- ಸಾವಿರ ಜನ ಸೇರುವ ನಿರೀಕ್ಷೆ
- ಮೊದಲ ಪಾದಯಾತ್ರೆಯಲ್ಲೇ ಜಯ
- ಬಿಜೆಪಿ ನಾಯಕರು ಕಾಣಲೇ ಇಲ್ಲ!
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಮಂಜುನಾಥ ಗೌಡ ಸಾರಥ್ಯದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮುಕ್ತಾಯವಾಗಲಿದೆ. ಬಹುತೇಕ ಯಶಸ್ವೀಯಾಗಿರುವ ಪಾದಯಾತ್ರೆ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ.
ಮೊದಲ ದಿನ ಬಿದರಗೋಡಿನಿಂದ ನಾಲೂರು ತಲುಪಿದ್ದ ಪಾದಯಾತ್ರೆ ಭಾನುವಾರ ನಾಲೂರುನಿಂದ ಶಿವರಾಜಪುರಕ್ಕೆ ಬಂದಿದೆ. ಇದೀಗ ಶಿವರಾಜ ಪುರದಿಂದ ತೀರ್ಥಹಳ್ಳಿ ತಾಲೂಕು ಕಚೇರಿಗೆ ಪಾದಯಾತ್ರೆ ಬರಲಿದ್ದು, ಸುಮಾರು 1000 ಜನ ಸೇರುವ ನಿರೀಕ್ಷೆ ಇದೆ.
ದೇವಸ್ಥಾನದಲ್ಲಿ ಪೂಜೆ!: ಶಿವರಾಜಪುರ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಪಾದಯಾತ್ರೆ ಪಟ್ಟಣಕ್ಕೆ ಬರಲಿದೆ.ಎಲ್ಲಾರನ್ನು ಮಂಜುನಾಥ ಗೌಡ ಸ್ವಾಗತಿಸಿದ್ದಾರೆ.
ಆಗುಂಬೆ ಹೋಬಳಿಯಲ್ಲಿ ನಡೆದ ಪಾದಯಾತ್ರೆಗೆ ಎಲ್ಲಾ ಪಕ್ಷದ ಮುಖಂಡರು ಸಾಥ್ ನೀಡಿದ್ದರು.
ಮೇಗರವಳ್ಳಿಯಲ್ಲಿ ಕರವೇ ಸಾಥ್: ಮೇಗರವಳ್ಳಿಯ ಅರೆಕಲ್ ವೃತ್ತದ ಬಳಿ ಕರವೇಯಿಂದ ಸ್ವಾಗತಿಸಲಾಯಿತು. ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ಸಭೆ ನಡೆಸಿದ್ದು ಕರವೇ ನಾಯಕರಾದ ಪಟೇಲ್ ವೆಂಕಟೇಶ್ ಹೆಗ್ಡೆ, ಹರ್ಷೇನ್ದ್ರ ಕುಮಾರ್ ಸೇರಿ ಅನೇಕರು ಇದ್ದರು. ಸುಮಾರು 40 ಕಿಮೀ ಪಾದಯಾತ್ರೆ ಮುಗಿದಿದ್ದು ಇಂದು 11 ಗಂಟೆಗೆ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಎಲ್ಲಾ ಹೋಬಳಿಯ ಕಾಂಗ್ರೆಸ್ ನಾಯಕರೂ ಭಾಗಿಯಾಗುವ ಸಾಧ್ಯತೆ ಇದೆ. ಆದರೆ ಬಿಜೆಪಿ ನಾಯಕರು ಎಲ್ಲಿಯೂ ಕಾಣಿಸಿಕೊಂಡಿಲ್ಲ.!.