Categories
ಮಲ್ನಾಡ್

ಕ್ವಿಂಟಲಿಗೆ 1 ಲಕ್ಷಕ್ಕೆ ಬಂದು ನಿಂತ ಅಡಿಕೆ ದರ!

ಕ್ವಿಂಟಲಿಗೆ 1 ಲಕ್ಷಕ್ಕೆ ಬಂದು ನಿಂತ ಅಡಿಕೆ ದರ!
– ಹಸಕ್ಕೆ ಕ್ವಿಂಟಲ್ 99,999ಕ್ಕೆ ಮಾರಾಟ
– ರಾಶಿ 66,700/- ಇದೇ ದರ ಮುಂದುವರಿಯುತ್ತಾ..?

NAMMUR EXPRESS NEWS
ಮಲೆನಾಡು: ಅಡಿಕೆಗೆ ಐತಿಹಾಸಿಕ ದರ ಬಂದಿದೆ. ಹಸ ಕ್ವಿಂಟಲಿಗೆ 1 ಲಕ್ಷಕ್ಕೆ ಬಂದು ನಿಂತಿದೆ. ಹಸಕ್ಕೆ 54099 ರೂ.ನಿಂದ 99999 ರೂ.ವರೆಗೆ ಇದೆ. ಬೆಟ್ಟೆ 55572 ರೂ. ನಿಂದ 77770 ರೂ. ವರೆಗೆ ಇದೆ.
ರಾಶಿಇಡಿ 51509 ರೂ. ನಿಂದ 66899 ರೂ. ಇದೆ. ಗೊರಬಲು 19000 ರೂ. ನಿಂದ 46199 ರೂ. ಇದೆ. ಹೊಸರಾಶಿಇಡಿ 48566 ರೂ. ನಿಂದ 66699 ರೂ. ವರೆಗೆ ಇದೆ.
ಮಲೆನಾಡು ಅಡಿಕೆಗೆ ಭಾರೀ ಡಿಮ್ಯಾಂಡ್ ಬಂದಿದೆ. ಈಗಾಗಲೇ ಬಯಲು ಸೀಮೆ ಭಾಗದಲ್ಲಿ ಅಡಿಕೆ ಸುಲಿತ ಆಗಿದ್ದು ಅವರಿಗೆ ಉತ್ತಮ ದರ ಸಿಕ್ಕಿದೆ. ಮಲೆನಾಡಲ್ಲಿ ಮಳೆ ಕಾರಣ ಇನ್ನು ಅಡಿಕೆ ಕೊಯ್ಲು ಶುರು ಆಗಿಲ್ಲ. ಅಲ್ಲದೆ ಫಸಲು ಕಡಿಮೆ ಇರುವುದರಿಂದ ಬೆಲೆ ಇದೇ ಮುಂದುವರಿಯುವ ಸಾಧ್ಯತೆ ಇದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.