ಸೌಜನ್ಯ ಪ್ರಕರಣ: ಮಲೆನಾಡಲ್ಲಿ ಹೋರಾಟ!
– ಶೃಂಗೇರಿಯಲ್ಲಿ ಮರು ತನಿಖೆ ನಡೆಸುವಂತೆ ಎಬಿವಿಪಿ ಪಟ್ಟು
– ಕೊಪ್ಪ ಮೂಲದ ಯುವಕ ಅಪಘಾತಕ್ಕೆ ಬಲಿ
– ಚಿಕ್ಕಮಗಳೂರಲ್ಲಿ ಮುಂಜಾನೆ ಅಪಘಾತ
– ಕಡೂರು ಶಾಸಕರ ವಿರುದ್ಧ ಪೊಲೀಸ್ ಮೆಸೇಜ್!
NAMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಇದೀಗ ಮಲೆನಾಡಲ್ಲೂ ಹೋರಾಟ ಶುರುವಾಗಿದೆ.
ಶೃಂಗೇರಿಯಲ್ಲಿ ಮರು ತನಿಖೆ ನಡೆಸುವಂತೆ ಎಬಿವಿಪಿ ವತಿಯಿಂದ ಮನವಿ ಮಾಡಲಾಗಿದೆ. ಧರ್ಮಸ್ಥಳ ಮೂಲದ ವಿದ್ಯಾರ್ಥಿನಿಯಾದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು 2012 ರಲ್ಲಿ ನಡೆದಿತ್ತು. ಪ್ರಕರಣ ನಡೆದ ಮೊದಲ ದಿನದಿಂದಲೂ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ನಡೆಸಿ ಪ್ರಕರಣವನ್ನು ಭೇದಿಸಲು ಸಿ ಬಿ ಐ ತನಿಖೆಯನ್ನು ಆಗ್ರಹಿಸಿತ್ತು, ಎಬಿವಿಪಿಯ ಸಂಘಟಿತ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಿತು. ಅದರ ಸಿಬಿಐ ತನಿಖೆಯ ನಂತರ ನ್ಯಾಯಾಲಯದ ಅಂತಿಮ ತೀರ್ಪಿನಲ್ಲಿ ಕುಮಾರಿ ಸೌಜನ್ಯಳಿಗೆ ನ್ಯಾಯ ಸಿಗದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ .
ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಸೌಜನ್ಯಳ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ಕೂಡಲೆ ಮರು ತನಿಖೆಗೆ ಆದೇಶಿಸಬೇಕು.ತನ್ಮೂಲಕ ನೈಜ ಅಪರಾಧಿಗಳನ್ನು ಪತ್ತೆ ಮಾಡಿ ಬಂಧಿಸಿ ಕುಮಾರಿ ಸೌಜನ್ಯಳಿಗೆ ಹಾಗೂ ನೊಂದ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಬೇಕೆಂದು ಎ ಬಿ ವಿ ಪಿ ಆಗ್ರಹಿಸುತ್ತದೆ. ಒಂದು ವೇಳೆ ರಾಜ್ಯ ಸರ್ಕಾರವು ಮರು ತನಿಖೆಗೆ ಆದೇಶಿಸದೇ ನ್ಯಾಯ ಒದಗಿಸುವಲ್ಲಿ ವಿಫಲವಾದರ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಈ ಮೂಲಕ ಎಚ್ಚರಿಸುತ್ತೇವೆ.
ಜೊತೆಗೆ ಸೌಜನ್ಯ ಹಾಗೂ ಸಂಬಂಧಿತ ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಘನತೆಗೆ ಮತ್ತು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ರಾಜ್ಯ ಸರ್ಕಾರ ಗಮನಿಸಿ ಕೂಡಲೇ ಹತ್ತಿಕ್ಕಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ರಾಜ್ಯ ಕಾರ್ಯಕಾರಿಣಿ ಸದಸ್ಯ ಶೃಂಗ ಶೃಂಗೇರಿ, ನಗರ ಕಾರ್ಯದರ್ಶಿ ರಕ್ಷಿತ್, ಸಹ ಕಾರ್ಯದರ್ಶಿ ಸುಮಂತ್, ತಾಲೂಕು ಸಹ ಸಂಚಾಲಕ ಪ್ರಸಾದ್, ಸೋಶಿಯಲ್ ಮೀಡಿಯಾ ಪ್ರಮುಖ ಅನ್ವಿತ್ ಶೆಟ್ಟಿ, ಕ್ರೀಡಾ ಪ್ರಮುಖ ಚರಣ್, ವೀಕ್ಷಿತ್, ನಿತೀಶ್ ಭಟ್ ಇತರರು ಇದ್ದರು.
ಕೊಪ್ಪ ಮೂಲದ ಯುವಕ ಅಪಘಾತಕ್ಕೆ ಬಲಿ
ಎನ್.ಆರ್ ಪುರ ತಾಲೂಕಿನ ಬಿ.ಹೆಚ್ ಕೈಮರ ಸಮೀಪ ಮರವೊಂದಕ್ಕೆ ಇಂಡಿಕಾ ಕಾರು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಬಿ.ಹೆಚ್ ಕೈಮರ ಸಮೀಪದ ನಾರಾಯಣ ಗುರು ಸಭಾ ಭವನ ಸಮೀಪದ ಮರವೊಂದಕ್ಕೆ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಮೃತರನ್ನು ಕೊಪ್ಪ ತ್ಯಾಗರಾಜ ರಸ್ತೆಯಲ್ಲಿ ಶ್ರೀ ಮೊಬೈಲ್ ಅಂಗಡಿಯ ಮಾಲೀಕರಾದ ಶ್ರೀಧರ್ ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಲ್ಲಿ ಮುಂಜಾನೆ ಅಪಘಾತ
ಚಿಕ್ಕಮಗಳೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಅಪಘಾತ ಸಂಭವಿಸಿದೆ. ಸ್ಕೂಟಿ ಸವಾರರಿಗೆ ಫಾರ್ಚುನರ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ನಲ್ಲಿ ಬಂದಿದ್ದ ಪಾರ್ಸೆಲ್ ಅನ್ನು ತರಲು ಆಗಮಿಸಿದ್ದರು ಎನ್ನಲಾಗಿದೆ, ಅತಿ ವೇಗವಾಗಿ ಬಂದ ಫಾರ್ಚುನರ್ ಕಾರೊಂದು ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮಹಮ್ಮದ್ ಶಾದಾಬ್, ಮಹಮ್ಮದ್ ಶಕೀಲ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಡೂರು ಶಾಸಕರ ವಿರುದ್ಧ ಪೊಲೀಸ್ ಮೆಸೇಜ್!
ಕಡೂರು ಶಾಸಕ ಆನಂದ್ ವಿರುದ್ಧ ಇದೀಗ ಮಹಿಳಾ ಪೊಲೀಸ್ ಪೇದೆಯೊಬ್ಬರು ವಾಟ್ಸಾಪ್ ಸ್ಟೇಟಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲತಾ ಎಂಬ ಪೊಲೀಸ್ ಪೇದೆ ನನಗೆ ಏನಾದ್ರೂ ತೊಂದರೆ ಆದರೆ ಕಡೂರು ಶಾಸಕರೇ ಹೊಣೆ ಎಂದು ಸ್ಟೇಟಸ್ ಹಾಕಿರುವುದು ಇದೀಗ ಭಾರೀ ಸುದ್ದಿಗೆ ಕಾರಣ ಆಗಿದೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023