ ಮೂಲಕ ಪುಸ್ತಕ ಸೇವೆ ನೀಡುತ್ತೇವೆ. ನಾವೆಲ್ಲ ಸೇರಿ ಸಂಸ್ಕೃತಿ ಕಲೆ ಉಳಿಸೋಣ ಎಂದರು.

ಗಣ್ಯರಿಗೆ ಸನ್ಮಾನ: ಕಾರ್ಯಕ್ರಮಕ್ಕೆ ಮೆಚ್ಚುಗೆ

ಅಧ್ಯಕ್ಷತೆ ವಹಿಸಿ, ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾನಿ ಕೌರಿ ಪ್ರಕಾಶ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ಸದಾ ಪೋಷಿಸಬೇಕು. ಅನುಶ್ರೀ ಅಂತಹ ನಟಿ ನಮ್ಮೂರಿಗೆ ಬಂದಿರುವುದು ಹೆಮ್ಮೆ ಎಂದರು. ಕಾರ್ಯಕ್ರಮದಲ್ಲಿ ಅನ್ನಪೂರ್ಣ ಸೇಲ್ಸ್ ಮುಖ್ಯಸ್ಥ ನವೀನ್ ಕುಮಾರ್, ಕಾರ್ಯಕರ್ತರ ಪತ್ರಕರ್ತರ ಸಂಘ ಜಿನೇಶ್ ಇರ್ವತ್ತೂರು, ಸರಸ್ವತಿ, ಮೈತ್ರಾ ಗಣೇಶ್, ಕುಂದಾಪುರ ಪ್ರಾರ್ಥನಾ ಪತ್ರಿಕೆ ಸಂಪಾದಕರಾದ ಭಾಸ್ಕರ್ ಶೆಟ್ಟಿ ಪ್ರಕಾಶ್, ಡಿಎಸ್ಎಸ್ ಪ್ರಮುಖರಾದ ಡಾ. ರಾಜಶಂಕರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಬೃಹತ್ ವೇದಿಕೆಯಲ್ಲಿ ವಿಶ್ವ ಮಾನವ ಕನ್ನಡ ವೇದಿಕೆ, ಪುನೀತ್ ಬ್ರಿಗೇಡ್ ಪ್ರಮುಖರಾದ ಸುಧಾಕರ್ ತಟ್ಟಾಪುರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಕಲಾವಿದರಾದ ಸಮೃದ್ ಹಾಗೂ ಸಂಪದ ಅವರು ನೃತ್ಯ ಪ್ರದರ್ಶನ ಮಾಡಿದರು.

ಕೇಕೆ, ಶಿಳ್ಳೆ, ಸೆಲ್ಫಿಗೆ ಮುಗಿಬಿದ್ದ ಜನ!

ಅನುಶ್ರೀ ಅವರನ್ನು ನೋಡಲು ಸಾವಿರಾರು ಜನ ಆಗಮಿಸಿದರು. ಜೊತೆಗೆ ಅವರ ಮಾತನ್ನು ಕೇಳಿ ಕೇಕೆ, ಶಿಲ್ಲೆ ಹಾಕಿದರು. ಮಕ್ಕಳು ಸೇರಿದಂತೆ ಅನೇಕರು ಸೆಲ್ಫಿಗಳನ್ನು ತೆಗೆದುಕೊಂಡರು. ಅನುಶ್ರೀ ಕೂಡ ಹಾಡು ಹಾಡಿ ಹಾಡಿಗೆ ಮಕ್ಕಳ ಜತೆ ಹೆಜ್ಜೆ ಹಾಕಿದರು. ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ಕೊಪ್ಪದ ತಾಜ್ ಆರ್ಕೆಸ್ಟ್ರಾ ಅವರಿಂದ ಗಾಯನ ನಡೆಯಿತು. ಖ್ಯಾತ ಗಾಯಕರು ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೊಪ್ಪದ ಅನ್ ಕಾಮನ್ ಹೈಕ್ಳು ಯೂಟ್ಯೂಬ್ ವತಿಯಿಂದ ವೃಕ್ಷ ಶಾರ್ಟ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಯಿತು.

Koppa Usthava 1
Koppa Usthava
Koppa Usthava 3
Koppa Usthava 2
Koppa Usthava 13
Koppa Usthava 11
Koppa Usthava 10
Koppa Usthava 9
Koppa Usthava 8
Koppa Usthava 7
Koppa Usthava 12
Koppa Usthava 6
Koppa Usthava 5
Koppa Usthava 4
Koppa Usthava 14

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.