Categories
ಮಲ್ನಾಡ್

ಮಂಜುನಾಥ ಗೌಡರಿಗೆ “ಕಿಮ್ಮನೆ ಗುದ್ದು”!

  • ಕಾಂಗ್ರೆಸ್ ಪಕ್ಷಕ್ಕೆ ಬೇಡ: ಕಿಮ್ಮನೆ ಗುಟುರು
  • ಕಾಂಗ್ರೆಸ್ ನಾಯಕರ ಫೋಟೋ ಬಳಸಿ ಗಿಮಿಕ್

ತೀರ್ಥಹಳ್ಳಿ: ತೀರ್ಥಹಳ್ಳಿ ರಾಜಕೀಯದಲ್ಲಿ ತಮ್ಮದೇ ಹಿಡಿತ ಹೊಂದಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಮಂಜುನಾಥ ಗೌಡರ ನಡುವಿನ ಮುಸುಕಿನ ಗುದ್ದಾಟಕ್ಕೆ ಮತ್ತೆ ಇದೀಗ ವೇದಿಕೆ ಸೃಷ್ಟಿಯಾಗಿದೆ.


ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇತೃತ್ವದಲ್ಲಿ ನ.7ರಿಂದ ಆರಂಭವಾಗುವ ಕಸ್ತೂರಿ ರಂಗನ್ ವರದಿ ವಿರೋಧಿ ಪಾದಯಾತ್ರೆಯ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರ photo ಹಾಕಿ ಕಾಂಗ್ರೆಸ್ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕಸ್ತೂರಿ ರಂಗನ್ ವರದಿ ವಿರುದ್ದ ಬಿದರಗೋಡಿನಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆಯನ್ನು ಮುಂದೆ ದೆಹಲಿವರೆಗೆ ಮುಂದುವರಿಸಲಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಬೆಂಬಲ ಪಡೆದು ಮಾಡಲಿ. ಅವರುಗಳ photo ಹಾಕಲಿ. ಕಾಂಗ್ರೆಸ್ ಮುಖಂಡರ photo ಹಾಕಿ ಕಾಂಗ್ರೆಸ್ಸಿಗರನ್ನು ದಾರಿ ತಪ್ಪಿಸುವ ಅಗತ್ಯವಿಲ್ಲ ಎಂದು ಕಿಮ್ಮನೆ ಕಿಡಿಕಾರಿದ್ದಾರೆ. ಈ ಮೂಲಕ ಇಬ್ಬರು ನಾಯಕರ ಜಂಗೀಕುಸ್ತಿ ಶುರುವಾದಂತಾಗಿದೆ.


ಬಿಜೆಪಿಯ ಅಶೋಕ್ ಮೂರ್ತಿ, ಆರ್.ಮದನ್ ಅವರಿಗೆ ಮೋಸ ಮಾಡಿದ್ದಾಯಿತು. 2018ರಲ್ಲಿ ನನಗೆ ಮೋಸ ಮಾಡಿದ್ದಾಯಿತು. ಬಿಜೆಪಿಯವರು ಬಿಜೆಪಿಗೆ ಸೇರಿಸಿಕೊಳ್ಳಲು ತಿರಸ್ಕಾರ ಮಾಡಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ತಕ್ಷಣ ಜೆಡಿಎಸ್ ಬೇಡವಾಯಿತು, ಜೆಡಿಎಸ್‍ನಲ್ಲಿ ರಾಜಕೀಯ ಭವಿಷ್ಯ ಮಂಕಾಗಿದೆ ಎಂದು ತಿಳಿದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರಲ್ಲದೆ ಕಾಂಗ್ರೆಸ್‍ಗೆ ನೋ ಎಂಟ್ರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.


ಕಳೆದ 30 ವರ್ಷಗಳಿಂದ ಪ್ರತಿದಿನ ಡಿಸಿಸಿ ಬ್ಯಾಂಕ್‍ನಲ್ಲಿ ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿ ಸಾಯುವ ಹಂತಕ್ಕೆ ಬಂದಿದೆ. ದೀರ್ಘ ಕಾಲದ ನ್ಯಾಯಾಲಯದ ರಕ್ಷಣೆ ಪಡೆಯವುದು ಕಷ್ಟವೆಂದು 65ನೇ ವಯಸ್ಸಿನಲ್ಲಿ ಕಸ್ತೂರಿರಂಗನ್ ವರದಿ ನೆನಪಾದದ್ದು, ಹೋರಾಟದ ಅಗತ್ಯ ಕಂಡದ್ದು ಸಂತೋಷವೇ. ತೀರ್ಥಹಳ್ಳಿ ಜೆಡಿಎಸ್, ಕಟ್ಟಿ ಬೆಳೆಸಿ ಪುನಃ ಜೆಡಿಎಸ್ ಟಿಕೇಟ್ ಪಡೆದು ಶಾಸನಸಭೆಗೆ ಸ್ಪರ್ಧೆ ಮಾಡಿ ಜೆಡಿಎಸ್ ಸಿದ್ಧಾಂತವನ್ನು ನಾಡಿಗೆ ತಿಳಿಸಲಿ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಕ್ಕೂ ಮೋಸ ಮಾಡಿ, ಕೀರ್ತಿ ಪಡೆಯುವುದು ಬೇಡ. ಜೆಡಿಎಸ್ ಮನೆಯಲ್ಲಿ ಖಾಯಂ ಆಗಿ ವಾಸ ಮಾಡಲಿ ಎಂದು ಕಿಮ್ಮನೆ ರತ್ನಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ತೀರ್ಥಹಳ್ಳಿ ರಾಜಕಾರಣದಲ್ಲಿ ಮತ್ತೆ ಒಳ ಪೆಟ್ಟು ಶುರುವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.