ಸಹಕಾರಿ ನಾಯಕ ದಿನೇಶ್ ಹೊಸೂರು ಕೊಪ್ಪ ಬಿಜೆಪಿ ಸಾರಥಿ!
– ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ
– ಪಕ್ಷ ಮತ್ತೆ ಗೆಲ್ಲಿಸಲು ಅವಕಾಶ
NAMMUR EXPRESS NEWS
ಕೊಪ್ಪ: ಕೊಪ್ಪ ಮಂಡಲ ನೂತನ ಬಿಜೆಪಿ ಅಧ್ಯಕ್ಷರಾಗಿ ಸಹಕಾರಿ, ಬಿಜೆಪಿ ನಾಯಕ ಹೊಸೂರು ದಿನೇಶ್ ಆಯ್ಕೆ ಆಗಿದ್ದು ಕೊಪ್ಪ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. 2006 ನೇ ಇಸವಿಯಲ್ಲಿ ಕೊಪ್ಪ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, 2009 ರಲ್ಲಿ ಶೃಂಗೇರಿ ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷರಾಗಿ, 2016 ನೇ ಇಸವಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಗಳಾಗಿ 2022 ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ, ಸಹಕಾರಿ ಕ್ಷೇತ್ರಗಳಾದ ಕೊಪ್ಪ ಟಿಎಪಿಸಿ ಎಂಎಸ್ ವಿಎಸ್‌ಎಸ್ ಇದರ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕೃಷಿ ಹಾಗೂ ಸಹಕಾರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅತೀವ ಕಾಳಜಿಯನ್ನು ವಹಿಸಿ, ಹಗಲು ರಾತ್ರಿ ಎನ್ನದೆ ಪಕ್ಷ ಸಂಘಟನೆ ಯಲ್ಲಿ ತೊಡಗಿಕೊಂಡಿರುವ ದಿನೇಶ್ ನೂತನ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆಗಳು.