Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಮೇಗರವಳ್ಳಿ ವಲಯದ ಭಂಡಾರಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಮೇಗರವಳ್ಳಿ ವಲಯದ ಭಂಡಾರಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

– ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಪ್ರಮುಖರು

NAMMUR EXPRESS NEWS
ಮೇಗರವಳ್ಳಿ ವಲಯದ ಭಂಡಾರಿ ಸಮಾಜದ ನೂತನ ಅಧ್ಯಕ್ಷರಾಗಿ ಮೇಗರವಳ್ಳಿ ಸುದರ್ಶನ್ ಭಂಡಾರಿ, ಹಾಗೂ ಉಪಾಧ್ಯಕ್ಷರಾಗಿ ಹೆಗ್ಗೋಡ್ ಉದಯ್ ಭಂಡಾರಿ, ಕಾರ್ಯದರ್ಶಿಯಾಗಿ ಹೊಸೂರ್ ರವೀಂದ್ರ ಎಚ್ಎನ್ ಭಂಡಾರಿ, ಖಜಾoಚಿಯಾಗಿ ನಾಬಳ ಸುಧೀರ್ ಭಂಡಾರಿ ಅವಿರೋಧ ಆಯ್ಕೆ ಆಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ವಲಯದ ನೂತನ ಭಂಡಾರಿ ಸಮಾಜದ ಸಂಘ ಉದ್ಘಾಟನೆಯಾಗಿದ್ದು, ಮೇಗರವಳ್ಳಿ ವಲಯದ ಗೌರವಾಧ್ಯಕ್ಷರಾದ ಗಾರ್ಡರಗದ್ದೆ ವಾಸು ಭಂಡಾರಿ ಕಾರ್ಯಕ್ರಮವನ್ನು ಸೆ. 26ರ ಶುಕ್ರವಾರ ಉದ್ಘಾಟನೆ ಮಾಡಿದರು. ಈ ಸಮಾರಂಭಕ್ಕೆ ತಾಲೂಕು ಭಂಡಾರಿ ಸಮಾಜದ ಸದಸ್ಯರಾದ ಗುಡ್ಡೇಕೇರಿ ನಾಗರಾಜ್ ಭಂಡಾರಿ ಹಾಗೂ ಮೇಗರವಳ್ಳಿ ಪ್ರಶಾಂತ್ ಭಂಡಾರಿ ಉಪಸ್ಥಿತರಿದ್ದು,ಇವರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಮೇಗರವಳ್ಳಿ ವಲಯದ ಭಂಡಾರಿ ಸಮಾಜದವರು ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.