ಶಿವಮೊಗ್ಗ ಯುವ ದಸರಾ: ತೀರ್ಥಹಳ್ಳಿ RG ಫಿಟ್ನೆಸ್ ಕ್ಲಬ್ ಸಾಧನೆ
– ದರ್ಶನ್ ಆರ್ _ 55ಕೆಜಿ,. ಅರುಣ್ ಎಸ್_ 65ಕೆಜಿ, ಸಚಿನ್ ಎ_ 80ಕೆಜಿ ವಿಭಾಗದಲ್ಲಿ ಪ್ರಶಸ್ತಿ
– ದೇಹದಾರ್ಢ್ಯ ಸ್ಪರ್ಧೆಯನ್ನು ತೀರ್ಥಹಳ್ಳಿ ಹೆಸರು ಮೂಡಿಸಿದ ಯುವಕರು
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಜಿಲ್ಲೆ ದೇಹದಾರ್ಢ್ಯ ಪಟುಗಳ ಸಂಘ ಇವರ ಪ್ರಾಯೋಜಕತ್ವದೊಂದಿಗೆ 22 ಸೆಪ್ಟೆಂಬರ್ 2025 , ಸ್ಥಳ ಕುವೆಂಪುರಂಗ ಮಂದಿರ ಶಿವಮೊಗ್ಗದಲ್ಲಿ ನಡೆಸಿದ್ದು ತೀರ್ಥಹಳ್ಳಿ ದೇಹದಾರ್ಢ್ಯ ಪಟುಗಳು ಸಾಧನೆಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಹೆಚ್ಚು ದೇಹದಾರ್ಢ್ಯ ಪಟುಗಳು ರಾಜ್ಯದ ಎಲ್ಲಾ ಭಾಗಗಳಿಂದ ಬಂದು ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ನಮ್ಮ ತೀರ್ಥಳ್ಳಿಯ RG ಫಿಟ್ನೆಸ್ ಕ್ಲಬ್ ನ ಸದಸ್ಯರುಗಳಾದ ದರ್ಶನ್ ಆರ್ _ 55kg ದೇಹ ತೂಕ ವಿಭಾಗದಲ್ಲಿ ಭಾಗವಹಿಸಿದ್ದರು. ಅರುಣ್ ಎಸ್_ 65kg ದೇಹ ತೂಕ ವಿಭಾಗದಲ್ಲಿ ಭಾಗವಹಿಸಿ ಐದನೇ ಸ್ಥಾನ ಪಡೆದರು.
ಸಚಿನ್ ಎ_ 80kg ದೇಹ ತೂಕ ವಿಭಾಗದಲ್ಲಿ , ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (ಗೋಲ್ಡ್ ಮೆಡಲ್) ಗಳಿಸಿರುತ್ತಾರೆ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ (ಸಿಲ್ವರ್ ಮೆಡಲನ್ನು) ತಮ್ಮದಾಗಿಸಿಕೊಂಡಿರುತ್ತಾರೆ. ಹಾಗೂ ಸ್ಪರ್ಧೆಯಲ್ಲಿ ತೀರ್ಥಳ್ಳಿ ತಾಲೂಕನ್ನು ಪ್ರತಿನಿಧಿಸಿ ರಾಜ್ಯದಲ್ಲಿ ತಾಲೂಕಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿರುತ್ತಾರೆ.
