Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಭಾರೀ ಮಳೆಗೆ ಬೆಚ್ಚಿ ಬಿದ್ದ ಮಲೆನಾಡು!

ಭಾರೀ ಮಳೆಗೆ ಬೆಚ್ಚಿ ಬಿದ್ದ ಮಲೆನಾಡು!
– ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ: ವ್ಯಾಪಾರ ಡಲ್
– ಲಕ್ಷ್ಮಿ ಪೂಜೆ ದಿನವೇ ಮಳೆ, ಗಾಳಿ ಅಬ್ಬರ
– ತೀರ್ಥಹಳ್ಳಿ, ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ನೀರು ಏರಿಕೆ

NAMMUR EXPRESS NEWS
ಮಲೆನಾಡು: ಮಲೆನಾಡಲ್ಲಿ ದೀಪಾವಳಿ ಸಂಭ್ರಮವನ್ನು ಮಳೆ ಕಿತ್ತುಕೊಳ್ಳುತ್ತಿದೆ. ಕಳೆದ ಎರಡು ದಿನದಿಂದ ಭಾರೀ ಮಳೆ ಆಗುತ್ತಿದೆ. ಸೋಮವಾರ ಸಂಜೆಯಿಂದ ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಭಾರೀ ಮಳೆ ಆಗಿದೆ.
ವಾಯುಭಾರ ಕುಸಿತ ಎಫೆಕ್ಟ್ ಇಂದ ಭಾರಿ ಗುಡುಗು-ಮಳೆ ಅಬ್ಬರ ಜನರನ್ನು ಬೆಚ್ಚಿ ಬೀಳಿಸಿದೆ. ಶೃಂಗೇರಿ ಭಾಗದಲ್ಲಿ ಭಾರೀ ಮಳೆ ಕಾರಣ ತುಂಗಾ ನದಿಯಲ್ಲಿ ನೀರು ಏರಿಕೆ ಆಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಭಾರೀ ಮಳೆ ಆಗುತ್ತಿದೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಅಕ್ಟೋಬರ್‌ 24 ರವರೆಗೂ ಭಾರಿ ಮಳೆಯ ಅಲರ್ಟ್ ಕೊಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.