Categories
ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಮಲ್ನಾಡ್ ಟಾಪ್ 3 ನ್ಯೂಸ್

ಮಲ್ನಾಡ್ ಟಾಪ್ 3 ನ್ಯೂಸ್

ಹೊಸನಗರ : ಹುಲ್ಲು ತರಲು ಗದ್ದೆಗೆ ಹೋದಾಗ ಹಾವು ಕಚ್ಚಿ ವ್ಯಕ್ತಿ ಸಾವು..!!
– ಚಿಕ್ಕಮಗಳೂರು: ಸಾಮಾಜಿಕ-ಶೈಕ್ಷಣಿಕ ಸರ್ವೆಗೆ ಹೋದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ..!!
– ಶಂಕರಘಟ್ಟ : ಶಾರ್ಟ್ ಸರ್ಕ್ಯೂಟ್ ನಿಂದ ಧಗಧಗ ಹೊತ್ತಿ ಉರಿದ ಬೇಕರಿ..!!

NAMMUR EXPRESS NEWS
ಹೊಸನಗರ: ಹುಲ್ಲು ಕೊಯ್ಯುವಾಗ ಹಾವು ಕಚ್ಚಿ ರೈತರೊಬ್ಬರು ಮೃತಪಟ್ಟಿದ್ದಾರೆ. ಹೊಸನಗರ ತಾಲೂಕು ಮುತ್ತೂರು ಗ್ರಾಮದ ಗದ್ದೆಯಲ್ಲಿ ಘಟನೆ ಸಂಭವಿಸಿದೆ. ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರಿನ ರೈತ ಹುಚ್ಚನಾಯ್ಕ (65) ಸಾವಿಗೀಡಾದವರು. ದನಗಳಿಗೆ ಹುಲ್ಲು ಕೊಯ್ದು ತರಲು ಗದ್ದೆಗೆ ಹೋದಾಗ ಹಾವು ಕಚ್ಚಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಚಿಕ್ಕಮಗಳೂರು: ಸಾಮಾಜಿಕ-ಶೈಕ್ಷಣಿಕ ಸರ್ವೆಗೆ ಹೋದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ..!!

ಚಿಕ್ಕಮಗಳೂರು: ಸರ್ವೆಗೆ ಹೋದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ತಾಲೂಕಿನ ಬನ್ನೂರು ಗ್ರಾಮದಲ್ಲಿ ಆ.9ರ ಗುರುವಾರ ನಡೆದಿದೆ. ಕೃಷ್ಣಪ್ಪ (54) ನಾಯಿ ದಾಳಿಗೆ ಒಳಗಾದ ಶಿಕ್ಷಕ. ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸರ್ವೆ ಹಿನ್ನೆಲೆ ಶಿಕ್ಷಕ ಕೃಷ್ಣಪ್ಪ ಅವರು ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮಕ್ಕೆ ಸರ್ವೆಗೆ ಹೋದ ವೇಳೆ ಘಟನೆ ನಡೆದಿದೆ. ಕೃಷ್ಣಪ್ಪ ಅವರ ಕಾಲಿನ ಭಾಗಕ್ಕೆ ಬೀದಿ ನಾಯಿ ಕಚ್ಚಿದ್ದು, ಸುಮಾರು 1 ಇಂಚು ಆಳಕ್ಕೆ ನಾಯಿ ಹಲ್ಲು ನಾಟಿದೆ ಎನ್ನಲಾಗಿದೆ. ಗಾಯಾಳು ಕೃಷ್ಣಪ್ಪ ಅವರಿಗೆ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಮನೆಗಳಲ್ಲಿ U.H.I.D. ನಂಬರ್ ಪಂಡಿಂಗ್ ತೋರಿಸುತ್ತಿದ್ದು, ಮೀಟರ್ ಬೋರ್ಡಿನ ಆರ್.ಆರ್. ನಂಬರ್ ತರಲು ಹೋದಾಗ ಶಿಕ್ಷಕನಿಗೆ ನಾಯಿ-ದಾಳಿ ನಡೆಸಿದೆ.

– ಶಂಕರಘಟ್ಟ : ಶಾರ್ಟ್ ಸರ್ಕ್ಯೂಟ್ ನಿಂದ ಧಗಧಗ ಹೊತ್ತಿ ಉರಿದ ಬೇಕರಿ..!!

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಮುಂಭಾಗ ಬೇಕರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬೇಕರಿಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ. ಶಂಕರಘಟ್ಟ ಮುಖ್ಯ ರಸ್ತೆಯಲ್ಲಿರುವ ಬೇಕರಿಯಲ್ಲಿ ರಾತ್ರಿ 3 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಯವರು, ಸ್ಥಳೀಯರು ಎಚ್ಚರವಾಗಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೇಕರಿ ಒಳಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಭದ್ರಾವತಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.