Categories
ಮಲ್ನಾಡ್

ಮಲೆನಾಡಲ್ಲಿ ತಂಪೆರೆದ ವರುಣ ದೇವ!!

ಮಲೆನಾಡಲ್ಲಿ ತಂಪೆರೆದ ವರುಣ ದೇವ!!

* ಬಿಸಿಲ ಬೇಗೆಗೆ ತತ್ತರಿಸಿದ ಮಲೆನಾಡು
* ಬೇಸಿಗೆಯ ಮೊದಲ ಮಳೆಗೆ ಅವಾಂತ ಸೃಷ್ಠಿ

NAMMUR EXPRESS NEWS
ಕಳಸ: ಈ ಬಾರಿ ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪಮಾನಕ್ಕೆ ಮಲೆನಾಡು ಕಾದ ಕಾವಲಿಯಂತಾಗಿತ್ತು. ಸುಡು ಬಿಸಿಲಿನ ಜಳಕ್ಕೆ ಜನರು ಬಸವಳಿದು ಹೋಗಿದ್ದರು. ನಿನ್ನೆ ಸಂಜೆ ಕಳಸ ಸುತ್ತಮುತ್ತಾ ವರುಣದೇವ ತಂಪೆರೆದಿದ್ದಾನೆ. ಇದರಿಂದ ಬಿಸಿಲಿಗೆ ಸೊರಗಿದ್ದವರಿಗೆ ವರುಣ ಕೊಂಚ ರಿಲೀಫ್ ನೀಡಿದ್ದಾನೆ. 20 ನಿಮಿಷ ಸಾಧಾರಣ ಮಳೆಯಾಗಿದ್ದು,
ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದಂತೆಯೇ ಕಾಫಿ, ಅಡಿಕೆ ತೋಟಗಳಿಗೆ ಒಂದು ತಿಂಗಳಿಂದ ಕೃಷಿಕರು ನೀರನ್ನು ಹಾಯಿಸುತ್ತಿದ್ದರು. ಆದರೆ ಮಳೆ ಕೊಂಚಮಟ್ಟಿಗೆ ಬಂದಿರುವುದರಿಂದ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ನೀರಿನ ಸೌಲಭ್ಯವುಳ್ಳ ದೊಡ್ಡ ರೈತರು ಮಾತ್ರ ಬೆಳೆಗಳಿಗೆ ನೀರನ್ನು ಹಾಯಿಸುತ್ತಿದ್ದರೆ ಸಣ್ಣ ಪುಟ್ಟ ಅಡಿಕೆ ಕಾಫಿ ಬೆಳಗಾರರು ಇದೇ ರೀತಿ ತಾಪಮಾನ ಮುಂದುವರೆದರೆ ಸೂರ್ಯನ ಶಾಖಕ್ಕೆ ಕಾಫಿಗಿಡಗಳು ನಾಶಗೊಳ್ಳುವ ಭೀತಿಯು ಎದುರಾಗಿದೆ. ಹೀಗಾಗಿ ಏಪ್ರಿಲ್, ಮೇ ತಿಂಗಳವರೆಗೆ ಈ ತಾಪಮಾನ ಹೇಗಪ್ಪ ಸಹಿಸುವುದು ಅಂತ ಮಲೆನಾಡಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಬೇಸಿಗೆಯ ಮೊದಲ ಮಳೆಗೆ ಅವಾಂತರ ಸೃಷ್ಟಿ.

ನಿನ್ನೆ ಸುರಿದ ಬೇಸಿಗೆಯ ಮೊದಲ ಮಳೆಗೆ ಅವಾಂತರ ಸೃಷ್ಟಿಯಾಗಿದೆ, ಭಾರೀ ಗಾಳಿಗೆ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರಿನ ಗ್ಲಾಸ್ ಪುಡಿ-ಪುಡಿಯಾಗಿದೆ.
ಕಳಸ ತಾಲೂಕಿನ ಹಿರೇಬೈಲ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸದಿಂದ ಬೆಂಗಳೂರಿಗೆ ಕಾರು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಒಣಗಿ ನಿಂತಿದ್ದ ಸಾಧಾರಣ ಮರವೊಂದು ಬಿದ್ದ ಪರಿಣಾಮ ಕಾರಿನ ಗ್ಲಾಸ್ ಪುಡಿಯಾಗಿದೆ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವು ಗೊಳಿಸುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ. ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಬಹುತೇಕ ಮಳೆಯಾಗಿದ್ದು ಕೆಲವೆಡೆ ಧಾರಾಕಾರ ಮಳೆಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.