ಬೊಮ್ಮಲಾಪುರ ಶ್ರೀ ತ್ರಿಪುರಾಂತಕೀ ಅಮ್ಮನವರ ಜಾತ್ರೆ!
– ಮೇ 4ರಿಂದ 8 ರವರೆಗೆ ವಿವಿಧ ರಥೋತ್ಸವ ಕಾರ್ಯಕ್ರಮ
– ಕೊಪ್ಪ ತಾಲ್ಲೂಕಿನ ಪ್ರಸಿದ್ಧ ದೇವಾಲಯದಲ್ಲಿ ಸಂಭ್ರಮ
NAMMUR EXPRESS NEWS
ಶ್ರೀ ತ್ರಿಪುರಾಂತಕೀ ಅಮ್ಮನವರ ರಥೋತ್ಸವ ಬೊಮ್ಮಲಾಪುರ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಶ್ರೀ ತ್ರಿಪುರಾಂತಕೀ ಅಮ್ಮನವರ ಸನ್ನಿಧಾನದಿಂದ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ 1947ನೇ ಶ್ರೀ ವಿಶ್ವಾವಸು ನಾಮ ಸಂ|ದ ವೈಶಾಖ ಶುದ್ಧ ಅಷ್ಟಮಿ ಭಾನುವಾರದಿಂದ ಏಕಾದಶಿ ಗುರುವಾರದವರೆಗೂ (04.05.2025 ರಿಂದ 08.05.2025) ಶ್ರೀ ಅಮ್ಮನವರ ಸನ್ನಿಧಾನದಲ್ಲಿ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ.
ವೈಶಾಖ ಶುದ್ಧ ಸಪ್ತಮಿ ಭಾನುವಾರ : 04-05-2025
ಶ್ರೀ ಸಿದ್ಧಿವಿನಾಯಕ ಪೂಜೆ, ವೈಶಾಖ ಶುದ್ಧ ಅಷ್ಟಮಿ, ಸೋಮವಾರ: 05-05-2025 ಧ್ವಜಾರೋಹಣ, ವಸಂತಪೂಜೆ,ಸಂತರ್ಪಣೆ,ರಾತ್ರಿ ದೀಪಾರಾಧನೆ ವೈಶಾಖ ಶುದ್ಧ ನವಮಿ, ಮಂಗಳವಾರ: 06-05-2025
ಅಭಿಜಿನ್ ಮುಹೂರ್ತದಲ್ಲಿ ಶ್ರೀಮನ್ಮಹಾರಥಾರೋಹಣ ವೈಶಾಖ ಶುದ್ಧ ದಶಮಿ, ಬುಧವಾರ : 07.05.2025 ಕುಂಕುಮೋತ್ಸವ,ಅವಕೃತ ಸ್ನಾನ (ವಸಂತ ಪೂಜೆ) ಸುವಾಸಿನೀ ಪೂಜೆ, ಸಂತರ್ಪಣೆ,ರಾತ್ರಿ ಮಹೋತ್ಸವ, ವೈಶಾಖ ಶುದ್ಧ ಏಕಾದಶಿ, ಗುರುವಾರ: 08.05.2025
ಶುದ್ಧ ಸಂಪ್ರೋಕ್ಷಣೆ, ಕಲಶಾಭಿಶೇಕ (ವಸಂತ ಪೂಜೆ) ತುಲಾ ಭಾರ, ಸಂತರ್ಪಣೆ, ರಾತ್ರಿ ದೀಪಾರಾಧನೆ ಈ ರೀತಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ನೆರವೇರುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಕೂಡ ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ತಹಶೀಲ್ದಾರ್ ಕೊಪ್ಪ, ಅಧ್ಯಕ್ಷರು ಮತ್ತು ಸದಸ್ಯರು ಅಭಿವೃದ್ಧಿ ಸಂಸ್ಥೆ ಶ್ರೀ ತ್ರಿಪುರಾಂತಕೀ ಅಮ್ಮನವರ ಸೇವಾ ಸಂಘ, ಅಧ್ಯಕ್ಷರು ಮತ್ತು ಸದಸ್ಯರು,ವ್ಯವಸ್ಥಾಪನಾ ಸಮಿತಿ
ಶ್ರೀ ತ್ರಿಪುರಾಂತಕೀ ಅಮ್ಮನವರ ದೇವಸ್ಥಾನ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
