ಗಿಣಿಕಲ್ ಅಬ್ಬಿ ಫಾಲ್ಸ್‌ನಲ್ಲಿ ನೀರು ಪಾಲಾದ ಪ್ರವಾಸಿ ಯುವಕ
* ಹೊಸನಗರ ತಾಲೂಕಿನ ಯಡೂರು ಸಮೀಪದ ಗಿಣಕಲ್ ಅಬ್ಬಿ ಫಾಲ್ಸ್
* ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಪ್ರೈವೇಟ್ ಕಂಪನಿಯ ಮ್ಯಾನೇಜರ್
NAMMMUR EXPRESS NEWS
ಹೊಸನಗರ: ಬೆಂಗಳೂರಿನಿಂದ ಪ್ರವಾಸಕ್ಕೆಂದು ತಾಲೂಕಿನ ಯಡೂರಿನ ಗಿಣಕಲ್ ಅಬ್ಬಿ ಫಾಲ್ಸ್‌ನ ವೀಕ್ಷಣೆಗೆ ಬಂದಿದ್ದ ಬೆಂಗಳೂರಿನ ಪ್ರೈವೇಟ್ ಕಂಪನಿಯ ಮ್ಯಾನೇಜರ್ ರಮೇಶ್ ಎಂಬ ಯುವಕ ನೀರು ಪಾಲಾದ ಘಟನೆ ನಡೆದಿದೆ.
ಜಲಪಾತದ ನೀರಿಗಿಳಿದ ರಮೇಶ್ ಕಾಲುಜಾರಿ ನೀರುಪಾಲಾಗಿದ್ದಾರೆ ಎನ್ನಲಾಗಿದ್ದು,ಈಗಾಗಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.