ಮಲೆನಾಡಿಗರ ಸಿನಿಮಾ ಜಲಪಾತಕ್ಕೆ ಪ್ರಶಸ್ತಿ ಗರಿ!
– ಚಿತ್ತಾರ ಸ್ಟಾರ್ ಅವಾರ್ಡ್: ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಹೆಮ್ಮೆ
– 50 ದಿನ ಪೂರೈಸಿದ ಉತ್ತಮ ಸಿನಿಮಾ: ನಿರ್ಮಾಪಕ ಲ್, ನಿರ್ದೇಶಕರ ಧನ್ಯವಾದ
NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ: ಅಪ್ಪಟ ಪರಿಸರ ಕಾಳಜಿಯ ಸಾಮಾಜಿಕ ಸಂದೇಶ ಹೊತ್ತು ಬಂದ ಮಲೆನಾಡ ಕಲಾವಿದ, ತಂತ್ರಜ್ಞರೇ ಸೇರಿ ಮಾಡಿದ ಸಿನಿಮಾ ಜಲಪಾತಕ್ಕೆ ಈಗ ಮತ್ತೊಂದು ಪ್ರಶಸ್ತಿ ಸಿಕ್ಕಿದೆ.
ಪರಿಸರ ಕ್ಷೇತ್ರ ದಲ್ಲೆ ತೊಡಗಿಕೊಂಡ ರವೀಂದ್ರ ತುಂಬರಮನೆ ಇವರ ವಿಚಾರ ಧಾರೆ ಮತ್ತು ನಿರ್ಮಾಣದ ಜಲಪಾತ ಬಿಡುಗಡೆ ಆಗಿ ತಿಯೇಟರ್ ಲ್ಲಿ 50 ದಿನ ಪೂರೈಸಿ, ಉತ್ತಮ ಐ ಎಂ ಡಿ ಬಿ ರೇಟಿಂಗ್ ದಾಖಲಿಸಿ ಪ್ರತಿಷ್ಠಿತ ಆಮೇಜಾನ್ ಪ್ರೈಮ್ ನಲ್ಲೂ ಬಿಡುಗಡೆ ಆಗಿತ್ತು. ಕನ್ನಡ ಸಿನಿಮಾ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿತ್ತು. ಇದೀಗ ಜಲಪಾತ ಕಿರೀಟಕ್ಕೆ ಮತ್ತೊಂದು ಹೆಗ್ಗಳಿಕೆಯ ಗರಿ ಸೇರಿದೆ.
ಕನ್ನಡ ಸಿನಿಮಾ ರಂಗದ ಮುಂಚೂಣಿ ಮ್ಯಾಗಜಿನ್ ಚಿತ್ತಾರ ಪ್ರತೀ ವರ್ಷ ಏರ್ಪಡಿಸುವ ಚಂದನ ವನ ಸಂಭ್ರಮ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ – ಈ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.
ಮಲೆನಾಡ ತಂಡಕ್ಕೆ ಇದು ಚೊಚ್ಚಲ ಪ್ರಶಸ್ತಿ ಸಂಭ್ರಮ. ನಮಗೆ ವೋಟ್ ಮಾಡಿದ ಎಲ್ಲಾ ಹಿತೈಷಿಗಳಿಗೂ, ಸಿನಿಮಾಕ್ಕೆ ಪ್ರೋತ್ಸಾಹ ಮಾಡಿದ ಸರ್ವರಿಗೂ, ತೀರ್ಪುಗಾರ ಮಂಡಳಿಗೂ, ಜಲಪಾತ ತಂಡದ ಪರವಾಗಿ ನಿರ್ಮಾಪಕ ರವೀಂದ್ರ ತುಂಬರಮನೆ, ನಿರ್ದೇಶಕ ರಮೇಶ್ ಬೇಗಾರ್ ಧನ್ಯವಾದ ಅರ್ಪಿಸಿದ್ದಾರೆ.
