ಮಳೆ ಬಂತು: ಮಲೆನಾಡಲ್ಲಿ ಕೃಷಿ ಈಗ ಶುರು!
– ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಜೋರು
– ನಾಟಿ ಕೆಲಸಕ್ಕೆ ಹಲವೆಡೆ ಸಿದ್ಧತೆ
– ಅಡಿಕೆ ಔಷಧಿ ಚಟುವಟಿಕೆಯೂ ಆರಂಭ
NAMMUR EXPRESS NEWS
ಮಲೆನಾಡು: ಜುಲೈ ಆರಂಭಕ್ಕೆ ಮಳೆಗಾಲ ಮಲೆನಾಡಿನಲ್ಲಿ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಜೂನ್ ತಿಂಗಳಲ್ಲೇ ಶುರುವಾಗಬೇಕಿದ್ದ ಕೃಷಿ ಚಟುವಟಿಕೆ ಇದೀಗ ಶುರುವಾಗಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಜಿಲ್ಲೆಯ ಅನೇಕ ಭಾಗದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ.
ಭತ್ತದ ಗದ್ದೆಗಳಲ್ಲಿ ಗೊಬ್ಬರ, ಹೂಟಿ, ನೀರು ಹಾಯಿಸುವ ಕೆಲಸ ನಡೆಯುತ್ತಿದೆ. ಸಸಿ ಮುಡಿ ಕೆಲವೆಡೆ ಹಾಕಿ ನಾಟಿ ಶುರು ಮಾಡಿದ್ದಾರೆ. ಆದರೆ ಇನ್ನು ಕೆಲವೆಡೆ ಇನ್ನು ಸಸಿ ಮಡಿ ಹಾಕುವ ಕಾರ್ಯ ಈಗ ಆರಂಭ ಆಗಿದೆ.
ಮಳೆ ಬಿಸಿಲಿನ ಆಟದಿಂದ ನಾಡಿಗೆ ಅನ್ನ ನೀಡುವ ರೈತರ ಬದುಕು ಬವಣೆಯಲ್ಲಿದೆ.

ಅಡಿಕೆ ಔಷಧಿ ಸಿಂಪಡಿಸುವ ಕೆಲಸ
ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆ ಅಡಿಕೆಗೆ ಔಷಧಿ ಹೊಡೆಯುವ ಕೆಲಸ ಈಗ ಮಲೆನಾಡಲ್ಲಿ ನಡೆಯುತ್ತಿದೆ. ಪ್ರತಿ ಮನೆಯಲ್ಲೂ ಕೃಷಿ ಚಟುವಟಿಕೆ ಶುರುವಾಗಿದೆ.
ಅಲ್ಪಾವಧಿ ಭತ್ತ ಬೆಳೆಯಲು ರೈತರಿಗೆ ಸಲಹೆ ನೀಡಿದ ಅಧಿಕಾರಿಗಳು!
ಈ ವರ್ಷ ಒಂದು ತಿಂಗಳು ತಡವಾಗಿ ಆಷಾಢದ ಸೋನೆ ಮಳೆ ಶುರುವಾಗಿ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರೆಲ್ಲ ಮನಸ್ಸಿನಿಂದ ಬೀಜ ಬಿತ್ತನೆಗೆ ತಯಾರಾಗುತ್ತಿದ್ದಾರೆ. ಇದರ ನಡುವೆಯೇ ಕೃಷಿ ಅಧಿಕಾರಿಗಳು ಭತ್ತ ಬೆಳೆಗಾರರಿಗೆ ವಿಶೇಷ ಸೂಚನೆ ನೀಡಿದ್ದಾರೆ. ತಾಲೂಕಿನ ಹೆಚ್ಚಿನ ಭಾಗದಲ್ಲಿ ರೈತರು 145ರಿಂದ 150 ದಿನಗಳ ಅವಧಿಯ ಭತ್ತದ ತಳಿಗಳನ್ನು ಬೆಳೆಸುತ್ತಿದ್ದರು. ಆದರೆ ಈ ಬಾರಿ ಮಳೆ ತಡವಾಗಿರುವುದರಿಂದ ರೈತರು ದೀರ್ಘಾವಧಿ ಭತ್ತದ ತಳಿ ಬದಲು ಅಲ್ಪಾವಧಿ ತಳಿ ಬಳಕೆಯತ್ತ ಗಮನ ಹರಿಸಬೇಕಿದೆ.

ಗೊಬ್ಬರ ಪೂರೈಕೆ ಖಾತ್ರಿ
ಜೂನ್‌ನಲ್ಲಿ ಮಳೆ ಬಾರದ ಕಾರಣ ಗೊಬ್ಬರ ವಿತರಣೆ ಆಗಿಲ್ಲ. ಡಿಎಪಿ, ಎನ್.ಕೆ, ಯೂರಿಯಾ, ಮೊದಲಾದ ರಸಗೊಬ್ಬರಗಳ ದಾಸ್ತಾನು ಬಗ್ಗೆ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.

ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023
