ನಾಲ್ವರು ಮಕ್ಕಳ ಜೀವ ತೆಗೆದ ಬಾತು ಕೋಳಿ!
– ಚಿಕ್ಕಮಗಳೂರಲ್ಲಿ ನಾಲ್ವರು ಮಕ್ಕಳ ದುರಂತ ಅಂತ್ಯ
– ಕೆರೆಯಲ್ಲಿದ್ದ ಬಾತು ಕೋಳಿ ಹಿಡಿಯಲು ಹೋಗಿ ದುರಂತ
– ಬೇಸಿಗೆ ರಜೆ ಇದೆ.. ಮಕ್ಕಳ ಬಗ್ಗೆ ಹುಷಾರ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಬಾತು ಕೋಳಿ ಹಿಡಿಯಲು ಹೋಗಿ ನಾಲ್ಕು ಜನ ಮಕ್ಕಳು ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ. ಬೇಸಿಗೆ ರಜೆಯ ಪ್ರಯುಕ್ತ ಸಂಬಂಧಿಕರ ಮನೆಗೆ ಬಂದಿದ್ದ ಮಕ್ಕಳು, ಸಮಯ ಕಳೆಯಲು ತಿರುಗಾಡಲೆಂದು ಕಾರಂಜಿ ಕೆರೆಗೆ ಹೋಗಿದ್ದ ಸಂದರ್ಭದಲ್ಲಿ, ಬಾತುಕೋಳಿಯನ್ನು ಹಿಡಿಯಲು ಹೋಗಿ ನೀರಿಗೆ ಬಿದ್ದು, ನಾಲ್ವರು ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ.
ಮೃತಪಟ್ಟ ಮಕ್ಕಳನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಅವರೊಂದಿಗೆ ತೆರಳಿದ್ದ ನಾಲ್ಕು ವರ್ಷದ ಮಗು ಅರ್ಮಾನ್ ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿತ್ತು. ತಕ್ಷಣ ಅವನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ.
ಮಾಹಿತಿ ಲಭಿಸುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಅರಳಗುಪ್ಪೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
