ಮಲ್ನಾಡ್ ಟಾಪ್ 3 ನ್ಯೂಸ್
ಶಿಕಾರಿಪುರ : ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಮಹಿಳೆ ಸಾವು !!
– ತೀರ್ಥಹಳ್ಳಿ : ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ಬೈಕ್ ಸವಾರನಿಗೆ ಗಾಯ !
– ಶಿವಮೊಗ್ಗ: ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹ ಪತ್ತೆ.!!
NAMMUR EXPRESS NEWS
ಶಿಕಾರಿಪುರ ; ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿಕಾರಿಪುರ ಪಟ್ಟಣದಿಂದ ಶಿರಾಳಕೊಪ್ಪ ಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಕುಮದ್ವತಿ ನದಿ ಸೇತುವೆ ಸಮೀಪ ನಡೆದಿದೆ. ಮೃತಪಟ್ಟ ಮಹಿಳೆ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ರೂಪ (40) ಎಂದು ಗುರುತಿಸಲಾಗಿದೆ. ರೂಪ ತಮ್ಮ ಪತಿ ಕಾಂತರಾಜ್ ಹಾಗೂ ಸಹೋದರಿ ರೇಖಾ ಜೊತೆ ಕಾರಿನಲ್ಲಿ ಸೊರಬ ತಾಲ್ಲೂಕಿನ ಆನವಟ್ಟಿಗೆ ತೆರಳುತ್ತಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿದೆ. ಮೃತ ರೂಪಾ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರೂಪಾ ಪತಿ ಕಾಂತರಾಜ್ ಹಾಗೂ ರೂಪಾ ಸಹೋದರಿ ರೇಖಾ ಅವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಳಿಯಪ್ಪನ್, ಸೋಮಶೇಖರ್, ಸುರೇಶ್ ಕುಮಾರ್ ಹಾಗೂ ಯಮುನಪ್ಪ ಅವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
– ತೀರ್ಥಹಳ್ಳಿ : ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ಬೈಕ್ ಸವಾರನಿಗೆ ಗಾಯ !
ತೀರ್ಥಹಳ್ಳಿ ; ರಾಷ್ಟ್ರೀಯ ಹೆದ್ದಾರಿ ತೀರ್ಥಹಳ್ಳಿ – ಕೊಪ್ಪ ರಸ್ತೆ ಸಂಪರ್ಕಿಸುವ ರಸ್ತೆಯ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಗೋಳಿ ಜಾತಿಯ ಬೃಹತ್ ಮರವೊಂದು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಬುಧವಾರ ಸಂಜೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಮಧ್ಯ ರಸ್ತೆಗೆ ಮರ ಉರುಳಿ ಬಿದ್ದಿದೆ. ಇತ್ತೀಚಿಗೆ ರಸ್ತೆ ಕಾಮಗಾರಿ ವೇಳೆ ಸ್ವಲ್ಪ ಮಟ್ಟಿಗೆ ಮರದ ಬುಡವನ್ನು ತೆಗೆಯಲಾಗಿತ್ತು ಇದರಿಂದ ಇಂದು ಮರ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆಯೇ ಮರ ಬಿದ್ದಿದ್ದು ಆತನಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರದ ಕೆಳಗೆ ಬೈಕ್ ಸಿಲುಕಿದ್ದು ಅದನ್ನು ಹರಸಾಹಸ ಮಾಡಿ ತೆಗೆಯಲಾಗಿದೆ. ಕೆಲಕಾಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಪರ್ಯಾಯ ಮಾರ್ಗವಾಗಿ ಬುಕ್ಲಾಪುರ ಮೂಲಕ ವಾಹನಗಳು ಸಂಚರಿಸಿದವು.
– ಶಿವಮೊಗ್ಗ: ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹ ಪತ್ತೆ.!!
ಶಿವಮೊಗ್ಗ : ಲಾಡ್ಜ್ ಕೊಠಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಕೊಠಡಿ ಬಾಡಿಗೆಗೆ ಪಡೆದಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಹುಬ್ಬಳ್ಳಿ ಮೂಲದ ಬಸವರಾಜ್ ಬಾಗಲಕೋಟೆ (46) ಎಂಬುವವರು ಬಿ.ಹೆಚ್.ರಸ್ತೆಯ ದುರ್ಗಾ ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಬಸವರಾಜ್ ಬಾಗಲಕೋಟೆ ಬಾಗಿಲು ತೆರೆಯದ ಹಿನ್ನೆಲೆ ಇವತ್ತು ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಾಗಿಲು ತೆರೆದು ಕೊಠಡಿಯ ಒಳಗೆ ಶೋಧಿಸಿದರು. ಬಾತ್‌ರೂಮ್‌ನಲ್ಲಿ ಬಸವರಾಜ್ ಬಾಗಲಕೋಟೆ ಅಂಗಾತವಾಗಿ ಬಿದ್ದಿದ್ದರು ಎಂದು ಆರೋಪಿಸಲಾಗಿದೆ. ಕೂಡಲೆ ಲಾಡ್ಜ್ ಸಿಬ್ಬಂದಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಬಸವರಾಜ್ ಬಾಗಲಕೋಟೆ ಶಿವಮೊಗ್ಗದ ಆಟೋಮೊಬೈಲ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿದ್ದರು ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.