ಬಾಳೆಹೊನ್ನೂರು ಎಸ್.ಜೆ.ಆರ್ ಪಿಯು ಕಾಲೇಜು ಸಾಧನೆ
– ಶೇ.87 ಫಲಿತಾಂಶ: 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
– ಜ್ಯೋತಿ, ಸಂಜನಾ ಕಾಲೇಜಿಗೆ ಟಾಪರ್: ಅಭಿನಂದನೆಗಳು
– ಅತ್ಯುತ್ತಮ ಪರಿಸರ..ಅತ್ಯುತ್ತಮ ಶಿಕ್ಷಣ.. ಪ್ರವೇಶ ಆರಂಭ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಎಸ್.ಜೆ.ಆರ್ ಪದವಿ ಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲು ಮಾಡಿದೆ. 85 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 75 ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಒಟ್ಟು ಶೇಕಡ 87.05 ಕಾಲೇಜಿಗೆ ಫಲಿತಾಂಶ ಬಂದಿದೆ. 16ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 18 ದ್ವಿತೀಯ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ. 05 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ
ಜ್ಯೋತಿ, ಸಂಜನಾ ಕಾಲೇಜಿಗೆ ಟಾಪರ್
ಜ್ಯೋತಿ ಬಿ ಆರ್ 565 ಅಂಕಗಳು(ವಾಣಿಜ್ಯ ವಿಭಾಗ) ಮೊದಲ ಸ್ಥಾನ ಹಾಗೂ ಸಂಜನಾ ಕೆ.ಎಸ್ 563 (ಕಲಾವಿಭಾಗ) ಮೊದಲ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಕಾಲೇಜು ಟಾಪರ್ಸ್ ಆಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಆಡಳಿತ ಮಂಡಳಿ ಮತ್ತು ಬೋಧಕ ವರ್ಗ ಅಭಿನಂದನೆಗಳನ್ನು ಸಲ್ಲಿಸಿದೆ.
ಅತ್ಯುತ್ತಮ ಪರಿಸರ.. ಅತ್ಯುತ್ತಮ ಶಿಕ್ಷಣ
ಗ್ರಾಮೀಣ ಭಾಗದಲ್ಲಿ ನೈತಿಕ ಶಿಕ್ಷಣದ ಜತೆಗೆ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಪಠ್ಯದ ಜತೆಗೆ ಜೀವನಕ್ಕೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಪ್ರವೇಶಾತಿ ಪ್ರಾರಂಭವಾಗಿದ್ದು, ದಾಖಲಾಗಬಹುದಾಗಿದೆ.
