ಬಾಳೆಬೈಲು ಸಾವಿನ ರಸ್ತೆ ಆಯ್ತಾ…?
– ಭೀಕರ ಅಪಘಾತ: ಓರ್ವ ಯುವಕ ಸ್ಥಳದಲ್ಲೇ ಸಾವು
– ಒಂದು ವರ್ಷದಿಂದ ಹಲವು ಅಪಘಾತ: ಹಲವರು ದುರ್ಮರಣ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ರಸ್ತೆ ಈಗ ಅಪಘಾತ ವಲಯವಾಗಿ ಪರಿವರ್ತನೆ ಆಗಿದೆ. ಕಳೆದ ಒಂದು ವರ್ಷದಲ್ಲಿ ಹಲವು ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಹಾಗೆಯೇ ಬುಲೆರೋ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಾಳೆಬೈಲ ಸಮೀಪ ಮಂಗಳವಾರ ನಡೆದಿದೆ.
ಚರಣ್ ( 23 ವರ್ಷ ) ಸ್ಥಳದಲ್ಲೇ ಸಾವನಪ್ಪಿದ್ದಾನೆ. ಹುಂಚದಕಟ್ಟೆಯ ನಿಟ್ಟೂರು ಸಮೀಪದ ಯುವಕ ಮನೆಗೆ ವಾಪಸಾಗುವಾಗ ಈ ಘಟನೆ ಸಂಭವಿಸಿದೆ. ಅಪಘಾತವಾದ ಕೂಡಲೇ ತಕ್ಷಣ ಯುವಕ ನನ್ನ ಆಸ್ಪತ್ರೆಗೆ ರವಾನಿಸಿದ್ದು ಆಸ್ಪತ್ರೆಗೆ ಸಾಗಿಸುವಾಗ ಯುವಕ ಮೃತಪಟ್ಟಿದ್ದಾನೆ.
ಚರಣ್ ಮೃತ ದೇಹ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಅಪಘಾತ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸಿಬ್ಬಂದಿ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಬುಲೆರೋ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
