ಶೃಂಗೇರಿಯಲ್ಲಿ ಬದಕು ಕಸಿದ ಹೊಳೆಕರಾಬು,ಅಂಗಡಿಗಳು ನೆಲಸಮ
* ಶೃಂಗೇರಿ ಗಾಂಧಿಮೈದಾನದಲ್ಲಿದ್ದ ಅಂಗಡಿಗಳು
* ತೆರವಿಗೆ ತೀವ್ರ ವಿರೋಧ,ಸ್ಥಳದಲ್ಲಿ ಬಿಗುವಿನ ವಾತಾವರಣ
NAMMMUR EXPRESS NEWS
ಶೃಂಗೇರಿ: ಪಟ್ಟಣದ ಗಾಂಧೀಮೈದಾನದಲ್ಲಿದ್ದ ಸುಮಾರು 27 ಅಂಗಡಿಗಳನ್ನು ಇಂದು ನೆಲಸಮ ಮಾಡಲಾಯಿತು. ಸುಮಾರು ವರ್ಷಗಳಿಂದ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸಿಕೊಂಡು ಬಂದಿದ್ದ ಕುಟುಂಬಗಳು ಕಂಗಾಲಾಗಿವೆ.
ಕಳೆದ ಕೆಲವು ವರ್ಷಗಳಿಂದ ಗಾಂಧೀಮೈದಾನದ ಅಂಗಡಿಯ ವರ್ತಕರು ಹಾಗೂ ಜಿಲ್ಲಾಡಳಿತದ ನಡುವೆ ತಿಕ್ಕಾಟಕ್ಕೆ ಕಾರಣವಾಗಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಕೋರ್ಟ್ ವರ್ತಕರ ಮೇಲ್ಮನವಿಯನ್ನು ತಿರಸ್ಕರಿಸಿದ ಪರಿಣಾಮ ಅಧಿಕಾರಿಗಳು ಅಂಗಡಿಗಳನ್ನು ನೆಲಸಮಗೊಳಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ವರ್ತರಕರು ಅವರ ಕುಟುಂಬಗಳು ಧರಣಿ ಕೂತು ಆದೇಶ ಪ್ರತಿ ತೋರಿಸುವಂತೆ ಪಟ್ಟುಹಿಡಿದರು. ನಂತರ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಪ ಪಂ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ 10 ಜನರನ್ನು ವಶಕ್ಕೆ ಪಡೆದು ಪೊಲೀಸರ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು.
* ವರ್ತಕರು ಹೇಳೋದೇನು?
ಈ ಹಿಂದಿನ ತೆರವು ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು ಆದರೆ ಅಲ್ಲಿ ಹತ್ತು ವಾರ ಕಾಲಾವಕಾಶ ನೀಡಿ ಜಿಲ್ಲಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಸೂಚಿಸಿತ್ತು ಅದರಂತೆ 6 ವಾರಗಳ ಬಳಿಕ ಆದೇಶ ಪ್ರತಿ ಸಿಕ್ಕ ತಕ್ಷಣ ಜಿಲ್ಲಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದೇವೆ,ಅ.14 ಕ್ಕೆ ಕೋರ್ಟ್ ರಜೆ ಇದ್ದಿದ್ದರಿಂದ ಮತ್ತು ಜಡ್ಜ್ ಇಲ್ಲದ ಕಾರಣ ಅ.23 ರಂದು ಕೋರ್ಟ್ನಲ್ಲಿ ಕೇಸ್ಗೆ ಸಮಯ ನಿಗದಿಯಾಗಿತ್ತು, ಇದನ್ನು ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನಮಗೆ ಹೈಕೋರ್ಟ್ ಆದೇಶವಿದೆ,ಡಿ ಸಿ ಆದೇಶವಿದೆ ಎಂದು ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಬಳಿ ಕೋರ್ಟ್ ಆದೇಶದ ಪ್ರತಿ ಕೇಳಿದಾಗ ಅವರು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಮೇಲೆ ಹೇಳಿದ್ದಾರೆ, ಅವರಿಗೂ ಈ ಜಾಗಕ್ಕೂ ಸಂಬಂಧವಿಲ್ಲ ಎಂದಾಗ ಡಿ ಸಿ ಆದೇಶವೆಂದು ಹೇಳಿದರು,ಆ ಆದೇಶದ ಪ್ರತಿ ಕೇಳಿದಾಗ ಅದು ಅವರ ಬಳಿ ಇರಲಿಲ್ಲ ಮತ್ತು ಕೋರ್ಟ್ನಲ್ಲಿ ಕೇಸ್ ಇದ್ದರೂ ಅದನ್ನು ಉಲ್ಲಂಘಿಸಿ ಅಂಗಡಿಗಳ ತೆರವು ಮಾಡಲಾಗಿದೆ. ಈ ಮೂಲಕ ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದ ನೂರಾರು ಜನರನ್ನು ಬೀದಿಗೆ ತಂದಿದ್ದಾರೆ,ಉದ್ದೇಶ ಪೂರ್ವಕವಾಗಿ ಅಂಗಡಿಗಳನ್ನು ತೆರವುಗೊಳಿಸಿರುವ ಈ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಂತ ಶಾಸಕರಿಗೂ ಅವರ ಹಿಂಬಾಲಕರಿಗೂ ಒಳ್ಳೆಯದಾಗಲಿ,ಇನ್ನು ಆ ದೇವರು ನೋಡಿಕೊಳ್ಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
* ಶಾಸಕರ ವಿರುದ್ಧ ಗುಡುಗಿದ ಬಿಜೆಪಿ ನಾಯಕರು
30-40 ವರ್ಷಗಳಿಂದ ಅಂಗಡಿ ಹಾಕಿಕೊಂಡು ಸಣ್ಣ ಮಟ್ಟದ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಬಡ ವ್ಯಾಪಾರಿಗಳ ಮೇಲೆ ಶಾಸಕರು ಹಾಗೂ ಅಧಿಕಾರಿಗಳು ದರ್ಪ ತೋರಿಸಿದ್ದಾರೆ.
ಶಾಸಕರು ಈ ಪ್ರಕರಣದಲ್ಲಿ ತೋರಿದ ಆಸಕ್ತಿಯನ್ನು ಕ್ಷೇತ್ರದ ಅಭಿವೃದ್ಧಿ ಹಾಗೂ ಕ್ಷೇತ್ರದ ರಸ್ತೆಯಲ್ಲಿನ ಗುಂಡಿಯನ್ನು ಮುಚ್ಚುವುದರಲ್ಲಿ ತೋರಿಸಿದ್ದರೆ ಇಷ್ಟೋತ್ತಿಗೆ ತುಂಬಾ ಕೆಲಸಗಳಾಗುತ್ತಿತ್ತು. ಶಾಸಕರ ದ್ವೇಷದ ರಾಜಕಾರಣದ ನಡೆಯನ್ನು ನಾವು ಖಂಡಿಸುತ್ತೇವೆ, ಬಿಜೆಪಿ ಈ ಬಗ್ಗೆ ಸದಾ ನೊಂದ ವರ್ತಕರ ಪರ ನಿಲ್ಲುತ್ತದೆ ಎಂದು ಬಿಜೆಪಿ ಶೃಂಗೇರಿ ತಾಲೂಕಿನ ಪ್ರಮುಖರು ಹೇಳಿದರು.
