ಕೊಪ್ಪದಲ್ಲಿನ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ
* ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಿಂದ ಭಯಾನಕ ವರದಿ
* ವರದಿಯಿಂದ ಸಾರ್ವಜನಿಕರಲ್ಲಿ ಆತಂಕ, ಕೊಪ್ಪವನ್ನು ವೀರಭದ್ರನೇ ಕಾಪಾಡಬೇಕು
NAMMMUR EXPRESS NEWS
ಕೊಪ್ಪ: ನಗರದ ಎಲ್ಲೆಡೆ ದೊರೆಯುವ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ ನೀಡಿದೆ. ಇದರಿಂದ ಕೊಪ್ಪದ ಸಾರ್ವಜನಿಕರು ನಲ್ಲಿಯಲ್ಲಿ ಬರುವ ಕುಡಿಯುವ ನೀರನ್ನು ಕುಡಿಯುವ ಮುನ್ನ ಯೋಚಿಸಬೇಕಿದೆ.
ಇತ್ತೀಚೆಗೆ ನಲ್ಲಿಯಲ್ಲಿ ನೀರು ಕಲ್ಮಶಗಳನ್ನು ಹೊತ್ತು ಬಂದಾಗ ಸಾರ್ವಜನಿಕರು ಗಾಬರಿಯಾಗಿ, ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಿದ್ದರು, ಈಗ ಅದರ ವರದಿ ಬಂದಿದೆ.
ಮತ್ತೊಮ್ಮೆ ಕೊಳಕು ನೀರನ್ನು ವಿತರಿಸುವಲ್ಲಿನ ಬೇಜವಬ್ದಾರಿ, ನಿರ್ಲಕ್ಷ, ನಿಷ್ಕ್ರಿಯತೆಯನ್ನು ಪಟ್ಟಣ ಪಂಚಾಯ್ತಿ ತೋರಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈಗ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ಬ್ಯಾಕ್ಟೀರಿಯಗಳ ಕರ್ಮಕಾಂಡ ಬಯಲಾಗಿದೆ.
ಇನ್ನಾದರೂ ಕೊಪ್ಪದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಗೌರವಾನ್ವಿತ ಪಂಚಾಯತಿ ಸದಸ್ಯರು ಮತ್ತು ಗೌರವಾನ್ವಿತ ಅಧಿಕಾರಿಗಳು ಏನಾದರು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.
ಈ ವರದಿಯಿಂದ ಆತಂಕಗೊಂಡ ಸಾರ್ವಜನಿಕರು ಕೊಪ್ಪವನ್ನು ಕ್ಷೇತ್ರ ದೇವರಾದ ವೀರಭದ್ರನೇ ಕಾಪಾಡಬೇಕು ಎಂದು ಪ್ರಾರ್ಥಿಸಿದ್ದಾರೆ.
