Categories
ತೀರ್ಥಹಳ್ಳಿ ಮಲ್ನಾಡ್

ಗಾಂಜಾ ಮೇಲೆ ಪೊಲೀಸ್ ಅಲರ್ಟ್..!

ಗಾಂಜಾ ಮೇಲೆ ಪೊಲೀಸ್ ಅಲರ್ಟ್..!
– ಕೆಲವೆಡೆ ಗಾಂಜಾ ನಶೆ: ದಾರಿ ತಪ್ಪುತಿದ್ದಾರಾ ಯುವ ಜನತೆ
– ಮಲೆನಾಡು, ತೀರ್ಥಹಳ್ಳಿ ತಾಲೂಕಿನ ಹಲವೆಡೆ ಗಾಂಜಾ ಸೇವನೆ ಪ್ರಕರಣಗಳು ಪತ್ತೆ!

NAMMUR EXPRESS NEWS
ತೀರ್ಥಹಳ್ಳಿ/ಮಲೆನಾಡು: ಇಡೀ ರಾಜ್ಯಾದ್ಯಂತ ಇದೀಗ ಡ್ರಗ್ಸ್‌ ಘಮಲು ಆವರಿಸುತ್ತಿದೆ. ಆದರೆ ಮಲೆನಾಡಿನ ದಟ್ಟಕಾಡುಗಳಲ್ಲಿ ಕಳೆದ ಎರಡು ದಶಕದಿಂದ ದಂಧೆಯಾಗಿ ವಿಸ್ತರಿಸುತ್ತಿರುವ ಗಾಂಜಾ ಘಮಲನ್ನು ಮಾತ್ರ ಇನ್ನೂ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ತೀರ್ಥಹಳ್ಳಿಯಲ್ಲಿ ಹೆಚ್ಚಾಗಿದೆ . ಅದರಲ್ಲೂ ಗಾಂಜಾ ಮಾರಾಟ ಎಗ್ಗಿಲ್ಲದೇ ಸಾಗಿದ್ದು , ಯುವ ಸಮೂಹ ಗಾಂಜಾ ಸೇದಿ ಅರೆಪ್ರಜ್ಞಾ ಸ್ಥಿತಿಗೆ ತಲುಪಿ, ಮನಬಂದಂತೆ ವರ್ತಿಸೋದು ಕಾಮನ್ ಆಗಿದೆ. ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲ ಇದೆ ಎಂಬ ಆರೋಪ ಬಹಳ ದಿನದಿಂದ ಕೇಳಿಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದರೂ ಕೂಡ ಗಾಂಜಾ ಹಾವಳಿ ಕಡಿಮೆಯಾಗಿಲ್ಲ. ಆದರೂ ತೀರ್ಥಹಳ್ಳಿ ತಾಲೂಕಿನ ಹಲವೆಡೆ ಗಾಂಜಾ ಸೇವನೆಯ ಪ್ರಕರಣಗಳು ಪತ್ತೆಯಾಗುತ್ತಿದೆ.

ಪೊಲೀಸ್ ಇಲಾಖೆ ಖಡಕ್ ಕ್ರಮ

ಇತ್ತೀಚೆಗೆ ತೀರ್ಥಹಳ್ಳಿಯ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಅನೇಕ ಕಡೆ ದಾಳಿ ಮಾಡಿ ಗಾಂಜಾವನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೂ ಕೂಡ ಗಾಂಜಾ ನಶೆ ಕಡಿಮೆಯಾಗಿಲ್ಲ.

ಯುವಕರೇ ಗಾಂಜಾ ದಂಧೆ ಟಾರ್ಗೆಟ್!

ತೀರ್ಥಹಳ್ಳಿ ತಾಲೂಕು ಗಾಂಜಾದ ನಶೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಗಾಂಜಾ ಸಾಗಿಸುವವರು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ ಘಟನೆಗಳು ಎಲ್ಲೆಡೆ ವರದಿಯಾಗುತ್ತಿದೆ. ಅನೇಕ ಕಾಲೇಜುಗಳ ಬಳಿ ಇದರ ಮಾರಾಟ ನಡೆಯುತ್ತಿದೆ. ಆಗಾಗ್ಗೆ ನಡೆದ ದಾಳಿಯಲ್ಲಿ ಆರೋಪಿಗಳು ಸಿಕ್ಕಿ ಬೀಳುತ್ತಲೂ ಇದ್ದಾರೆ. ಇತ್ತೀಚೆಗೆ ಯುವಕರು ಹೆಚ್ಚು ಹೆಚ್ಚು ಇದರ ದಾಸರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಪೋಷಕರು ಆತಂಕದಲ್ಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.