Categories
ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಶೃಂಗೇರಿಯಲ್ಲಿ ಮಲೆನಾಡು ಉತ್ಸವದಲ್ಲಿ ಸಾಂಸ್ಕೃತಿಕ ಕಲರವ!

ಶೃಂಗೇರಿಯಲ್ಲಿ ಮಲೆನಾಡು ಉತ್ಸವದಲ್ಲಿ ಸಾಂಸ್ಕೃತಿಕ ಕಲರವ!
– ರಮೇಶ್ ಬೇಗಾರ್ ನೇತೃತ್ವದಲ್ಲಿ ಸಾಂಸ್ಕೃತಿಕ ಸಾಧಕರ ಸಮಾಗಮ
– ಹೊದಲ ಚಂದ್ರಶೇಖರ್, ಗದ್ದೆಮನೆ ವಿಶ್ವನಾಥ್ ಅವರಿಗೆ ಗೌರವ
– ಸಾಧಕರು, ಸೇವಕರಿಗೆ ಪ್ರಶಸ್ತಿ: 2 ದಿನ ಕಾರ್ಯಕ್ರಮದ ಸೊಬಗು

ಶೃಂಗೇರಿ: ಖ್ಯಾತ ಕಲಾವಿದರು, ಸಿನಿಮಾ ನಿರ್ದೇಶಕರು ಆದ ರಮೇಶ್ ಬೇಗಾರ್ ನೇತೃತ್ವದಲ್ಲಿ ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಇವರು ಆಯೋಜಿಸಿದ್ದ 20ನೇ ವರ್ಷದ ವಿಂಶತಿ ಮಲೆನಾಡು ಉತ್ಸವ ಅದ್ದೂರಿಯಾಗಿ ಶೃಂಗೇರಿಯಲ್ಲಿ ನಡೆಯಿತು. ಗದ್ದೆಮನೆ ವಿಶ್ವನಾಥ್ ಚಾರಿಟೇಬಲ್ ಟ್ರಸ್ಟ್ ಸಹಯೋಗ ನೀಡಿದ್ದು, 2 ದಿನಗಳ ಅದ್ದೂರಿ ಉತ್ಸವ ಅತ್ಯಂತ ಕಲಾತ್ಮಕವಾಗಿ ನಡೆಯಿತು. ಉತ್ಸವದಲ್ಲಿ ಕಲೆ ಮಾತ್ರವಲ್ಲದೇ ವಿವಿಧ ಕ್ಷೇತ್ರದ ಗಣ್ಯರನ್ನು ಮತ್ತು ಯುವ ಸಾಧಕರಿಗೆ ಗೌರವಿಸಲಾಯಿತು.

ಮೂಲತಃ ಮಲೆನಾಡಿಗರಾಗಿ ಹೊರಗಡೆ ಅನನ್ಯ ಸಾಧನೆ ಮಾಡಿದ ಉದ್ಯಮ ಕ್ಷೇತ್ರದ ಸಾಧಕರಾದ ಹಿರಿಯರಾದ ಹೆಚ್ ಜಿ ಚಂದ್ರಶೇಖರ ಮತ್ತು ಗದ್ದೆಮನೆ ವಿಶ್ವನಾಥ್ ಅವರನ್ನು ಗೌರವಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಗಳಿಗೂ, ಸಮಸ್ತ ಸಿಬ್ಬಂದಿ ಸಹಾಯ ನೀಡಿದ್ದರು. ಶಂ.ನ ಕೃಷ್ಣಮೂರ್ತಿ, ಶಾಸಕ ಟಿ ಡಿ ರಾಜೇಗೌಡ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.

ಹಲವು ಸಾಧಕರಿಗೆ ಪ್ರಶಸ್ತಿ ಗೌರವ

ಶ್ರೀ ಕೆ ಎಸ್ ಬಾಲಕೃಷ್ಣ, ನಿವೃತ್ತ ಮುಖ್ಯ ಉಪಾಧ್ಯಾಯರು, ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆ.ಲ್, ಶ್ರೀ ಆರ್ ಡಿ ರವೀಂದ್ರ. ಬಾಳೆಹೊನ್ನೂರು. ಪ್ರಸಿದ್ಧ ಶಿಕ್ಷಣ ತಜ್ಞರು. ಮತ್ತು ಕರ್ನಾಟಕ ಸರ್ಕಾರ ದ ಪಠ್ಯ ಪುಸ್ತಕ ರಚನಾ ಸಮಿತಿ ಮುಖ್ಯಸ್ಥರು, ತಂಗಿರಾಲ ಟಿ ವಿ ಶಿವಕುಮಾರ ಶರ್ಮ, ಶ್ರೀ ಮಠ ದ ವೇದ ಪಂಡಿತರು ಮತ್ತು ಲೇಖಕರು..
ಶ್ರೀಮತಿ ಸುನೀತಾ ನವೀನ್ ಗೌಡ, ಬಹುಮುಖ ಪ್ರತಿಭೆ,, ರಾಘವೇಂದ್ರ ಮಯ್ಯ, ಸುಪ್ರಸಿದ್ದ ಯಕ್ಷಗಾನ ಭಾಗವತರು, ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಹೊನ್ನವಳ್ಳಿ, ಶ್ರೀ ಶ್ರೀಧರ ಹೊಳ್ಳ, ಕುಂಬಾರು ಕುಡಿಗೆ.ಹವ್ಯಾಸಿ ಯಕ್ಷಗಾನ ಭಾಗವತರು, ಶ್ರೀ ಪ್ರಶಾಂತ್ ಶೃಂಗೇರಿ , ಮೈಸೂರು. ಬಹು ಮುಖ ಪ್ರತಿಭೆ, ಅಂತಾರಾಷ್ಟ್ರೀಯ ವೇದಿಕೆಗಳ ಉಪನ್ಯಾಸಕರು, ಶ್ರೀ ಸುಜನ್ ಹಾಲಾಡಿ.

ಪ್ರಸಿದ್ಧ ಯಕ್ಷಗಾನ ಹಿಮ್ಮೆಳ ಕಲಾವಿದರು, ಶ್ರೀಮತಿ ಸ್ವಾತಿ ಶಶಿಭೂಷಣ್, ರಂಗಭೂಮಿ ಮತ್ತು ಸಿನಿಮಾ ಹವ್ಯಾಸಿ ಕಲಾವಿದೆ, ಗಣೇಶ್ ಪ್ರಸಾದ್ ಬೆಳಂದೂರು, ಶಿಲ್ಪಾ ಗೌಡ ಶೃಂಗೇರಿ, ಬಿ ಟಿವಿಯ ಸಹಾಯಕ ಸುದ್ಧಿ ಸಂಪಾದಕಿ ಮತ್ತು ಪ್ರಸಿದ್ಧ ನಿರೂಪಕಿ. ಕು ಸೀತಾ ಪ್ರಜ್ಞಾ, ಪ್ರಸಿದ್ಧ ಶಾಸ್ತ್ರಿಯ ಸಂಗೀತ ಪ್ರತಿಭೆ, ಕು ಉನ್ನತಿ ನವೀನ್ ಭಂಡಾರಿ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಕಿಶೋರ ಕ್ರೀಡಾ ಪಟು., ಶ್ರೀ ಕಾರ್ತಿಕ್ ಎ. ಸೋಷಿಯಲ್ ಮೀಡಿಯಾ ಮತ್ತು ವಿವಿಧ ಕ್ಷೇತ್ರದ ಕಂಟೆಂಟ್ ಕ್ರಿಯೆಟರ್ ಇವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.