ಎನ್. ಆರ್. ಪುರ ಕಾಡು ಆನೆ ದಾಳಿ: 70 ಅಡಿಕೆ ಮರ ಪುಡಿ ಪುಡಿ!
– ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸದಸ್ಯರು
– ಕೊಪ್ಪದಲ್ಲಿ ಬಾಲಾಜಿ ಹೋಟೆಲ್ ಮುಳ್ಳುಗುಡ್ಡೆ ಹೋಟೆಲ್ ಉದ್ಘಾಟನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಎನ್.ಆರ್ ಪುರ: ಹೊನ್ನೇಕೊಡುಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಲೂರು ಗ್ರಾಮದ ರೈತ ಚೆಲುವ ಅವರ ಅಡಿಕೆ ತೋಟಕ್ಕೆ ಮುಂಜಾನೆ ಕಾಡಾನೆ ದಾಳಿ ನಡೆಸಿ 70ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾನಿಗೊಳಿಸಿರುವ ದುರ್ಘಟನೆ ಕುರಿತು ಮಾಹಿತಿ ಪಡೆದು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಲು, ಭದ್ರಾ ಹಿನ್ನೀರು ಕಡಿಮೆಯಾಗುತ್ತಿರುವ ಹಿನ್ನೆಲೆ ಆನೆಗಳ ಓಡಾಟ ಹೆಚ್ಚುತ್ತಿರುವುದರಿಂದ ರೈಲ್ವೆ ಬ್ಯಾರಿಕೇಡ್ ಬೇಲಿ ನಿರ್ಮಿಸಲು ಆಗ್ರಹಿಸಲಾಯಿತು. ಶೃಂಗೇರಿ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ, ಪ್ರಮುಖರಾದ ರಾಘವೇಂದ್ರ ಇತರರು ಇದ್ದರು.
ಕೊಪ್ಪದಲ್ಲಿ ಬಾಲಾಜಿ ಹೋಟೆಲ್ ಮುಳ್ಳುಗುಡ್ಡೆ ಹೋಟೆಲ್ ಉದ್ಘಾಟನೆ
ಕೊಪ್ಪ: ಕೊಪ್ಪ ಪಟ್ಟಣದಲ್ಲಿ ಹೋಟೆಲ್ ಉದ್ಯಮಿ ಪುನೀತ್ ರವರ ಮತ್ತೊಂದು ಹೋಟೆಲ್ ಶಾಖೆ ಭಾನುವಾರ ಅದ್ದೂರಿಯಾಗಿ ಆರಂಭಗೊಂಡಿದೆ. ಈಗಾಗಲೇ ದಕ್ಷಿಣ ಕನ್ನಡ ಭಾಗದಲ್ಲಿ ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಮೂಡಿಸಿಕೊಂಡಿರುವ ಅವರು, ಕೊಪ್ಪ ಪಟ್ಟಣದ ಮಧ್ಯಭಾಗದಲ್ಲಿರುವ “ಶ್ರೀ ಬಾಲಾಜಿ ಹೋಟೆಲ್ ಮುಳ್ಳುಗುಡ್ಡೆ” ಎಂಬ ಹೊಸ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದು, ಸ್ಥಳೀಯರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶ ಹೊಂದಿದ್ದಾರೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ ರವರು ಹೋಟೆಲ್ ಪ್ರಾರಂಭೋತ್ಸವಕ್ಕೆ ಭೇಟಿ ನೀಡಿ ಶುಭಾಶಯಗಳನ್ನು ತಿಳಿಸಿದರು. ಕೊಪ್ಪ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಉದಯ್ ಸುವರ್ಣ ಹಾಗೂ ಹೋಟೆಲ್‌ನ ಸಹಪಾಲುದಾರರಾದ ದಿನೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
