Categories
ತೀರ್ಥಹಳ್ಳಿ ಮಲ್ನಾಡ್

ನಾಗಪಾತ್ರಿ ನಾಗರಾಜ್ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್

ನಾಗಪಾತ್ರಿ ನಾಗರಾಜ್ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್
– ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ
– ಧಾರ್ಮಿಕ ಹಾಗೂ ಅಷ್ಟಮಂಗಲ ಕ್ಷೇತ್ರದ ಸೇವೆಗೆ ಮನ್ನಣೆ

NAMMUR EXPRESS NEWS
ತೀರ್ಥಹಳ್ಳಿ: ಧಾರ್ಮಿಕ ಹಾಗೂ ಅಷ್ಟಮಂಗಲ ಕ್ಷೇತ್ರದ ಸೇವೆಗಾಗಿ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರದ ನಾಗರಾಜ್ ಕುಲಕರ್ಣಿ ಆವರು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. AICAಯಿಂದ ಆಯೋಜಿಸಲಾದ ಏಷ್ಯಾ ಇಂಟರ್ನ್ಯಾಷನಲ್ ಸೆಮಿನಾರ್ನಲ್ಲಿ ಸಕ್ರಿಯವಾಗಿ ಜ್ಯೋತಿಷ್ಯ ಮತ್ತು ಅಸ್ತಮಂಗಕ್ಕೆ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆಗಾಗಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ವೇಳೆ ಕರ್ನಾಟಕ ಯೂತ್ ವೆಲ್ವೇರ್ ಅಸೋಸಿಯೇಷನ್ ಸಂಸ್ಥೆ ವತಿಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಶ್ರಮಿಸಿರುವುದನ್ನು ಪರಿಗಣಿಸಿ ಗಣ್ಯ ವ್ಯಕ್ತಿಗಳಿಂದ ಸೇವಾ ಯೋಧ ರಾಜ್ಯ ರತ್ನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.

ಕೆ ನಾಗರಾಜ್ ಕುಲಕರ್ಣಿ ಇವರು ನಾಗಪಾತ್ರಿಯರಾಗಿದ್ದು, ಸುಮಾರು 15 ವರ್ಷಗಳಿಂದ ಸಹಸ್ರಾರು ಭಕ್ತರ ಕಷ್ಟಕಾರ್ಪಣ್ಯಗಳನ್ನು ನಾಗದರ್ಶನದ ಮೂಲಕ ಪರಿಹರಿಸಿದ್ದು ಇವರ ಈ ಸಾಧನೆ ಮೂಲಕ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಿಯಾಲಿಟಿ ಇಂಟರ್‌ನ್ಯಾಶನಲ್ ಸ್ಪೋರ್ಟ್ಸ್ ಅಕಾಡೆಮಿ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಿ ಗೌರವಿಸಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.