Categories
ಚಿಕ್ಕಮಗಳೂರು ಮಲ್ನಾಡ್

ಕೊಪ್ಪ ಶಮಿತಾ ಅನುಮಾನಾಸ್ಪದ ಸಾವು ಪ್ರಕರಣ: ಬೀದಿಗಿಳಿದ ಎಬಿವಿಪಿ

ಕೊಪ್ಪ ಶಮಿತಾ ಅನುಮಾನಾಸ್ಪದ ಸಾವು ಪ್ರಕರಣ: ಬೀದಿಗಿಳಿದ ಎಬಿವಿಪಿ

* ಕೊಪ್ಪದಲ್ಲಿ ಸುರಿವ ಮಳೆಯಲ್ಲೂ ಪ್ರತಿಭಟನೆ
* ಕೊಪ್ಪ ಮೊರಾರ್ಜಿ ವಸತಿ ಶಾಲೆ ಪ್ರಿನ್ಸಿಪಲ್ ಸಸ್ಪೆಂಡ್ ಮಾಡಿ ಆದೇಶ

NAMMMUR EXPRESS NEWS
ಕೊಪ್ಪ: ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೂ.28 ರಂದು 9 ನೇ ತರಗತಿ ವಿದ್ಯಾರ್ಥಿನಿ ಶಮಿತಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ಶಮಿತಾ ಸಾವಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಪ್ಪ ಚಲೋ ಮೂಲಕ ಬೀದಿಗಿಳಿದಿದೆ.
ನಗರದ ವಾಟರ್ ಟ್ಯಾಂಕ್‌ನಿಂದ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು ನಂತರ ಸುರಿವ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲೇ ಕುಳಿತು ಶಾಲೆಯ ಅವ್ಯವಸ್ಥೆ, ಸಿಬ್ಬಂದಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸುವಂತೆ ಮತ್ತು ಸೂಕ್ತ ತನಿಖೆ ನಡೆಸುವಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

* ಮೊರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಲ್ ಸಸ್ಪೆಂಡ್
ಪ್ರಕರಣದ ಕುರಿತು ಶಾಲೆಯ ಅವ್ಯವಸ್ಥೆ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಈಗ ವಸತಿ ಶಾಲೆಯ ಪ್ರಿನ್ಸಿಪಲ್ ರಜನಿ ಹಾಗೂ ವಾರ್ಡನ್ ಸುಂದರ ನಾಯ್ಕ್‌ನನ್ನು ಸಸ್ಪೆಂಡ್ ಮಾಡಲಾಗಿದೆ.
ಕರ್ತವ್ಯಲೋಪದ ಆರೋಪದ ಮೇಲೆ ಪ್ರಿನ್ಸಿಪಲ್ ಹಾಗೂ ವಾರ್ಡನ್‌ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.