ವಾಗ್ದೇವಿ ಕಾಲೇಜು ಶಿಕ್ಷಣ ಸಾಧನೆಗೂ, ಕ್ರೀಡಾ ಆಯೋಜನೆಗೂ ಸೈ..!
– ಜಿಲ್ಲಾ ಮಟ್ಟದ ಪಿ ಯು ಕಾಲೇಜುಗಳ ಖೋ ಖೋ ಮತ್ತು ಥ್ರೋಬಾಲ್ ಪಂದ್ಯಾವಳಿ
– ಶಾಸಕ ಆರಗ ಜ್ಞಾನೇಂದ್ರ ಉದ್ಘಾಟನೆ: ಅಚ್ಚುಕಟ್ಟಿನ ಆಯೋಜನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನ ಕುರುವಳ್ಳಿಯ ವಾಗ್ದೇವಿ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಪಿ ಯು ಕಾಲೇಜುಗಳ ಖೋ ಖೋ ಮತ್ತು ಥ್ರೋ ಬಾಲ್ ಪಂದ್ಯಾವಳಿ ಅದ್ದೂರಿಯಾಗಿನಡೆಯಿತು.
ಪಂದ್ಯಾವಳಿಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಕ್ರೀಡಾಕೂಟ ಆಯೋಜನೆ ಬಗ್ಗೆ ಹಾಗೂ
ವಾಗ್ದೇವಿ ಸಂಸ್ಥೆಯ ಸಾಧನೆ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾಗ್ದೇವಿ ಶಾಲೆ ಮುಖ್ಯಸ್ಥರಾದ ಜಗದೀಶ್, ಕ್ಷೇತ್ರ ಶಿಕ್ಷಣಧಿಕಾರಿ ಗಣೇಶ್ ಶಿಕ್ಷಣ ಇಲಾಖೆ ಕ್ರೀಡಾ ಅಧಿಕಾರಿಗಳಾದ ರಮೇಶ್
ಚಂದ್ರಪ್ಪ, ರಾಮು, ನಿರಂಜನ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದರು.
