Categories
ತೀರ್ಥಹಳ್ಳಿ ಮಲ್ನಾಡ್

ಮಗು ಕಾಪಾಡಿದ ಮಾರಿಕಾಂಬೆ!

ಮಗು ಕಾಪಾಡಿದ ಮಾರಿಕಾಂಬೆ!
– ಮನೆ ಸಮಸ್ಯೆ ಎಂದು ದೇವಸ್ಥಾನದಲ್ಲಿ ಮಗು ಬಿಟ್ಟು ಹೋಗಿದ್ದ ತಂದೆ!
– ಮಾನಸಿಕ ಸ್ಥಿಮಿತ ಕಳೆದುಕೊಂಡು ಆಸ್ಪತ್ರೆಗೆ ತೆರಳುವಾಗ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದಲ್ಲಿ ಸುಮಾರು ಒಂದೂವರೆ ವರ್ಷದ ಮಗುವನ್ನು ಬಿಟ್ಟು ತಂದೆಯೊಬ್ಬ ಪರಾರಿ ಆಗಿ ಬಳಿಕ ಮಗು ದೇವಸ್ಥಾನದಲ್ಲೇ ರಕ್ಷಿಸಿದ ಘಟನೆ ನಡೆದಿದೆ. ಅಚ್ಚರಿ ಎಂದರೆ ತಂದೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತ ಮಧ್ಯೆ ಕಾರು ನಿಲ್ಲಿಸಿದಾಗ ಇಷ್ಟೆಲ್ಲ ಅವಾಂತರ ಮಾಡಿದ್ದಾನೆ.
ಪೊಲೀಸರು, ಸ್ಥಳೀಯರು, ಭಕ್ತರು ಅಳುತ್ತಾ ನಿಂತಿದ್ದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸಿಸಿಟಿವಿ ನೋಡಿದಾಗ ಗಂಡಸು ಮಗು ಬಿಟ್ಟು ಹೋಗಿ ದೊಡ್ಡ ಸುದ್ದಿ ಆಗಿತ್ತು. ಇದೀಗ ಅವರ ಕುಟುಂಬದವರ ಮಧ್ಯಸ್ಥಿಕೆ ವಹಿಸಿ ಪೊಲೀಸರಿಗೆ ಮಾಹಿತಿ ನೀಡಿ ಮಗು ಕರೆದುಕೊಂಡು ಹೋಗಿದ್ದಾರೆ.

ನಡೆದಿದ್ದು ಏನು?

ತೀರ್ಥಹಳ್ಳಿ ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಒಂದುವರೆ ವರ್ಷದ ಪುಟಾಣಿ ಮಗುವೊಂದು ಪತ್ತೆಯಾಗಿತ್ತು. ದೇವಸ್ಥಾನ ಸಮಿತಿ ಮತ್ತು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾರಿಕಾಂಬ ದೇವಸ್ಥಾನದ ಸಿಸಿಟಿವಿ ಪರಿಶೀಲಿಸಿದ ನಂತರ ಓರ್ವ ಗಂಡಸು ಮಗು ಬಿಟ್ಟು ಹೋಗಿರುವುದು ಗೊತ್ತಾಗಿತ್ತು. ಈ ಬಗ್ಗೆ ಫೋಟೋ ಎಲ್ಲೆಡೆ ಶೇರ್ ಆಗಿತ್ತು. ಶಿಕಾರಿಪುರ ಮೂಲದ ಜಯ್ಯದ್ ಜುಬೆರ್ ಅವರನ್ನು ಮಂಗಳೂರು ಮಾರ್ಗ ತಪಾಸಣೆಗೆ ಕರೆದುಕೊಂಡು ಹೋಗುವಾಗ ತೀರ್ಥಹಳ್ಳಿ ಇಂದಿರಾನಗರದ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆತ ದೇವಸ್ಥಾನ ಬಳಿ ಬಂದಿದ್ದಾನೆ. ಅಲ್ಲೇ ಮಗು ಬಿಟ್ಟು ಹೋಗಿದ್ದಾನೆ. ಬಳಿಕ ಕುಟುಂಬದವರಿಗೆ ಗೊತ್ತಾಗಿ ಸ್ಥಳಕ್ಕೆ ಬಂದಿದ್ದು ಆತ ತನ್ನ ಮಾನಸಿಕ ಸಮಸ್ಯೆ ಬಗ್ಗೆ ಮಾತನಾಡಿದ್ದಾನೆ. ಮಾರಿಕಾಂಬೆ ದೇವರು ಮಗು ಕಾಪಾಡಿದೆ. ಬೇರೆ ಅಪಾಯದ ಜಾಗದಲ್ಲಿ ಮಗು ಬಿಟ್ಟಿದ್ದರೆ ಕಥೆ ಏನು ಎಂಬ ಚರ್ಚೆ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.