Categories
ತೀರ್ಥಹಳ್ಳಿ ಮಲ್ನಾಡ್

ದೀಪಾವಳಿ: ಜಾನಪದ ಕಲೆ ಕಲರವ!

ದೀಪಾವಳಿ: ಜಾನಪದ ಕಲೆ ಕಲರವ!
– ಕಲ್ಲುಕೊಡಿಗೆಯ ಧರ್ಮಶ್ರೀ ಯುವಕ ಸಂಘದಿಂದ ಅಂಟಿಗೆ ಪಿಂಟಿಗೆ
– ತೀರ್ಥಹಳ್ಳಿ, ಕೊಪ್ಪ, ಹೊಸನಗರ ಭಾಗದಲ್ಲಿ ಕಲೆ
– ಹುಲಿ ವೇಷ, ಕರಡಿ ವೇಷ, ಬೂರೆ ಹಬ್ಬದ ಸಡಗರ
– ಗೋ ಪೂಜೆಗೆ ಸಿದ್ಧತೆ: ಎಲ್ಲೆಡೆ ಹಬ್ಬದ ರಂಗು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು: ದೀಪಾವಳಿ ಹಬ್ಬ ಬೆಳಕಿನ ಹಬ್ಬದ ಜತೆಗೆ ಜಾನಪದ ಕಲೆ, ಪದ್ಧತಿ, ರೈತರ ವಿಶೇಷ ಹಬ್ಬ. ಮನೆ ಮಂದಿ ಎಲ್ಲಾ ಸೇರಿ ಮಾಡುವ ಈ ಹಬ್ಬದಲ್ಲಿ ಜಾನಪದಕ್ಕೂ ವಿಶೇಷ ಸ್ಥಾನವಿದೆ. ದೀಪಾವಳಿ ವಿಶೇಷದಲ್ಲಿ ಅಂಟಿಗೆ ಪಿಂಟಿಗೆ ಕೂಡಒಂದು. ಜಾನಪದರು ಜ್ಯೋತಿ ಹಚ್ಚಿ ಮನೆ ಮನೆಗೆ ಹೋಗಿ ಹಾಡುವ ಈ ಹಬ್ಬಕ್ಕೆ ವಿಶೇಷ ಗೌರವ ಇದೆ.

ಊರಿನ ಅಭಿವೃದ್ಧಿಗೆ ಅಂಟಿಗೆ ಪಿಂಟಿಗೆ ಕಟ್ಟಿದ ಯುವಕ ಸಂಘ!

ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಕೊಡಿಗೆ ಮುಸ್ಸಿನಕೊಪ್ಪದ ಶ್ರೀ ಧರ್ಮಶ್ರೀ ಯುವಕ ಸಂಘ ಮತ್ತು ಗ್ರಾಮಸ್ತರು ಸೇರಿ ಗಣೇಶ ಹಬ್ಬದಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ನವೀಕೃತ ಸಮುದಾಯ ಭವನ ಮಾಡಿ ಜಿಲ್ಲೆಯಲ್ಲೇ ಗಮನ ಸೆಳೆದಿದ್ದರು. ಇದೀಗ ಸಮುದಾಯ ಭವನಕ್ಕೆ ಶೌಚಾಲಯ ಮತ್ತು ಅಡಿಗೆಕೋಣೆ ನಿರ್ಮಾಣಕ್ಕಾಗಿ ಅಂಟಿಗೆ ಪಿಂಟಿಗೆ ಕಟ್ಟಿದ್ದಾರೆ.
ಶ್ರೀ ಧರ್ಮಶ್ರೀ ಯುವಕ ಮಂಡಲದ ಅಧ್ಯಕ್ಷರಾದ ಕುಪ್ಪಳಿ ಸುಧಾಕರ್ ಅವರ ನೇತೃತ್ವದಲ್ಲಿ ಈ ಜಾನಪದ ಸೇವೆ ನಡೆಯುತ್ತಿದೆ. ಮಕ್ಕಿಮನೆ ಸೇರಿ ಅನೇಕ ಕಡೆ ಅಂಟಿಗೆ ಪಿಂಟಿಗೆ ಕಾಣುತ್ತಿದೆ.

ಬೂರೆ ಹಬ್ಬದಂದು ಬೈಕ್ ಕದ್ದಿಟ್ಟ ಹುಡುಗರು.. ಮಕ್ಕಳ ಹುಲಿವೇಶ

ತೀರ್ಥಹಳ್ಳಿ ತಾಲೂಕು ದಬ್ಬಣಗದ್ದೆ ಹುಡುಗರು ಬುರೆ ಹಬ್ಬವನ್ನು ಹಳೆಯ ಸಂಪ್ರದಾಯ ಅನೇಕ ವಸ್ತುಗಳನ್ನು ಶಾಲೆ ರಂಗಮಂದಿರ ಮತ್ತು ಕಾಡಿನಲ್ಲಿ ಬಚ್ಚಿಟ್ಟಿದ್ದಾರೆ. ಬೈಕು ಸೈಕಲ್, ಚಪ್ಪಲಿ ಸ್ಟಾಂಡ್, ಕೊನೆ ದೋಟಿ ಮಾಯವಾಗಿದ್ದು ಬಳಿಕ ಪತ್ತೆ ಆಯಿತು. ಅನೇಕಕಡೆ ಮಕ್ಕಳ ಹುಲಿವೇಶ ಹಾಗೂ ಕಲಾವಿದರ ಕರಡಿ ವೇಷ ಗಮನ ಸೆಳೆಯುತ್ತಿದೆ.

ಗೋ ಪೂಜೆಗೆ ಸಿದ್ಧತೆ: ಎಲ್ಲೆಡೆ ಹಬ್ಬದ ರಂಗು

ದೀಪಾವಳಿಯ ಗೋಪೂಜೆ ಆಚರಣೆಯಲ್ಲಿ ಎಲ್ಲೆಡೆ ಸಿದ್ಧತೆ ನಡೆದಿದೆ ಗೋವುಗಳ ಕೊರಳಿಗೆ ಅಡಕೆ ಮಾಲೆ, ಪಚ್ಚೆ ತೆನೆ, ಚಪ್ಪೆ ರೊಟ್ಟಿ ಸಿದ್ಧವಾಗಿದೆ. ಕೋಡುಗಳನ್ನು ಶೃಂಗರಿಸಿ, ದನಗಳ ಮೈಮೇಲೆ ಹುಬ್ಬು ಬರೆದು ಕೆಮ್ಮಣ್ಣು ಮತ್ತು ಸುಣ್ಣದಿಂದ ಗೋವುಗಳ ಮೈಗೆ ಲೋಟದಿಂದ ಅಚ್ಚು ಬರೆದು ಗೋವುಗಳಿಗೆ ಪೂಜೆಯನ್ನು ಸಲ್ಲಿಸಿ, ಗೋವನ್ನ ಮನೆಯ ಒಳಗೆ ದಾಟಿಸಿ ವಿಶೇಷ ಭಕ್ಷ್ಯಗಳನ್ನು ನೀಡಲಾಗುತ್ತದೆ. ನಂತರ ಪಟಾಕಿ ಸಿಡಿಸಿ ಗೋವುಗಳನ್ನು ಮನೆಯಿಂದ ಬೆರೆಸುವ ಸಂಪ್ರದಾಯವಿದೆ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಹತಾರಗಳನ್ನು ಸ್ವಚ್ಛವಾಗಿ ತೊಳೆದು ಆಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ. ಸಂಜೆ ತೋಟ, ಗದ್ದೆ,ದೀಪ ಹಚ್ಚಲು ಸಿದ್ಧತೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.