20 ಲಕ್ಷ ಕದ್ದು ಗೋವಾದಲ್ಲಿ ಇಸ್ಪೀಟ್ ಆಡಿದವ ಅರೆಸ್ಟ್!
– ಶಿವಮೊಗ್ಗದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್
– ಮೂಡಿಗೆರೆಯಲ್ಲಿ ಮರದಲ್ಲೇ ವಿದ್ಯುತ್ ಶಾಕ್: ಸಾವು
– ಕಡೂರು: ದೇಗುಲ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ!
– ಭದ್ರಾವತಿ: ನೀರು ಕೇಳಿಮಾಂಗಲ್ಯ ಕದ್ದ ಕಳ್ಳನಿಗೆ ಜೈಲು!
– ಮಗನ ಚೇಡಿಸಿದ್ದನ್ನು ಕೇಳಿದ ತಂದೆ ಮೇಲೆ ಹಲ್ಲೆ
– ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ!
– ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು!
NAMMUR EXPRESS NEWS : ಕುಡಿಯುವ ನೀರಿನ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂಪಾಯಿಯನ್ನು ಕದ್ದೊಯ್ದ ಪ್ರಕರಣವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಶಿವಮೊಗ್ಗ ಸಿಟಿಯಲ್ಲಿನ 24*7 ಕುಡಿಯುವ ನೀರು ಸರಬರಾಜು ಕಾಮಗಾರಿಯ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ರವರು ಕಾರ್ಮಿಕರಿಗೆ ವೇತನ ನೀಡಲು 20 ಲಕ್ಷ ರೂಪಾಯಿ ಕ್ಯಾಶ್ ಹಿಡಿದುಕೊಂಡು ಬಂದಿದ್ದರು. ಅದನ್ನ ಜ್ಯೋತಿ ನಗರದ ಬಳಿಯಲ್ಲಿ ಅವರ ಕಾರಿನಚಾಲಕ ಕಿತ್ತುಕೊಂಡು ಪರಾರಿಯಾಗಿದ್ದ. ಜುಲೈ 29ರಂದು ಈ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ತುಂಗಾನಗರ ಪೊಲೀಸರು ಕೇಸ್ ದಾಖಲಿಸಿದ್ದರು. ಆರೋಪಿಗೆ ಆತನಿಗೆ ಕ್ಯಾಸಿನೋದಲ್ಲಿ ಜೂಜಾಡುವ ಚಟವಿತ್ತು ಎಂದು ತಿಳಿದ ಪೊಲೀಸರು ಗೋವಾದಲ್ಲಿ ಆರೋಪಿಯ ಇರುವಿಕೆಯನ್ನ ಪತ್ತೆ ಮಾಡಿದ್ದಾರೆ. ಅಲ್ಲಿಗೆ ತೆರಳಿದ್ದ ತನಿಖಾ ತಂಡ, ಕ್ಯಾಸಿನೋದಿಂದಲೇ ಆರೋಪಿಯನ್ನ ಬಂಧಿಸಿ ಕರೆತಂದಿದೆ. ಕದ್ದಿದ್ದ 20 ಲಕ್ಷ ರೂಪಾಯಿಯಲ್ಲಿ ಆರೋಪಿ ಅದಾಗಲೇ 12.39 ಲಕ್ಷ ರೂಪಾಯಿಯನ್ನು ಜೂಜಾಡಿ ಕಳೆದಿದ್ದ ಸದ್ಯ ಆತನಿಂದ 7.61 ಲಕ್ಷ ರೂಪಾಯಿಯನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಡೂರಿನಲ್ಲಿ ಕಳ್ಳತನ: ಕಳ್ಳನ ಹಿಡಿದ ಪೊಲೀಸರು!
ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಅನಿಲ್ ಕುಮಾರ್ ಡಿ.ಎಂ(30) ಬಂಧಿತ ಆರೋಪಿ ಆಗಿದ್ದಾನೆ. ಜೂನ್ ತಿಂಗಳಿನಲ್ಲಿ ಕಡೂರಿನ ಹೇಮಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ್ದ, ಸಿ.ಪಿ.ಐ. ಕಡೂರು ವೃತ್ತ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಹಾಸನ ಮತ್ತು ಮಂಡ್ಯ ಜಿಲ್ಲೆಗಳ ದೇವಸ್ಥಾನದ ಹುಂಡಿ ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯಿಂದ ಕಳವು ಮಾಡಿದ್ದ 20,150 ನಗದು ವಶಪಡಿಸಿಕೊಂಡಿದ್ದಾರೆ.
ಮಗನ ಚೇಡಿಸಿದಕ್ಕೆ ಕೇಳಿದ್ದಕ್ಕೆ ಮನ ಬಂದಂತೆ ಹಲ್ಲೆ!
ಪತ್ರಕರ್ತ ಮುದಾಸಿರ್ ಮತ್ತು ಅವರ 9 ವರ್ಷದ ಮಗನ ಮೇಲೆ ಮೇಲೆ ಹಲ್ಲೆ ನಡೆಸಲಾಗಿದೆ. ಮಗನ ಮೇಲೆ ಹಲ್ಲೆ ನಡೆಸಿದ ವಿಚಾರದಲ್ಲಿ ಮಾತುಕತೆಗೆ ಕರೆದು ಮುದಾಸೀರ್ ಮೇಲೆ ಹಲ್ಲೆ ನಡೆಸಿರುವುದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್ ಎಂ ಎಲ್ ನಗರದ ಖುಬ ಮಸೀದಿಯ ಬಳಿಯ ಅಂಗಡಿಗೆ ಹೊರಟಿದ್ದ ಮುದಾಸಿರ್ ಅವರ ಮಗ ಮಾನಸಿಕವಾಗಿ ಅಸ್ವಸ್ಥನಾಗಿರುವ ವಿಶೇಷ ಮಗುವಾಗಿದೆ. ಈತನನ್ನ ಚುಡಾಯಿಸಿ ಹಲ್ಲೆ ಮಾಡಲಾಗಿದೆ. ಮಗನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸ್ಥಳಕ್ಕೆ ಹೋಗಿ ತಂದೆ ಮುದಾಸಿರ್ ನೋಡಿದ್ದಾರೆ. ಮಗನನ್ನ ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಮಗನ ಮೇಲೆ ಹಲ್ಲೆ ನಡೆಸಿದವರು ಬನ್ನಿ ಮಾತನಾಡೋಣ ಎಂದು ನಂಬಿಸಿದ್ದಾರೆ. ಮಾತುಕತೆಗೆ ಮತ್ತೆ ಖುಬ ಮಸೀದಿ ಕಡೆ ತೆರಳಿದಾಗ ಮದಾಸಿರ್ ಮೇಲೆ ಹಲ್ಲೆ ನಡೆಸಲಾಗಿದೆ. ಎದೆಗೆ, ತಲೆಗ ಹಾಗೂ ಬೆನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿರುವವರನ್ನ ಸಲೀಂ, ಶಾಹೀದ್ ಮತ್ತು ಇತರರು ಎಂದು ಗುರುತಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು!
ಮರದಿಂದ ಕೆಳಗೆ ಬಿದ್ದು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾನ್‌ಬೈಲು ಗ್ರಾಮದಲ್ಲಿ ನಡೆದಿದೆ. ಲೋಕೇಶ್(40) ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ.ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್ ಮ್ಯಾನ್ ಆಗಿದ್ದ ಲೋಕೇಶ್ ಅವರು ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
ಬಿಜೆಪಿ ಶಾಸಕ ಚಂದ್ರಪ್ಪ ಹೆಸರು ಬರೆದಿಟ್ಟ ನೌಕರ ಆತ್ಮಹತ್ಯೆ!
ಬಿಜೆಪಿ ಶಾಸಕ ಎಂ ಚಂದ್ರಪ್ ಹೆಸರು ಬರೆದಿಟ್ಟು ಎಸ್ ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಎಸ್‌ಡಿಎ ತಿಪ್ಪೇಸ್ವಾಮಿ ಅವರು ಜಾನಕಲ್ ಬಳಿ ಆ.6ರಂದು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಅಮಾನತು ಬೆದರಿಕೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಮೃತ ತಿಪ್ಪೇಸ್ವಾಮಿ ಪುತ್ರ ರಾಜಶೇಖರಪ್ಪ ಎನ್ನುವರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಂಬೆ ಕಡಿಯಲು ಹೋಗಿ ಮರದಲ್ಲೇ ಮೃತಪಟ್ಟ ವ್ಯಕ್ತಿ!
ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ. ಲೋಕಪ್ಪಗೌಡ
(56)ಮೃತ ಪಟ್ಟ ವ್ಯಕ್ತಿ. ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲಿದ್ದನ್ನು ಕಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸಬ್ ಇನ್ ಸ್ಪೆಕ್ಟರ್ ವಿ. ಶ್ರೀನಾಥ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಬಾಳೂರು ಮೆಸ್ಕಾಂ ಕಿರಿಯ ಇಂಜಿನೀಯರ್ ಪ್ರಭಾಕರ್ ಹಾಗೂ ಸ್ಥಳಕ್ಕೆ ಆಗಮಿಸಿ ಮರದ ಮೇಲಿಂದ ಮೃತ ದೇಹ ಇಳಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ನೀರು ಕೇಳಿ, ಮಾಂಗಲ್ಯ ಕದ್ದ ಕಳ್ಳನಿಗೆ ಜೈಲು!
ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ, ಮನೆಯಲ್ಲಿದ್ದ ಗೃಹಿಣಿಯ ಮೇಲೆ ಹಲ್ಲೆ ಮಾಡಿ, ಚಿನ್ನ ದುಡ್ಡು ಕದ್ದೊಯ್ದ ಆರೋಪಿಗೆ ಬರೋಬ್ಬರಿ 8 ವರ್ಷಗಳ ನಂತರ ಶಿಕ್ಷೆಯಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ನಾಪುರ ವಾಸಿ 60 ವರ್ಷದ ಮಹಿಳೆಯೊಬ್ಬರು ದಿನಾಂಕಃ 13-01-2015 ರಂದು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು. ಇಲ್ಲಿನ ನಿವಾಸಿ ಕುಮಾರ ಎಂಬಾತ, ಮಹಿಳೆಯ ಮನೆಗೆ ಬಂದು ನೀರು ಕೇಳಿದ್ದ. ಆನಂತರ ಮಹಿಳೆಯು ನೀರು ತರಲು ಅಡುಗೆ ಮನೆಗೆ ಹೋದಾಗ ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು, ಕೆಳಗೆ ಬೀಳಿಸಿ ತಲೆದಿಂಬಿನಿಂದ ಮುಖಕ್ಕೆ ಒತ್ತಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದ. ಅಲ್ಲದೆ, ಮಾಂಗಲ್ಯ ಸರ, ಹಣ ಮತ್ತು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದ, ಈ ಸಂಬಂಧ 394 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.ಇದೇ ಪ್ರಕರಣ ಸಂಬಂಧ ಅಂದಿನ ತನಿಖಾಧಿಕಾರಿಗಳಾದ ಪ್ರಭು ಸೂರಿನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣ ಕುರಿತಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೀಲಜ್ಯೋತಿ ವಾದ ಮಂಡಿಸಿದ್ದರು. ಇದೀಗ, 04 ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಭದ್ರಾವತಿ ಪ್ರಕರಣ ವಿಚಾರಣೆ ಮುಗಿಸಿ ತೀರ್ಪು ನೀಡಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!

HOW TO APPLY : NEET-UG COUNSELLING 2023