Categories
death ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಕೋಣಂದೂರಿನ ಹಿರಿಯ ಮುಖಂಡ ಹುಲ್ಲತ್ತಿ ಗಿರಿರಾಜ್ ಗೌಡ್ರು ವಿಧಿವಶ

ಕೋಣಂದೂರಿನ ಹಿರಿಯ ಮುಖಂಡ ಹುಲ್ಲತ್ತಿ ಗಿರಿರಾಜ್ ಗೌಡ್ರು ವಿಧಿವಶ
– ತೀರ್ಥಹಳ್ಳಿ ತಾಲೂಕಿಗೆ ಅಪೂರ್ವ ಕೊಡುಗೆ ನೀಡಿದ್ದ ಸಮಾಜ ಜೀವಿ
• ಅ.1ರಂದು ಕೋಣಂದೂರಿನಲ್ಲಿ ಅಂತ್ಯಕ್ರಿಯೆ: ಗಣ್ಯರ ಸಂತಾಪ

NAMMUR EXPRESS NEWS
ಕೋಣಂದೂರು /ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಹುಲ್ಲತ್ತಿ ಗಿರಿರಾಜ್ ಗೌಡ್ರು ಅವರು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ. ಇವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಕೋಣಂದೂರು ಪಂಚಾಯತ್ ಪ್ರಧಾನರಾಗಿ, ಕೋಣಂದೂರು ಗಣಪತಿ ಸಂಘದ ಅಧ್ಯಕ್ಷರಾಗಿ ಸುಮಾರು 40 ವರ್ಷಗಳ ಕಾಲ ಗಣೇಶೋತ್ಸವವನ್ನು ನಡೆಸಿದ್ದರು. ಕೋಣಂದೂರು ಎನ್. ಇ. ಎಸ್ ಸಂಸ್ಥೆಯ ಪ್ರಮುಖರಾಗಿ, ಸಮಾಜ ಸೇವಕರಾಗಿ, ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.

ಕೋಣಂದೂರು ಗ್ರಾಮ ಪಂಚಾಯಿತಿಗೆ ಇವರು ಹಾಗೂ ಇವರ ತಂದೆ ಸೇರಿ ಸುಮಾರು 5 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು. ರೋಟರಿ ಕ್ಲಬ್ ಗೆ ಸುಮಾರು 70ರಿಂದ 80 ಲಕ್ಷ ವೆಚ್ಚದ ನಿವೇಶನವನ್ನು ನೀಡಿದರು. ಇವರ ಸರಳ ಸಜ್ಜನಿಕೆ, ಸರಳ ವ್ಯಕ್ತಿತ್ವದ ಬಡವರ ಪರ ದನಿಯಾಗಿದ್ದ ನಾಯಕ ಇದೀಗ ನಿಧನರಾಗಿದ್ದು ತೀರ್ಥಹಳ್ಳಿಯ ಅನೇಕ ನಾಯಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಜೊತೆಗೆ ಅತ್ಯಂತ ಸರಳ ಸಜ್ಜನಿಕೆಯ ಅಪಾರ ಸ್ನೇಹಿತರನ್ನು ಹೊಂದಿದ್ದ ಹುಲ್ಲತ್ತಿ ಗಿರಿರಾಜ್ ಗೌಡ್ರು ಅವರ ನಿಧನ ಈಗ ತುಂಬಲಾರದ ನಷ್ಟವಾಗಿದೆ. ಇವರಿಗೆ ಎರಡು ಗಂಡು, ಒಂದು ಹೆಣ್ಣು ಮಕ್ಕಳಿದ್ದು, ಮೊಮ್ಮಕ್ಕಳನ್ನು ಹಾಗೂ ಕುಟುಂಬವನ್ನು ಅಗಲಿದ್ದಾರೆ.

 

ಅಕ್ಟೋಬರ್ 1ನೇ ತಾರೀಕು ಹುಲ್ಲತ್ತಿ ಕೋಣಂದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಇವರ ಸಾವಿಗೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಮಂಜುನಾಥ್ ಗೌಡ, ಒಕ್ಕಲಿಗ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಸ್ಥಳೀಯ ಮುಖಂಡರಾದ ಮಂಗಳ ಗೋಪಿ, ಕಂಪನಗದ್ದೆ ಸುರೇಶ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗಲಿದ ಹಿರಿಯ ನಾಯಕನಿಗೆ ನಮ್ಮೂರ ಎಕ್ಸ್ಪ್ರೆಸ್ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.