ಮಳೆಗಾಲದಲ್ಲಿ ಮಲೆನಾಡಿನ ವಿಶೇಷತೆ..!
– ಬಗೆ ಬಗೆಯ ಖಾದ್ಯಗಳ ಘಮ
– ಇಲ್ಲಿದೆ ಮಲೆನಾಡಿನ ವಿಶೇಷತೆ
NAMMUR EXPRES NEWS
ಮಲೆನಾಡು: ಮಳೆಗಾಲದ ಸಮಯ ಕೊರೆಯುವ ಚಳಿಯಲ್ಲಿ ಕಪ್ಪೆಗಳ ವಟವಟ ಸದ್ದು, ಜಿರಲೆ ಹುಳ ಹಪ್ಪಟ್ಟೆ ಗಳ ಚಲನ ವಲನಗಳು, ಅಣಬೆ ಸಾರು, ಮೀನು ಸಾರು, ಚಟ್ನಿ ಮಾಡುವುದು. ಏಡಿ ಸಾರು ಮಲೆನಾಡಿನಲ್ಲಿ ಮಳೆಗಾಲದ ವಿಶೇಷತೆಗಳು. ಬೇಸಿಗೆಯಲ್ಲಿ ಒಣಗಿಸಿ ಇಟ್ಟ ಹಲಸಿನ ಬೀಜ, ಗೇರು ಬೀಜ ಸುಟ್ಟು ತಿನ್ನುವುದು. ಸಂಜೆಯ ವೇಳೆಗೆ ಬೋಂಡಾ ಬಜ್ಜಿಗಳಂತ ಕುರುಕಲು ತಿಂಡಿಗಳಿಗಾಗಿ ಕಾಯುವ ಮಕ್ಕಳಿಗೆ ನಿತ್ಯ ಅಮ್ಮನ ಹೊಸ ಹೊಸ ಪ್ರಯೋಗಗಳು ನಿತ್ಯದ ಊಟಕ್ಕೆ ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳು, ಕರೆಂಟ್ ಇಲ್ಲದೆ ಒದ್ದಾಟ, ಕಿರಿದಾಗಿ ಉರಿಯುವ ಚಿಮಣಿ ದೀಪ, ಹಿಂದಿನ ಕಾಲದ ಕಥೆಗಳನ್ನು ಹಿರಿಯರ ಬಾಯಲ್ಲಿ ಕೇಳುತ್ತ ಮಕ್ಕಳೆಲ್ಲ ಕೂತು ಕಲ್ಪನಾ ಲೋಕಕ್ಕೆ ಜಾರುವುದು ಸಹ ಒಂದು ಸಮಾಚಾರವೇ ಸರಿ.
ಹೀಗೆ ಮಳೆಗಾಲದ ಮಲೆನಾಡು ಅನೇಕ ವಿಶಿಷ್ಟತೆ ಗಳನ್ನು ಕಣ್ಮುಂದೆ ತರಿಸುತ್ತವೆ. ರಾತ್ರಿ ನಿದ್ದೆ ಬಿಟ್ಟು ದೊಡ್ಡ ದೊಡ್ಡ ಮೀನು ಹಿಡಿಯಲು ಆಸೆ ಇಂದ ಹೋದ ಜನಕ್ಕೆ ಕಾಲಿ ಕೈ ಯಲ್ಲಿ ಬರುವುದು ಮನೆಯಲ್ಲಿ ಬೈಯಿಸಿಕೊಳ್ಳುವುದು ಎಲ್ಲಾ ಮಾಮೂಲಿ ಆಗಿರುತ್ತದೆ, ಆದರೂ ಸಹ ಮಲೆನಾಡಿನಲ್ಲಿ ಮೀನು ಹಿಡಿಯುವುದು ದೊಡ್ಡ ಆಸಕ್ತಿಯುತ ಚಟ ಎನ್ನಬಹುದು. ಇನ್ನು ಮಲೆನಾಡ ಸ್ಪೆಷಲ್ ಕಳಲೆ ಪಲ್ಯ, ಬಿದಿರಿನ ಎಳೆ ಹಂತವೇ ಈ ಕಳಲೆ. ಇದರ ಪಲ್ಯ ತುಂಬಾ ರುಚಿಯಾಗಿದ್ದು, ರೊಟ್ಟಿ ಕಡುಬು ಗಳಿಗೆ ಒಳ್ಳೆ ಕಾಂಬಿನೇಷನ್ ಎನ್ನಬಹುದು. ಕೆಸುವಿನ ಸೊಪ್ಪಿನ ಪಲ್ಯ. ಇದು ಒಂದು ಬುಡ ಕೆಸ ಇದ್ದರೆ ಸಾಕು ತನ್ನ ವಂಶವಾಹಿ ಅನ್ನು ಊರಗಲ ಹರಡಿಸುತ್ತದೆ. ಇದು ಸಹ ಕಡಬು ರೊಟ್ಟಿ ಅನ್ನ ಯೆಲ್ಲದ್ದಕು ಹೇಳಿ ಮಾಡಿಸಿದ್ದು. ಇನ್ನಾ ಹಲಸಿನ ಹಣ್ಣು ಮಳೆಗಾಲದ ಸಮಯದಲ್ಲಿ ಮಲೆನಾಡಿಗರ ಪ್ರತಿ ಮನೆಯ ತಿಂಡಿ ತಿನಿಸುಗಳ ಮೂಲ. ಹಲಸಿನ ಹಣ್ಣಿನ ದೋಸೆ, ಹಪ್ಪಳ, ಇಡ್ಲಿ, ಮುಳುಕ, ಕೊಟ್ಟೇಕಡುಬು, ಈ ತಿನಿಸುಗಳ ಜೊತೆ ತುಪ್ಪ, ನಾಟಿ ಕೋಳಿ ಸಾರು ಆಹಾ! ಎಂಥಾ ರುಚಿ….. ಬಾಯಲ್ಲಿ ನೀರೂರಿಸುತ್ತವೆ.
