ಕಾಂತಾರ-1 ಮೋಡಿ ಶುರು..!
– ವಿಜಯ ದಶಮಿಯಂದೇ ತೆರೆಗೆ ಬರಲಿದೆ ಸಿನಿಮಾಕ್ಕೆ ಕ್ಯೂ
– ಟ್ರೈಲರ್ ಬಿಟ್ಟು ಕುತೂಹಲ ಮೂಡಿಸಿದ ಸಿನಿಮಾ ತಂಡ
– ಕನ್ನಡದ ಮಣ್ಣಿನ ಸಿನಿಮಾ ಈಗ ಭಾರತದ ಕ್ರಶ್..!
NAMMUR EXPRESS NEWS
ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿಗೆ ಭಾಜನವಾದ, ಕಾಂತಾರ ಚಿತ್ರದ ಮೊದಲ ಭಾಗ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಹಲವಾರು ಅಡೆತಡೆ, ಅಪಘಾತ, ಅವಘಡಗಳನ್ನು ಎದುರಿಸಿ, ಕೊನೆಗೂ ಬಿಡುಗಡೆಗೆ ಸಿದ್ಧಗೊಂಡಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಿಭಿನ್ನ ಸೆಟ್ ಹಾಕಿ ನಿರ್ಮಿಸಿರುವ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಸಾವಿರಾರು ಕಲಾವಿದರು ಈ ಸಿನಿಮಾಕ್ಕೆ ದುಡಿದಿದ್ದಾರೆ.
ಕನ್ನಡ ಅಷ್ಟೇ ಅಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಯಾರಾದ ಈ ಚಿತ್ರವು ಚೀನಾವನ್ನು ಹೊರತುಪಡಿಸಿ, ಪ್ರಪಂಚದಾದ್ಯಂತ ಅಕ್ಟೋಬರ್ 2ರ ಗಾಂಧಿಜಯಂತಿ ಮತ್ತು ವಿಜಯದಶಮಿ ದಿನದಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಸೆ. 26ರಂದು ಕರ್ನಾಟಕ ಮಾತ್ರವಲ್ಲದೆ ದೇಶ, ವಿದೇಶದಲ್ಲಿ ತೆರೆ ಕಾಣುತ್ತಿದೆ.
ಕಾಂತಾರ ಚಿತ್ರ ಬಿಡುಗಡೆಗೊಂಡು, ಮೂರು ವರ್ಷಗಳು ಕಳೆದ ನಂತರ, ಅದರ ಎರಡನೇ ಭಾಗ ಬಿಡುಗಡೆಗೊಳ್ಳುತ್ತಿರುವುದು ಚಿತ್ರರಸಿಕರಲ್ಲಿ ಕುತೂಹಲವನ್ನು ಕೆರಳಿಸಿದೆ. ಕಾಂತಾರ ಚಿತ್ರಕ್ಕಿಂತ ಈ ಚಿತ್ರವು ದೊಡ್ಡಮಟ್ಟದಲ್ಲಿ ನಿರ್ಮಾಣಗೊಂಡಿದೆ.
3000 ಕಲಾವಿದರು ಬಣ್ಣ ಹಚ್ಚಿದ ಸಿನಿಮಾ!
ಕಾಂತಾರ ಸುಮಾರು 16 ಕೋಟಿ ಬಜೆಟ್ ಅಲ್ಲಿ ನಿರ್ಮಾಣಗೊಂಡು 400 ಕೋಟಿ ಗಳಿಕೆ ಮಾಡಿ ವಿಶ್ವದ ಎಲ್ಲೆಡೆ ಜನಪ್ರಿಯತೆ ಗಳಿಸಿತ್ತು. ಇದೀಗ ಕಾಂತಾರ -1 ಸಿನಿಮಾ 125 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈಗಾಗಲೇ ಆಮೇಜಾನ್ ಡಿಜಿಟಲ್ 125 ಕೋಟಿಗೆ ಡಿಜಿಟಲ್ ಹಕ್ಕು ಪಡೆದುಕೊಂಡಿದೆ. ಮೊದಲ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಯಾಗಿ ಕಾಣಿಸಿಕೊಂಡ್ರೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ ನಟಿಯಾಗಿದ್ದಾರೆ.
ಕಾಂತಾರ -1 ಸಿನಿಮಾದಲ್ಲಿ 3000 ಕಲಾವಿದರು ಬಣ್ಣಹಚ್ಚಿದ್ದು, 50 ಸಾಹಸ ಕಲಾವಿದರು, 40 ಸಂಗೀತಕಾರರು ಸೇರಿ 5000 ಮಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹೊಂಬಾಳೆ ನಿರ್ಮಾಣ ಸಂಸ್ಥೆಯು ಕಾಂತಾರ -2 ಚಿತ್ರವನ್ನು ನಿರ್ಮಿಸಿದ್ದು, ಕ್ರಿ.ಶ.ನಾಲ್ಕನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಬಿಡುಗಡೆ ಪೂರ್ವ ತಯಾರಿ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಚಿತ್ರದ ಪ್ರಚಾರ ಪ್ರಾರಂಭವಾಗಲಿದೆ. ಆದರೆ, ಚಿತ್ರದ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸದೆ, ಚಿತ್ರರಸಿಕರು ತುದಿಗಾಲಿನಲ್ಲಿ ನಿಂತು ಬಿಡುಗಡೆಗೆ ಕಾಯುವಂತೆ ಮಾಡಿದೆ ಚಿತ್ರತಂಡ. ಚಿತ್ರವು ಸಾವಿರ ಕೋಟಿ ಲಾಭವನ್ನು ಗಳಿಸಬಹುದು ಎಂದು ಚಿತ್ರತಂಡವು ಅಭಿಪ್ರಾಯಪಟ್ಟಿದೆ.
ಬಿಡುಗಡೆಗೂ ಮೊದಲೇ, ದೇಶದ ವಿವಿಧ ಭಾಗಗಳಲ್ಲಿ ಕಾಂತಾರದ ಹಕ್ಕುಗಳನ್ನು ಪಡೆಯಲಾಗಿದ್ದು, ನೂರು ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸುವ ಮೂಲಕ ವಾರ್-2 ಚಿತ್ರವನ್ನು ಹಿಂದಿಕ್ಕಿದೆ. ಈಗಾಗಲೇ ಟ್ರೈಲರ್ ಸುಮಾರು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್, ಉತ್ತರ ಭಾರತ ಮತ್ತು ನೇಪಾಳದಲ್ಲಿ ಎಎ ಫಿಲಮ್ಸ್, ಪಾರ್ಸ್ ಫಿಲಂ ಕೋ ಎಲ್ಎಲ್ ಸಿ ಸಂಸ್ಥೆಗೆ ಓವರ್ ಸೀಸ್ ಹಕ್ಕನ್ನು ನೀಡಲಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿನ ಚಿತ್ರದ ಹಕ್ಕನ್ನು ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಎಲ್ಲರೂ ಕನ್ನಡದ ಸಿನಿಮಾವನ್ನು ಚಿತ್ರ ಮಂದಿರಗಳಿಗೆ ನೋಡಿ ಪ್ರೋತ್ಸಾಹ ಮಾಡಿ.. ಗೆಲ್ಲಿಸಿ..
ಚಿತ್ರ ತಂಡಕ್ಕೆ ಶುಭಾಶಯಗಳು
ನಮ್ಮೂರ್ ಎಕ್ಸ್ ಪ್ರೆಸ್ ಕರ್ನಾಟಕ
