ಕೊಪ್ಪದಲ್ಲಿ ಗಣಪತಿ-ದೇವಿ ಸಮಾಗಮ!
– ಭಕ್ತರ ಸಾಲು: ಅದ್ದೂರಿ ದಸರಾ ಆಚರಣೆ
– 46ನೇ ವರ್ಷದ ವೈಭವದ ಶ್ರೀ ಗಣೇಶ – ದುರ್ಗಾ ಮಹೋತ್ಸವದ ಆಹ್ವಾನ
NAMMUR EXPRESS NEWS
ಕೊಪ್ಪ: ಶ್ರೀ ಬಲಮುರಿ ವೀರ ಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ಶ್ರೀ ಗಣೇಶ – ದುರ್ಗಾ ದೇವಸ್ಥಾನ ಸೇವಾ ಟ್ರಸ್ಟ್, ಮಾರ್ಕೆಟ್ ರಸ್ತೆ ಕೊಪ್ಪ ಇವರ ವತಿಯಿಂದ 46ನೇ ವರ್ಷದ ವೈಭವದ ಶ್ರೀ ಗಣೇಶ – ದುರ್ಗಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಸೆ.18ರಿಂದ ಅ.24ರ ಮಂಗಳವಾರದವರೆಗೆ 37 ದಿನಗಳ ಪರ್ಯಂತ ಶ್ರೀ ಗಣೇಶ ದುರ್ಗಾ ಮಹೋತ್ಸವವನ್ನು ವಿವಿಧ ಧಾರ್ಮಿಕ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ದಿನಂಪ್ರತಿ ನಡೆಯುವ ಮಹಾಮಂಗಳಾರತಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ನವರಾತ್ರಿಯಲ್ಲಿ ನಡೆಯುವ ಕುಂಕುಮಾರ್ಚನೆ ಸಹಿತ ಲಕ್ಷ ಪುಷ್ಪಾರ್ಚನೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮೋದಕ ಹವನ, ಅನ್ನ ಸಂತರ್ಪಣೆ, ಚಂಡಿಕಾಯಾಗ, ಮೂಡು ಗಣಪತಿ ಮಹಾರಂಗ ಪೂಜೆ ನಡೆಯುತ್ತಿದ್ದು, ಆಕರ್ಷಕ ದೀಪೋತ್ಸವ, ಓಕುಳಿ ಹಾಗೂ ವಿಸರ್ಜನ ಮಹೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಕಾರ್ಯಕ್ರಮ ಬಸ್ ನಿಲ್ದಾಣ ಎದುರಿನ ಬೃಹತ್ ವೇದಿಕೆಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಾವಿರಾರು ಮಂದಿ ಈ ದಸರಾದಲ್ಲಿ ಭಾಗಿಯಾಗುತ್ತಿದ್ದಾರೆ. ಆಯೋಜಕ ಸಮಿತಿ ಸರ್ವರನ್ನು ಸ್ವಾಗತಿಸಿದೆ.
ಗಮನ ಸೆಳೆದ ಗಣೇಶ, ದುರ್ಗಿ!
ಗಣೇಶ ಹಬ್ಬದಿಂದ ಇಲ್ಲಿಯವರೆಗೆ ಗಣೇಶ ಕೂರಿಸೋದು ಕೊಪ್ಪದ ವಾಡಿಕೆ. ಇದು ಇಡಿ ಜಿಲ್ಲೆಯಲ್ಲೇ ಗಮನ ಸೆಳೆದ ಗಣಪತಿ. ಅಚ್ಚರಿ ಎಂದರೆ ಗಣೇಶನ ಜತೆ ದುರ್ಗಿ ಕೂರಿಸಿ ಸಂಭ್ರಮಿಸೋದು ಇಲ್ಲಿನ ವಿಶೇಷ.