ಸಹ್ಯಾದ್ರಿ ಸಂಘದ ವಾರ್ಷಿಕ ಕ್ರೀಡಾಕೂಟದ ರಂಗು!
– ಆಟ, ಓಟ, ಸಾಂಸ್ಕೃತಿಕ ಕಾರ್ಯಕ್ರಮ: ಸಾಧಕರಿಗೆ ಸನ್ಮಾನ: ಅಚ್ಚುಕಟ್ಟಿನ ಆಯೋಜನೆ
– 1500ಕ್ಕೂ ಹೆಚ್ಚು ಮಲೆನಾಡಿಗರ ಸಮಾಗಮ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಸಹ್ಯಾದ್ರಿ ಸಂಘದ ವತಿಯಿಂದ ಭಾನುವಾರ ನಡೆದ 20ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಮಲೆನಾಡಿಗರ ಸಮಾಗಮಕ್ಕೆ ಸಾಕ್ಷಿಯಾಯಿತು. ಬೆಂಗಳೂರಿನ ಸುಂಕದಕಟ್ಟೆಯ ಒಕ್ಕಲಿಗರ ಸಂಘದ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲಿಬಾಲ್, ಕಬಡ್ಡಿ, ತ್ರೋಬಾಲ್, ರನ್ನಿಂಗ್ ರೇಸ್ ಸೇರಿದಂತೆ ಅನೇಕ ಆಟಗಳು ಜನರ ಮನ ಸೆಳೆದವು. ಪುರುಷರು, ಮಹಿಳೆಯರು, ಮಕ್ಕಳು ಆಟ ಆಡಿ ಎಲ್ಲರೂ ಒಗ್ಗೂಡಿ ಕಾಲ ಕಳೆದರು. ವೇದಿಕೆ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪುಸ್ತಕ ಬಿಡುಗಡೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಡಗದ್ದೆ ಶ್ರೀನಿವಾಸಯ್ಯ ಲೇಖನದ ಕುವೆಂಪು ವಿರಚಿತ ಮಂತ್ರ ಮಾಂಗಲ್ಯ (ಮಂತ್ರ, ಸ್ತೋತ್ರಗಳ ಮಹತ್ವ ಮತ್ತು ವಿಶ್ಲೇಷಣೆ) ಪುಸ್ತಕ ಲೋಕಾರ್ಪಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ ಜಿ ದಿನೇಶ್ ದೇವವೃಂದ, ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕೆ ಸಿ ಗಿರೀಶ್, ಕ. ವಿ. ಪ್ರ. ನಿ. ನಿ ಉಪ ಪ್ರಧಾನ ವ್ಯವಸ್ಥಾಪಕ ಕೆ ಟಿ ಪ್ರದೀಪ್, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷರಾದ ಧರ್ಮೇಶ್ ಸಿರಿಬೈಲ್, ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ವಿ ಸುದರ್ಶನ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಅನೇಕ ಗಣ್ಯರು ಆಗಮಿಸಿ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಿ ಮೆಚ್ಚುಗೆಯ ಮಾತನಾಡಿದರು. ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಇತರೆ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ವಿಶೇಷ ಸಂಚಿಕೆ ಹಾಗೂ ವಿಶೇಷ ಕಾರ್ಯಕ್ರಮದ ವರದಿ ಸಹ್ಯಾದ್ರಿ ಸಂಭ್ರಮ ಶೀಘ್ರದಲ್ಲಿ ಪ್ರಕಟವಾಗಲಿದೆ… ನಿರೀಕ್ಷಿಸಿ…
