ಮಲ್ನಾಡ್ ಟಾಪ್ 4 ನ್ಯೂಸ್
ಸೊರಬ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವು..!!
– ರಿಪ್ಪನ್ ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ,ಓರ್ವ ಸ್ಥಳದಲ್ಲಿಯೇ ಸಾವು..!!
– ಭದ್ರಾವತಿ: ಸಿಎನ್ ಜಿ ಗ್ಯಾಸ್ ತುಂಬುವಾಗ ಉಂಟಾದ ಅವಘಡದಿಂದ ಯುವಕ ಸಾವು..!!
– ತೀರ್ಥಹಳ್ಳಿ : ಶಿವರಾಜಪುರ ಬಳಿ ಭೀಕರ ಅಪಘಾತ ಓರ್ವ ಸಾವು..!
NAMMUR EXPRESS NEWS
ಸೊರಬ : ಅಪರಿಚಿತ ವಾಹನದ ಡಿಕ್ಕಿಗೆ ಬಲಿಯಾಗಿದ್ದಾನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೊರಬ ಪುರಸಭೆ ವ್ಯಾಪ್ತಿಯ ಕೊಡಕಣಿ-ರೊಟ್ಟಿಕೆರೆ ನಡುವೆ ಸಂಭವಿಸಿದೆ. ಪಟ್ಟಣದ ಕಾನುಕೇರಿ ಬಡಾವಣೆ ನಿವಾಸಿ ಜಿಯಾವುಲ್ಲ (32) ಮೃತ ಬೈಕ್ ಸವಾರ. ಮೂಲತಃ ಶಿಕಾರಿಪುರದವರಾದ ಜಿಯಾವುಲ್ಲಾ ಪಟ್ಟಣದಲ್ಲಿ ಗಾರೆಕೆಲಸ ಮಾಡಿಕೊಂಡಿದ್ದರು. ಶಿರಾಳಕೊಪ್ಪ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ತಲೆಭಾಗಕ್ಕೆ ಗಂಭೀರ ಪ್ರಮಾಣದ ಗಾಯವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನ ತಂದೆ ಹುಸೇನ್ ಸಾಬ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ರಿಪ್ಪನ್ ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ,ಓರ್ವ ಸ್ಥಳದಲ್ಲಿಯೇ ಸಾವು..!!
ರಿಪ್ಪನ್ ಪೇಟೆ : ಕರು ತಪ್ಪಿಸಲು ಹೋಗಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ಮೂಗೂಡ್ತಿಯಲ್ಲಿ ನಡೆದಿದೆ. ಮೂಗೂಡ್ತಿ ನಿವಾಸಿ ಅರುಣ್(38) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಮೂಗೂಡ್ತಿ ಅರಣ್ಯ ಇಲಾಖೆಯ ಕಛೇರಿ ಮುಂಭಾಗದಲ್ಲಿ ಎದುರಿಗೆ ಬಂದ ಕರುವನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಈ ಅಪಘಾತದಲ್ಲಿ ಕರುವು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮೂಗೂಡ್ತಿ ಗ್ರಾಮದ ರುದ್ರಪ್ಪಗೌಡ ರವರ ಪುತ್ರನಾದ ಅರುಣ್ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
– ಭದ್ರಾವತಿ: ಸಿಎನ್ ಜಿ ಗ್ಯಾಸ್ ತುಂಬುವಾಗ ಉಂಟಾದ ಅವಘಡದಿಂದ ಯುವಕ ಸಾವು..!!
ಭದ್ರಾವತಿ: ಚಿತ್ರದುರ್ಗದಲ್ಲಿ ಸಿಎನ್ ಜಿ ಗ್ಯಾಸ್ ನ್ನ ಲಾರಿಯೊಂದಕ್ಕೆ ತುಂಬಿಸುವ ವೇಳೆ ಬ್ಲಾಸ್ಟ್ ಆದ ಕಾರಣ ಭದ್ರಾವತಿ ತಾಲೂಕಿನ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಚಿತ್ರದುರ್ಗದಲ್ಲಿ ಸಿಎನ್ ಜಿ ಗ್ಯಾಸ್ ನ್ನು ಲಾರಿಗೆ ಡಂಪ್ ಮಾಡುವಾಗ ಗ್ಯಾಸ್ ಬಸ್ಟ್ ಆಗಿದೆ. ಸಿಎನ್ ಜಿ ಗ್ಯಾಸ್ ನ್ನು ಲಾರಿಗೆ ತುಂಬಿಸಿ ಶಿವಮೊಗ್ಗದ ಕಡೆ ಹೊರಡುವಾಗ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಭದ್ರಾವತಿ ತಾಲೂಕಿನ ಗೋಣಿಬೀಡಿನ ಕಂಬದಾಳು ಹೊಸೂರಿನ ಯುವಕ ಲಕ್ಷ್ಮಣ ಎಂಬ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಲಕ್ಷ್ಮಣ್ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಚಲಾಯಿಸಿಕೊಂಡಿದ್ದು, ಇತ್ತೀಚೆಗೆ ಲಾರಿಗಳಿಗೆ ಸಿಎನ್ ಜಿ ಗ್ಯಾಸ್ ತುಂಬಿಸುವ ಕೆಲಸಕ್ಕೆ ಸೇರಿಕೊಂಡಿದ್ದರು. ಇವರ ಸಾವಿಗೆ ಏರ್ ಪೋರ್ಟ್ ನ ಟ್ಯಾಕ್ಸಿ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
– ತೀರ್ಥಹಳ್ಳಿ : ಶಿವರಾಜಪುರ ಬಳಿ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು..!
ತೀರ್ಥಹಳ್ಳಿ : ತಡ ರಾತ್ರಿ ಭೀಕರ ಅಪಘಾತವೊಂದು ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ಸಮೀಪದ ಶಿವರಾಜಪುರ ಬಳಿ ನಡೆದಿದೆ. ಮಂಗಳೂರಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ನಿದ್ರೆ ಮಂಪರಿನಲ್ಲಿ ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿ ಶಾಶ್ವತ್ (30 ವರ್ಷ) ಟೆಂಕ್ ಬೈಲು ನಿವಾಸಿಯಾಗಿದ್ದು ಡಿಸಿಸಿ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.