Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿಯಲ್ಲಿ ದೀಪಾವಳಿ ಸಂಭ್ರಮ ಜೋರು!

ತೀರ್ಥಹಳ್ಳಿಯಲ್ಲಿ ದೀಪಾವಳಿ ಸಂಭ್ರಮ ಜೋರು!
– ಹೂ, ಹಣ್ಣು ಖರೀದಿಯಲ್ಲಿ ಜನರ ರಂಗು!
– ಅಂಗಡಿ ಪೂಜೆ ಸಡಗರ: ಜನರ ಸಂಭ್ರಮ
– ಸಾರ್ವಜನಿಕ ಮೈದಾನದಲ್ಲಿ ಪಟಾಕಿ ವ್ಯಾಪಾರ

NAMMUR EXPRESS NEWS
ತೀರ್ಥಹಳ್ಳಿ: ದೀಪಾವಳಿ ಹಬ್ಬದ ರಂಗಿನಲ್ಲಿ ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕು, ಮಲೆನಾಡು ಹೊಳೆಯುತ್ತಿದೆ. ಹಬ್ಬದ ಸಂಭ್ರಮಕ್ಕೆ ತಕ್ಕಂತೆ ಮಾರುಕಟ್ಟೆಗಳು ಕಂಗೊಳಿಸುತ್ತಿದ್ದು, ಹೂ-ಹಣ್ಣು ಅಂಗಡಿಗಳ ಬಳಿ ಜನಸಂದಣಿ ಹೆಚ್ಚಿದೆ.
ದೀಪಾವಳಿ ಹಬ್ಬದ ಅಂಗವಾಗಿ ಮನೆ ಮನೆಗಳಲ್ಲಿ ಹೂವಿನ ಅಲಂಕಾರ, ಪೂಜೆ ಹಾಗೂ ಹಣ್ಣು ಪಾನಕದ ಸಡಗರ ಸಿದ್ಧತೆಗಳು ಜೋರಾಗಿವೆ.ಬೆಳಗ್ಗಿನಿಂದಲೇ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಖರೀದಿಗೆ ಧಾವಿಸಿದ ಜನರಿಂದ ಹಬ್ಬದ ವಾತಾವರಣ ಕಂಡುಬಂದಿತು. ಸೇವಂತಿಗೆ,ಚಂಡು ಹೂ,ಸುಗಂಧರಾಜ, ಕನಕಾಂಬರ,ಮಲ್ಲಿಗೆ, ಹೂವಿನ ಮಳಿಗೆಗಳ ಮುಂದೆ ವಿಶೇಷ ಒತ್ತಡ ಕಂಡುಬಂದಿದೆ. ಕೇಸರಿ, ಹಳದಿ, ಬಿಳಿ ಬಣ್ಣದ ಹೂವುಗಳು ಮಾರುಕಟ್ಟೆಯ ಚುಕ್ಕಾಣಿ ಹಿಡಿದುಕೊಂಡಿದ್ದವು. ಹೂವಿನ ಸುವಾಸನೆಯ ನಡುವೆ ಜನರು ದೀಪಾವಳಿ ಸಂಭ್ರಮವನ್ನು ಅನುಭವಿಸಿದರು.

ಹೂವಿನ ಜೊತೆಗೆ ಹಣ್ಣಿನ ಖರೀದಿಯೂ ಭರ್ಜರಿಯಾಗಿ ಸಾಗುತ್ತಿದೆ. ಬಾಳೆಹಣ್ಣು, ಸೇಬು,ಕಿತ್ತಳೆ, ಸೇರಿದಂತೆ ಬಗೆಬಗೆಯ ಹಣ್ಣುಗಳು ಹಬ್ಬದ ಸಡಗರವನ್ನು ಮತ್ತಷ್ಟು ಜಾಜ್ವಲ್ಯ ಮಾನದಂತೆ ಮಾಡಿವೆ. ಕುಟುಂಬಸ್ಥರೊಂದಿಗೆ ಬಂದ ಜನರು ಬಣ್ಣಬಣ್ಣದ ಹಣ್ಣುಗಳನ್ನು ಆರಿಸಿಕೊಂಡು ಕುಂಬಳ ಕಾಯಿ ತಲೆ ಮೇಲೆ ಹೊತ್ತು. ಎಳನೀರು ಕೈ ಯಲ್ಲಿ ಹಿಡಿದು ಹಬ್ಬದ ಪಾವಿತ್ರ್ಯವನ್ನು ಮೆಲುಕು ಹಾಕುತ್ತಿದ್ದಾರೆ. ಬಗೆ ಬಗೆಯಾದ ಮಣ್ಣಿನ ದೀಪಗಳನ್ನು ಆರಿಸಿಕೊಂಡು, ದೀಪಾವಳಿಯನ್ನು ಇನ್ನಷ್ಟು ಮೆರಗುಗೊಳಿಸುವ ಜನರ ಉತ್ಸಾಹ ಹಾಗೂ ಪಟಾಕಿ ಅಂಗಡಿಗಳ ಮುಂದೆ ಬಾರಿ ಜನ ಜಾತ್ರೆ ಉಂಟಾಗಿದೆ. ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಗೆ ಕಿಕ್ಕಿರಿದ ಜನರು, ಬೇಕರಿ ಗಳಲ್ಲಿ ಸಿಹಿ ತಿಂಡಿ ಖರೀದಿಯಲ್ಲಿ ಮುಗ್ಧ ಮನಸುಗಳ ಉಲ್ಲಾಸ ತೋರಿಸುತಿದ್ದಾರೆ.

ಹಬ್ಬದ ಉತ್ಸಾಹದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಎಲ್ಲರೂ ತೊಡಗಿಸಿಕೊಂಡಿದ್ದು, ತೀರ್ಥಹಳ್ಳಿ ಪಟ್ಟಣವೇ ಒಂದು ಬಣ್ಣದ ಲೋಕವಾಗಿ ಮಾರ್ಪಟ್ಟಿದೆ. ಮನೆ ಮನೆಗಳಲ್ಲಿ ನರಕ ಚತುರ್ದಶಿ, ಲಕ್ಷ್ಮಿ ಪೂಜೆ, ಬಲಿಪಾಡ್ಯಮಿ ಗೆ ಬಾರಿ ಸಿದ್ಧತೆ, ಬಣ್ಣದ ಅಲಂಕಾರ, ಹೂವಿನ ಹಾರಗಳಿಂದ ಅಲಂಕರಿಸಿದ ಬೀದಿಗಳು ದೀಪಾವಳಿ ಹಬ್ಬದ ವೈಭವವನ್ನು ಪ್ರತಿಬಿಂಬಿಸುತ್ತಿವೆ.ವ್ಯಾಪಾರಿಗಳು ಸಂತೋಷದಿಂದ ಈ ಬಾರಿಯ ದೀಪಾವಳಿ ಹಬ್ಬದ ವಸ್ತುಗಳನ್ನು ಮಾರುವ ಮೂಲಕ ವ್ಯಾಪಾರಸ್ಥರ ಮುಖದಲ್ಲಿ ಸಂತಸದ ನಗೆ ಕಾಣುತ್ತಿದೆ. ಜನರು ಹರ್ಷದಿಂದ ಹೂ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.