Categories
ಮಲ್ನಾಡ್

ಅ. 3ಕ್ಕೆ ರಾಜಧಾನಿಯಲ್ಲಿ ಮಲೆನಾಡ ಸಾಂಸ್ಕೃತಿಕ ಸಮಾಗಮ!

ಅ. 3ಕ್ಕೆ ರಾಜಧಾನಿಯಲ್ಲಿ ಮಲೆನಾಡ ಸಾಂಸ್ಕೃತಿಕ ಸಮಾಗಮ!
– ಮಲೆನಾಡು ಮಿತ್ರ ವೃಂದದಿಂದ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರು ಪ್ರಶಸ್ತಿ ಪ್ರದಾನ ಸಮಾರಂಭ
– ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ: ಸರ್ವರಿಗೂ ಸ್ವಾಗತ

NAMMUR EXPRESS NEWS
ಮಲೆನಾಡು ಮಿತ್ರ ವೃಂದ (ರಿ.) ಬೆಂಗಳೂರು ಇವರಿಂದ 2025ನೇ ಸಾಲಿನ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾಗೂ ಮಲೆನಾಡು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು 3 ಆಗಸ್ಟ್ 2025, ಭಾನುವಾರ, ಸಂಜೆ 4.00 ಗಂಟೆಗೆ ಡಾ.ರಾಜ್‌ಕುಮಾರ್ ಕಲಾ ಭವನ, ಮಹಾಲಕ್ಷ್ಮೀಪುರ, ಬೆಂಗಳೂರಿನಲ್ಲಿ ನೆರವೇರಲಿದೆ.
ಮಲೆನಾಡು ಮಿತ್ರ ಪ್ರಶಸ್ತಿ-2025 ಅನ್ನು ಬಿ.ಕೆ.ಸುಮಿತ್ರ ಖ್ಯಾತ ಗಾಯಕಿ ಹಾಗೂ ಮಲೆನಾಡು ಸಾಧಕ ಪ್ರಶಸ್ತಿ-2025 ಅನ್ನು ಅಚ್ಚುತ್ ಗೌಡ ಉದ್ಯಮ ಕ್ಷೇತ್ರ, ರಿತುಪರ್ಣ ಶಿಕ್ಷಣ ಹಾಗೂ ಸಾಧನೆ ಕ್ಷೇತ್ರ, ರೆಹಮತ್ ಹೊಸನಗರ ಕೃಷಿ ಕ್ಷೇತ್ರಕ್ಕೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸಂಜೆ 4.00 ಗಂಟೆಯಿಂದ ಜಗದೀಶ್ ಕಣದಮನೆ, ಪ್ರದೀಪ್ ಯಡದಾಳ್, ಭಾಗ್ಯಶ್ರೀ ಗೌಡ, ಹಾಗೂ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ., ಮಲೆನಾಡು ಭಾಷೆಯ ಕಿರು ನಗೆ ನಾಟಕವನ್ನು ಗುತ್ತುಳಿಕೆ ಕೇಶವ್ ತಂಡದವರಿಂದ ಆಯೋಜನೆ, ಸ್ಯಾಕ್ಸೋಫೋನ್ ಹಾಗೂ ಕೊಳಲು ವಾದನ ಅಶೀಶ್ ದೇವಾಡಿಗ ತಂಡದವರಿಂದ ಆಯೋಜನೆ ಮಾಡಲಾಗಿದೆ. ಸಭಾ ಕಾರ್ಯಕ್ರಮ ಸಂಜೆ 5.30 ಗಂಟೆಯಿಂದ ಶುರುವಾಗಲಿದೆ.
ನಾಡಗೀತೆಯನ್ನು ಫಿಲಂ ಫೇರ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಗಾಯಕಿ
ಡಾ.ಶಮಿತ ಮಲ್ನಾಡ್ ಇವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರದೀಪ್ ಹೆಗ್ಗೋಡು ಅಧ್ಯಕ್ಷರು, ಮಲೆನಾಡು ಮಿತ್ರ ವೃಂದ ಇವರು, ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ, ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ಹಾಗೂ ಮಾಜಿ ಸಚಿವರಾದ ಕೆ.ಗೋಪಾಲಯ್ಯ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತವನ್ನು ಪ್ರದೀಪ್ ಹೆಗ್ಗೋಡ್, ಹರೀಶ್ ಹಿಂಬ್ರವಳ್ಳಿ, ಸಂದೇಶ್ ಹಂದಿಗೋಡ್ ಹಾಗೂ ಮಲೆನಾಡು ಮಿತ್ರ ವೃಂದದ ಎಲ್ಲಾ ನಿರ್ದೇಶಕರು ಕೋರಿದ್ದಾರೆ.

ಪ್ರಶಸ್ತಿ ಪುರಸ್ಕೃತರು

ಮಲೆನಾಡು ಮಿತ್ರ ಪ್ರಶಸ್ತಿ-2025 ಅನ್ನು ಬಿ.ಕೆ.ಸುಮಿತ್ರ ಖ್ಯಾತ ಗಾಯಕಿ ಹಾಗೂ ಮಲೆನಾಡು ಸಾಧಕ ಪ್ರಶಸ್ತಿ-2025 ಅನ್ನು ಅಚ್ಚುತ್ ಗೌಡ ಉದ್ಯಮ ಕ್ಷೇತ್ರ, ರಿತುಪರ್ಣ ಶಿಕ್ಷಣ ಹಾಗೂ ಸಾಧನೆ ಕ್ಷೇತ್ರ, ರೆಹಮತ್ ಹೊಸನಗರ ಕೃಷಿ ಕ್ಷೇತ್ರಕ್ಕೆ ನೀಡಲಾಗುವುದು.

ಸರ್ವರಿಗೂ ಕಾರ್ಯಕ್ರಮಕ್ಕೆ ಸುಸ್ವಾಗತ
ಪ್ರದೀಪ್ ಹೆಗ್ಗೋಡು
ಅಧ್ಯಕ್ಷರು, ಮಲೆನಾಡು ಮಿತ್ರ ವೃಂದ (ರಿ)
ಬೆಂಗಳೂರು 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.