ರಾಜ್ಯ ಕಂಡ ಅಪರೂಪದ ರಾಜಕಾರಣಿ ಕಿಮ್ಮನೆ ರತ್ನಾಕರ್
– ವಕೀಲರಾಗಿ, ರಾಜಕಾರಣಿಯಾಗಿ ನೊಂದವರಿಗೆ ಬೆಳಕು
– ಮಲೆನಾಡ ಆಗ್ರ ಪಂಕ್ತಿ ನಾಯಕರಲ್ಲಿ ಕಿಮ್ಮನೆ ಒಬ್ಬರು
ವೃತ್ತಿಯಲ್ಲಿ ವಕೀಲರಾಗಿ, ರಾಜಕೀಯ ಕ್ಷೇತ್ರದಲ್ಲಿ ದಕ್ಷತೆಯಿಂದ ಜನರ ನಂಬಿಕೆ ಗಳಿಸಿದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್. ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ಶಿಕ್ಷಣ ಸಚಿವರಾಗಿ, ಕಾಂಗ್ರೆಸ್ ವಕ್ತಾರರಾಗಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ, ಮಲೆನಾಡ ಅಗ್ರ ಪಂಕ್ತಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ,ಸಾರ್ವಜನಿಕ ಸೇವೆಯನ್ನು ಬಹಳ ಮುಖ್ಯವಾಗಿ ನೋಡಿಕೊಂಡು, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಕೀಲರಾಗಿ ಸೇವೆ ಸಲ್ಲಿಸುತ್ತಲೇ ಜನರ ಪ್ರೀತಿ ಗಳಿಸಿ ಮಾದರಿ ಜನ ನಾಯಕರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 1951ರಲ್ಲಿ ಕಿಮ್ಮನೆಯಲ್ಲಿ ಜನಿಸಿದ ಇವರು, ತಮ್ಮ ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮತ್ತು ಪದವಿಯನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1966ರಲ್ಲಿ ಬಿ.ಎಮ್.ಎಸ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ.
ರಾಜಕೀಯ ವೃತ್ತಿ ಜೀವನ
ಕಿಮ್ಮನೆ ರತ್ನಾಕರ್ ರವರು 1978 ಮತ್ತು 1983ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ಹಾಗೂ 1982 ಮತ್ತು 2005ರಲ್ಲಿ
ತೀರ್ಥಹಳ್ಳಿಯ ಲಾ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. 2008 ರಿಂದ 2013 ರವರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಕರ್ನಾಟಕದ ವಿಧಾನಸಭಾ ಸದಸ್ಯರಾಗಿದ್ದರು. 2013ರಲ್ಲಿ ಕೆಜೆಪಿಯ ಆರ್.ಎಂ ಮಂಜುನಾಥ ಗೌಡ ಅವರನ್ನು 1343 ಮತಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ವಿಧಾನಸಭೆಯ ಸದಸ್ಯರಾಗುವುದರೊಂದಿಗೆ 2013 ರಿಂದ 2016 ರವರೆಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದರು.
2018ರಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ವಿರುದ್ಧ 21,679 ಮತಗಳಿಂದ ಸೋತರು. ಶಿಕ್ಷಣ ಸಚಿವರಾಗಿ ಅನೇಕ ಯೋಜನೆ ಕರ್ನಾಟಕದ ಮಾಜಿ ಸಚಿವರು ಹಾಗೂ ವೃತ್ತಿಪರ ವಕೀಲರಾಗಿರುವ ಕಿಮ್ಮನೆ ರತ್ನಾಕರ್ ರವರು ಶಿಕ್ಷಣವನ್ನು ಆಧುನೀಕರಿಸಲು ಡಿಸೆಂಬರ್ 20, 2015ರಂದು ಉಚಿತ ರೋಬೋಮೇಟ್ ಅಪ್ಲಿಕೇಷನನ್ನು ಉದ್ಘಾಟಿಸಿದರು. ಶಾಲೆಗಳಲ್ಲಿ ಇರುವ ಅಭದ್ರತೆಗಳನ್ನು ಗಮನಿಸಿದ ಇವರು ಎಲ್ಲಾ ಶಾಲೆಗಳಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ಶೌಚಾಲಯ, ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳುವುದರೊಂದಿಗೆ, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದಾಯದ ಜನರಿಗೆ ಸೌಲಭ್ಯಗಳನ್ನು ಒದಗಿಸಲು ಹೊಸ ಹೊಸ ಯೋಜನೆ ಮಾಡಿದರು. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ದ ಸಮರ ಸಾರಿದ್ದರು.
ರಾಜಕೀಯದಲ್ಲಿ ತಮ್ಮ ಶ್ರದ್ಧೆ, ಪ್ರಾಮಾಣಿಕತೆ
ನ್ಯಾಯಬದ್ಧ ಮತ್ತು ದಿಟ್ಟ ನಾಯಕತ್ವದಿಂದ ಗುರುತಿಸಿಕೊಂಡು ತಮ್ಮ ಕ್ಷೇತ್ರದ ಮತ್ತು ರಾಜ್ಯದ ಜನರಿಗೆ ಅಭಿವೃದ್ಧಿಯ ಹೊಸ ಆಯಾಮಗಳನ್ನು ನೀಡಲು ನಿರಂತರ ಪ್ರಯತ್ನಿಸುತ್ತಿರುವ ಕಿಮ್ಮನೆ ಅವರು ರಾಜ್ಯ ಕಂಡ ಅಪರೂಪದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇವರ ರಾಜಕೀಯ ಸೇವೆಗೆ ನೂರಾರು ಗೌರವಗಳು ಸಂದಿವೆ.
ಸಿ.ಎಂ ಆಗುವ ಅರ್ಹತೆ ಉಳ್ಳ ನಾಯಕ!
ರಾಜ್ಯದಲ್ಲಿ ಸಿಎಂ ಆಗುವ ಅರ್ಹತೆ ಉಳ್ಳ ಒಕ್ಕಲಿಗ ನಾಯಕರಲ್ಲಿ ಕಿಮ್ಮನೆ ರತ್ನಾಕರ್ ಕೂಡ ಒಬ್ಬರು. ಈ ಬಗ್ಗೆ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ.
