Categories
ಲೈಫು ಇಷ್ಟೇನೆ

ಲೈಫು ಇಷ್ಟೇನೇ.. ಸಾವಿಗೆ ಗ್ಯಾರಂಟಿ ಇಲ್ಲ!

ಲೈಫು ಇಷ್ಟೇನೇ.. ಸಾವಿಗೆ ಗ್ಯಾರಂಟಿ ಇಲ್ಲ!
– ಮೂರು ದಿನದಲ್ಲಿ ಒಳ್ಳೆ ಬದುಕು ಸಾಗಿಸಿ ಅಷ್ಟೇ..
– ಇತ್ತೀಚಿನ ದುರಂತಗಳ ನೋಡಿ.. ಸಾವು ಎಷ್ಟು ಸುಲಭ!?

NAMMUR EXPRESS NEWS
ಸಾವು ಸಹಜ. ಅದರೆ ಇತ್ತೀಚಿಗೆ ಸಾವು ಯಾವ ಕ್ಷಣದಲ್ಲೂ ಆಗಬಹುದು. ಹೇಗಾದರೂ ಆಗಬಹುದು. ಅದಕ್ಕೆ ಯಾವುದೇ ಕಾರಣ ಬೇಡ..!
ಜೀವನದಲ್ಲಿ ಇದ್ದಾಗ ಸ್ವಾರ್ಥ, ಹಣದ ದಾಹ, ಅಧಿಕಾರ, ಅಹಂ ಎಲ್ಲವೂ ಈಗ ಕ್ಷಣಿಕ. ಯಾಕೆಂದ್ರೆ ಇತ್ತೀಚಿಗೆ ಸಾವು ಅನ್ನೋದು ಕಣ್ಣು ಮುಂದೆಯೇ ಇರುತ್ತದೆ. ಇರುವ ಮೂರು ದಿನದಲ್ಲಿ ಒಳ್ಳೆ ಬದುಕು ಸಾಗಿಸಿ ಅಷ್ಟೇ.
ಕರೋನಾ ನಿಜವಾದ ಬದುಕಿನ ದಿನಗಳನ್ನು ಕಲಿಸಿತು ಎನ್ನುವಷ್ಟರಲ್ಲಿ ಅದು ಮರೆತೇ ಹೋಯಿತು. ಈಗ ಮತ್ತೆ ಅದೇ ಅಹಂ ಕಾಣುತ್ತಿದೆ. ಮಾನವ ಪ್ರೀತಿ ಮರೆಯಾಗಿದೆ. ಪ್ರಾಮಾಣಿಕತೆ ಎಲ್ಲೋ ದೂರದಲ್ಲಿ ನಕ್ಷತ್ರ ಹೊಳೆದಂತೆ ಕಾಣುತ್ತಿದೆ.
ಇದೆಲ್ಲ ನೋಡುವಾಗ… ಇಂದು ಅತೀ ಹೆಚ್ಚು ಶೇರ್ ಆಗುತ್ತಿರುವ ಈ ಪೋಸ್ಟ್ ಸಾವಿನ ಬಾಗಿಲು ಎಲ್ಲರಿಗೂ, ಎಲ್ಲಿಯೂ, ಹೇಗೋ ತೆರೆದಿರುತ್ತದೆ ಎಂಬುದನ್ನು ಸಾಕ್ಷಿ ಮಾಡುತ್ತಿದೆ.

ಬದುಕು ಅದೆಷ್ಟು ವಿಚಿತ್ರ ಆಲ್ವಾ..?

ಟೂ‌ರ್ ಹೋಗ್ತಾರೆ ಟೆರರಿಸ್ಟ್ ಗುಂಡು ಹಾರಿಸಿ ಕೊಳ್ತಾರೆ. ಐಪಿಎಲ್ ವಿಜಯೋತ್ಸವಕ್ಕೋದ್ರೆ ಕಾಲ್ತುಳಿತಕ್ಕೆ ಸಿಕ್ಕು ಸಾಯ್ತಾರೆ. ಕೆಲಸಕ್ಕೋ, ರಜೆಗೋ ಅಂತ ವಿದೇಶಕ್ಕೆ ಹೊರಟರೆ, ವಿಮಾನವೇ ಪತನ ಆಗುತ್ತೆ. ಹಾಸ್ಟೆಲ್ ನಲ್ಲಿ ಓದಿದ್ದವರು ಊಟಕ್ಕೆ ಕುಳಿತ್ತಿದ್ರೆ ಮೇಲೆ ವಿಮಾನವೇ ಮೇಲಿಂದ ಅಪ್ಪಳಿಸುತ್ತೆ..! ಸಾವಿಗೆ ಲಾಜಿಕ್ ಇಲ್ಲ. ಈ ದಿನವೇ ನಮ್ಮದು ನಾಳೆ ಯಾರದೋ ಗೊತ್ತಿಲ್ಲ..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.