ಮಲೆನಾಡು ಶಿಕ್ಷಣದಲ್ಲಿ ಈಗ ಕ್ರಾಂತಿ!
* ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ
* ನೂರಾರು ಕಾಲೇಜು, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ
* ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಕೊಟ್ಟ ವಾಗ್ದೇವಿ ಕಾಲೇಜು
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಾರು ಕಾಲೇಜುಗಳು
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಹೊಂದಿಕೊಂಡಿರುವಂತಹ ಮಲೆನಾಡು ಇದೀಗ ದಿನೇ ದಿನೇ ಶಿಕ್ಷಣ ಸಂಸ್ಥೆಗಳ ತವರು ಆಗುತ್ತಿದೆ. ಒಂದು ಕಾಲದಲ್ಲಿ ಕರಾವಳಿಯಲ್ಲಿ ಇದ್ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇಂದು ಮಲೆನಾಡಿಗೂ ಕಾಲಿಟ್ಟಿವೆ. ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಬಗೆಯ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿದ್ದು ಈಗಾಗಲೇ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದೆ.
ಕರಾವಳಿ, ಬೆಂಗಳೂರು ಮಾದರಿಯ ಶಿಕ್ಷಣವನ್ನು ಇದೀಗ ಮಲೆನಾಡಿನ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಉತ್ತಮ ಫಲಿತಾಂಶ ದಾಖಲು ಮಾಡುತ್ತಿವೆ.
ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜು ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ನೀಡಿದೆ. ದೀಪ್ತಿ
ಸರ್ಕಾರಿ ಶಾಲಾ ಕಾಲೇಜು ಉತ್ತಮ ಸಾಧನೆ
ಸರ್ಕಾರಿ ಶಾಲಾ, ಕಾಲೇಜುಗಳು ಅತ್ಯಂತ ಉತ್ತಮ ಫಲಿತಾಂಶ ದಾಖಲಿಸುತ್ತಿವೆ. ಜತೆಗೆ ಖಾಸಗಿ ಶಾಲಾ ಕಾಲೇಜುಗಳು ಕೂಡ ಸಾಧನೆ ಮಾಡುತ್ತಿವೆ.
ಮಲೆನಾಡಲ್ಲಿ ಅತ್ಯುತ್ತಮ ಶಿಕ್ಷಣ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಜೊತೆ ಜೊತೆಗೆ ಸ್ಕಿಲ್ ಸಂಸ್ಥೆಗಳು ಆರಂಭವಾಗುತ್ತಿದೆ. ಹೀಗಾಗಿ ಮಲೆನಾಡಿನಲ್ಲೂ ಕೂಡ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗುತ್ತಿದೆ.
ಶಿಕ್ಷಣ ಕ್ಷೇತ್ರಕ್ಕೂ ಭರವಸೆ ನೀಡಿದ ಶಿವಮೊಗ್ಗ ವಿಮಾನ ನಿಲ್ದಾಣ!
ಶಿವಮೊಗ್ಗ ವಿಮಾನ ನಿಲ್ದಾಣ ಈಗ ಮಲೆನಾಡಿನ ಹಾಗೂ ಮಧ್ಯ ಕರ್ನಾಟಕದ ಶಿಕ್ಷಣ ಕೇತ್ರಕ್ಕೆ ಹೊಸ ಭರವಸೆ ನೀಡಿದೆ. ಏವಿಯೇಶನ್, ಟೂರಿಸಮ್ ಅಂಡ್ ಹೋಟೆಲ್ ಮ್ಯಾನೇಜೆಂಟ್, ಲೈಫ್ ಸ್ಕಿಲ್ ಕೋರ್ಸ್ ಗಳು ಮಲೆನಾಡಿಗೂ ಎಂಟ್ರಿ ಆಗುತ್ತಿವೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಈಗ ಶಿಕ್ಷಣ ತವರು
ಶಿವಮೊಗ್ಗ ಜಿಲ್ಲೆಯಲ್ಲಿ ಡಿ.ವಿ.ಎಸ್, ಜೆ.ಎನ್.ಎನ್.ಎನ್ಸಿ, ನ್ಯಾಷನಲ್ ಕಾಲೇಜು, ಎನ್.ಇ.ಎಸ್, ಸಹ್ಯಾದ್ರಿ, ಪೆಸಿಟ್, ಬೇಸ್, ಫೇಸ್, ಬಿ.ಜಿ.ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು, ಅಕ್ಷರ ದಾಮ, ಪೋದಾರ್, ಸಾಂದಿಪಿನಿ, ಡೆಲ್ಲಿ ಇಂಟೆರ್ ನ್ಯಾಷನಲ್ ಸ್ಕೂಲ್, ವಾಗ್ಗೇವಿ ಸಮೂಹ ಸಂಸ್ಥೆಗಳು ತೀರ್ಥಹಳ್ಳಿ, ಸೆಂಟ್ ಜೋಸೆಫ್ ಅಕ್ಷರಧಾಮ ಶಿಕ್ಷಣ ಸಂಸ್ಥೆಗಳು, ಶಿಕಾರಿಪುರ ಕುಮದ್ವತಿ ಶಿಕ್ಷಣ ಸಂಸ್ಥೆಗಳು, ತೀರ್ಥಹಳ್ಳಿ ಸಹ್ಯಾದ್ರಿ ಸಂಸ್ಥೆಗಳು, ಹೊಂಗಿರಣ, ರಾಮಕೃಷ್ಣ, ಹೋಲಿ ರೆಡ್ ಮಿರ್ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಹೊಸ ಬದುಕನ್ನ ಕಟ್ಟಿಕೊಂಡಿದ್ದಾರೆ. ಇನ್ನೂ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್, ಡಿಪ್ಲೋಮೋ ಕಾಲೇಜುಗಳು ಕೂಡ ಸೇವೆ ನೀಡುತ್ತಿವೆ.
ರಾಜ್ಯದಲ್ಲೇ ವೈದ್ಯ ವಿದ್ಯಾರ್ಥಿಗಳ ನೆಚ್ಚಿನ ಸಂಸ್ಥೆಯಾದ ಶಿವಮೊಗ್ಗ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(SIMS), ಚಿಕ್ಕಮಗಳೂರಿನ ಚಿಮ್ಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(CIMS) ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿವೆ.
ಕುವೆಂಪು ವಿವಿ ರಾಜ್ಯದ ಬೆಸ್ಟ್ ವಿವಿಯಲ್ಲೂ ಒಂದು!
ಕರ್ನಾಟಕ ರಾಜ್ಯದ ಪ್ರಮುಖ ಹಾಗೂ ಹಳೆಯ ವಿಶ್ವ ವಿದ್ಯಾನಿಲಯ ಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯ ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದೆ. ದೇಶ ವಿದೇಶಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. 1987ರಲ್ಲಿ ಶುರುವಾದ ವಿವಿ ಇಂದಿಗೂ ಟಾಪ್ ವಿವಿಗಳಲ್ಲಿ ಒಂದಾಗಿದೆ.
ಸಾಧನೆಯ ಹಾದಿಯತ್ತ ಮಲೆನಾಡ ಯುವ ಜನತೆ!
ಒಂದು ಕಾಲದಲ್ಲಿ ಕರಾವಳಿಗೆ ಸೀಮಿತವಾಗಿದ್ದ ಗುಣಮಟ್ಟದ ಎಜುಕೇಶನ್ ಹಬ್ ಇದೀಗ ಮಲೆನಾಡಿಗೂ ವಿಸ್ತರಿಸುತ್ತಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಪ್ರತಿಷ್ಠಿತ ಸಂಸ್ಥೆಗಳು ಕಾಲೇಜುಗಳನ್ನು ತೆರೆಯುತ್ತಿವೆ, ಅತ್ಯುತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿವೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯ ದೇಶ ಜಗತ್ತಿನ ವಿವಿಧ ಮೂಲೆಗಳಲ್ಲಿ ಮಲೆನಾಡಿನಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಹಾಗೂ ಯುವಕರು ಸಾಧನೆಯನ್ನು ಮಾಡುತ್ತಿದ್ದಾರೆ.
ಕಾಫಿ ನಾಡಲ್ಲಿ ಶಿಕ್ಷಣ ಅಭಿವೃದ್ಧಿ!
ಚಿಕ್ಕಮಗಳೂರಿನ ಅನೇಕ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಬದುಕನ್ನೇ ಬದಲಾಯಿಸಿವೆ. ಚಿಕ್ಕಮಗಳೂರಿನ ಎ.ಐ.ಟಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜುಗಳು ಅತೀ ಹೆಚ್ಚು ಸಂಖ್ಯೆಯಲ್ಲಿವೆ. ಇನ್ನು ಶೃಂಗೇರಿಯ ಪ್ರತಿಷ್ಠಿತ ರಾಜೀವ್ ಗಾಂಧಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಕಡೂರಿನ ಗುರುಕುಲ, ತರೀಕೆರೆ ಬಿ.ಜಿ.ಎಸ್, ಮಾನಸ ಇಂಟೆರ್ ನ್ಯಾಷನಲ್ ಸ್ಕೂಲ್, ಸಾಂದಿಪಿನಿ, ಕೊಪ್ಪದ ನಾಬರ್ಟ್, ಶೃಂಗೇರಿ ಜೆ.ಸಿ.ಬಿ.ಎಂ ಸೆರಿದಂತೆ ಇನ್ನು ಹಲವು ಸಂಸ್ಥೆಗಳು ಹೊಸ ಕಾಲಮಾನದ ಶಿಕ್ಷಣವನ್ನು ನೀಡುತ್ತಿವೆ. ಇನ್ನು ಹೊಸ ಹೊಸ ಸಂಸ್ಥೆಗಳು ತಾಲೂಕು ಮಟ್ಟದಲ್ಲೂ ಕೂಡ ಸೇವೆ ಸಲ್ಲಿಸುತ್ತಿವೆ. ತೀರ್ಥಹಳ್ಳಿ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ವಾಗ್ಗೇವಿ ಮತ್ತು ಸಹ್ಯಾದ್ರಿ ಅಂತಹ ಸಂಸ್ಥೆಗಳು ಹೊಸ ತಲೆಮಾರಿನ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ.
ಸರ್ಕಾರಿ ಶಾಲೆಗಳೂ ಕಡಿಮೆ ಇಲ್ಲ!
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು ಹಾಗೂ ಚಿಕ್ಕಮಗಳೂರಿನ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಅತ್ಯುತ್ತಮ ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿ ಶಾಲಾ ಕಾಲೇಜುಗಳಿಗೆ ಪೈಪೋಟಿ ನೀಡುತ್ತಿವೆ. ಪ್ರಾಥಮಿಕ ಶಾಲೆಯಿಂದ ಪಿಯು, ಡಿಗ್ರಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮೋ, ಇಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ.
