Categories
ಮಲ್ನಾಡ್

ವಿನಯ್ ಗುರೂಜಿ ಬಗ್ಗೆ ಅಪಪ್ರಚಾರದ ವಿರುದ್ಧ ಭಕ್ತವೃಂದದ ಹೋರಾಟ!

  • ಶಿವಮೊಗ್ಗದಲ್ಲಿ ಭಾರೀ ಪ್ರತಿಭಟನೆ: ತಪ್ಪಿತಸ್ಥರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು

NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಅವಧೂತ ವಿನಯ್ ಗುರೂಜಿ ಕುರಿತ ಕೆಲಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವ ಸಾಮಾಜಿಕ ಮಾಧ್ಯಮ ಪೇಜ್ ಹಾಗೂ ಕೆಲ ನಕಲಿ ಪೇಜ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿ ಶಿವಮೊಗ್ಗದಲ್ಲಿ ವಿನಯ್ ಗೂರೂಜಿ ಭಕ್ತವೃಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೆಲವು ಸಾಮಾಜಿಕ ಜಾಲ ತಾಣ ಮಾಧ್ಯಮಗಳು, ಫೇಸ್ಬುಕ್ ನಕಲಿ ಪೇಜ್ಗಳು ಗುರೂಜಿ ವಿರುದ್ಧ ಇಲ್ಲ ಸಲ್ಲದ ಸುದ್ದಿ ಪ್ರಕಟ ಮಾಡಿ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿವೆ. ಇದು ಗುರೂಜಿ ಅವರ ಭಕ್ತರಿಗೆ ನೋವುಂಟು ಮಾಡಿದೆ. ಆದ್ದರಿಂದ ಸರ್ಕಾರ ತಕ್ಷಣ ಇಂತಹ ನಕಲಿ ಸಾಮಾಜಿಕ ಜಾಲ ತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ವಿನಯ್ ಗುರೂಜಿ ಭಕ್ತರು ಶಿವಪ್ಪ ನಾಯಕ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

ಸಾವಿರಾರು ಬಡವರಿಗೆ ಅನುಕೂಲ
ಸಾವಿರಾರು ಭಕ್ತರ ಕಷ್ಟಕ್ಕೆ ನೆರವಾಗಿ ಅನೇಕ ಭಾಗಗಳಲ್ಲಿ ಸಾವಿರಾರು ಜನರಿಗೆ ಅರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ನೆರವಾಗಿದ್ದಾರೆ. ಮನೆ, ಮದುವೆ, ದೇವಸ್ಥಾನ, ಆಶ್ರಮ, ಗೋ ಶಾಲೆಗಳಿಗೆ ನೆರವು ನೀಡುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಗುರೂಜಿ ಅವರ ಸಾವಿರಾರು ಭಕ್ತರಿದ್ದು, ಸಾಮಾಜಿಕ, ಧಾರ್ಮಿಕ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವನ್ನು ಸಹಿಸಲಾಗದೆ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಭಕ್ತರು ಪ್ರತಿಭಟನೆ ವೇಳೆ ದೂರಿದರು.
ಕೆಲವು ನಕಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿ ಅವರ ಲೈಕ್ ಜಾಸ್ತಿ ಮಾಡಿಸಿಕೊಂಡು ಹಣ ಗಳಿಕೆ ಉದ್ದೇಶವಾಗಿದೆ. ಭಕ್ತರು ಇಂತಹ ಸುಳ್ಳು ಸುದ್ದಿ ನಂಬಬಾರದು ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.