Categories
ಮಲ್ನಾಡ್

ಮಲೆನಾಡಲ್ಲಿ ಭಾರೀ ಮಳೆ!

ಮಲೆನಾಡಲ್ಲಿ ಭಾರೀ ಮಳೆ!
– ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಕೆಲ ಭಾಗದಲ್ಲಿ ಭಾರೀ ಮಳೆ
– ಏ.28ರಿಂದ ಮೇ 1ರವರೆಗೆ ನಾಲ್ಕು ದಿನ ಭಾರೀ ಮಳೆ

NAMMUR EXPRESS NEWS
ಮಲೆನಾಡು: ಮಲೆನಾಡಿನ ಭಾಗದಲ್ಲಿ ಮಳೆ ಮತ್ತೆ ಚುರುಕಾಗಿದ್ದು, ಕೆಲವು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ತುಂತುರು ಮಳೆಯಾಗುತ್ತಿದೆ. ಕೊಪ್ಪ, ಶೃಂಗೇರಿ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಬೇಸಿಗೆಯ ಬಿಸಿಲು ತಾಳಲಾರದೆ ಕಂಗಾಲಾಗಿದ್ದ ಜನರಿಗೆ ಮಳೆರಾಯನ ಆಗಮನದಿಂದ ತುಂಬಾ ಸಂತಸ ಎದುರಾಗಿದೆ .
ಕೆಲವೆಡೆ ಗುಡುಗು – ಸಿಡಿಲಿನ ಆರ್ಭಟದಿಂದ ಮಳೆಯಾಗಿದೆ, ರೈತರಿಗೆ ಸಾಕಷ್ಟು ನಿರಾಳ ಎನಿಸಿದೆ. ಬೇಸಿಗೆಯ ಬಿಸಿಲು ತಾಳಲಾರದೆ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಎಲ್ಲರಿಗೂ ಮಳೆರಾಯ ತಂಪೆರೆದಿದ್ದಾನೆ.
ಹವಮಾನ ಇಲಾಖೆ ಸೂಚಿಸಿದಂತೆ ಏಪ್ರಿಲ್ ಅಂತ್ಯದ ವೇಳೆಗೆ ಮಳೆ ಆಗಮನವಾಗುವ ಸಾಧ್ಯತೆ ಇದೆ ಎಂಬುವ ಸೂಚನೆಯನ್ನು ನೀಡಿತು. ಕೆಲವೊಂದಿಷ್ಟು ಕಡೆ ತುಂತುರು ಮಳೆಯಾಗಿದ್ದು ಇನ್ನೂ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಾ ಇದೆ. ಏಪ್ರಿಲ್ 28ರಿಂದ ಮೇ 1 ರವರೆಗೆ ನಾಲ್ಕು ದಿನ ರಾಜ್ಯಾದ್ಯಂತ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವೆಡೆ ತುಂತುರು ಮಳೆ ಆಗಬಹುದು. ನಂತರ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿ ಭೂಮಿ ಮೇಲ್ಮೈ ಮೇಲೆ ತೀವ್ರವಾಗಿ ಬೀಸುತ್ತಿರುವ ಚಂಡಮಾರುತ ಪರಿಚಲನೆ ಕಾರಣವಾಗಿದೆ.
ಈಗಾಗಲೇ ಮಳೆ ಕಾರಣ ಅನೇಕ ಊರುಗಳಲ್ಲಿ ಮರ ಬಿದ್ದಿವೆ. ವಿದ್ಯುತ್ ಕೂಡ ಇಲ್ಲ. ಇದರಿಂದ ಜನತೆಗೆ ಭಾರೀ ತೊಂದರೆ ಆಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.