Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಟಿ. ಎ. ಪಿ.ಎಂ. ಸಿ. ಎಸ್ ಬಿಜೆಪಿ ತೆಕ್ಕೆಗೆ!

ತೀರ್ಥಹಳ್ಳಿ ಟಿ. ಎ. ಪಿ.ಎಂ. ಸಿ. ಎಸ್ ಬಿಜೆಪಿ ತೆಕ್ಕೆಗೆ!
– 14 ಮಂದಿ ನಿರ್ದೇಶಕರು ಅವಿರೋಧ ಆಯ್ಕೆ: 11 ಮಂದಿ ಬಿಜೆಪಿ ಬೆಂಬಲಿತರು
– ಹೊಸ ಮುಖಗಳಿಗೆ ಅವಕಾಶ ಕೊಟ್ಟ ಬಿಜೆಪಿ: ಸಂಭ್ರಮೋತ್ಸವ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ತೀರ್ಥಹಳ್ಳಿ ಇದರ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ 14 ಮಂದಿ ಅವಿರೋಧ ಆಯ್ಕೆ ಆಗಿದ್ದಾರೆ. ಅಚ್ಚರಿ ಎಂದರೆ ಈ ಬಾರಿ ಬಿಜೆಪಿ ಬೆಂಬಲಿತ ಹೊಸ ಮುಖಗಳಿಗೂ ಅವಕಾಶ ಸಿಕ್ಕಿದೆ. ಹಾಲಿ ಅಧ್ಯಕ್ಷರು, ಹಿರಿಯ ಸಹಕಾರಿಗಳು ಆದ ನಾಗರಾಜ ಶೆಟ್ಟಿ ಅವರ ಸಾರಥ್ಯದಲ್ಲಿ ಮತ್ತೆ ಟಿ.ಎ.ಪಿ. ಎಂ ಎಸ್ ಬಿಜೆಪಿ ಪಾಲಾಗಿದೆ.
ಒಟ್ಟು 14 ಸ್ಥಾನದಲ್ಲಿ 11 ನಿರ್ದೇಶಕರು ಬಿಜೆಪಿ ಬೆಂಬಲಿತರಾಗಿದ್ದು, 3 ಕಾಂಗ್ರೆಸ್ ಬೆಂಬಲಿತರು, 1 ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯರಾಗಲಿದ್ದಾರೆ.
ಬಿಜೆಪಿ ಬೆಂಬಲಿತ ನಿರ್ದೇಶಕರಲ್ಲಿ ಯುವಕರಿಗೆ ಹೆಚ್ಚು ಒತ್ತು ನೀಡಿದ್ದು ಆರಗ ಪುತ್ರ ಅಭಿನಂದನ್, ಅಂಜೂರ ಕುಡುಮಲ್ಲಿಗೆ, ವಾಸು ಹಾರೋಗೋಳಿಗೆ ಅವಕಾಶ

ನೂತನ ನಿರ್ದೇಶಕರು

1. ನಾಗರಾಜ ಶೆಟ್ಟಿ
ಕೊಂಡ್ಲುಕೊಪ್ಪ ಸಂಕದಹೊಳೆ
ಅಂಚೆ ತೀರ್ಥಹಳ್ಳಿ ತಾಲ್ಲೂಕು.

2 ಶಿವಕುಮಾರ್ ಕೆ. ಎಸ್
ಕಾನುಕೊಪ್ಪ ಶೇಡ್ಗರ್ ಅಂಚೆ
ತೀರ್ಥಹಳ್ಳಿ ತಾಲೂಕು

3 ಸತೀಶ್ ಎಂ. ಆರ್
ಮಂಗಳ, ಕೋಣಂದೂರು ಅಂಚೆ
ತೀರ್ಥಹಳ್ಳಿ ತಾಲೂಕು

4. ಹರೀಶ್ ಡಿ ಜಿ
ದಾಸನ ಕೊಡಿಗೆ ನಂಬಳ ಗ್ರಾಮ
ಮೇಳಿಗೆ ಅಂಚೆ ತೀರ್ಥಹಳ್ಳಿ ತಾಲೂಕು

5 ರಾಘವೇಂದ್ರ ಕೆ.ಎಸ್
ಶೇಡ್ಗರ್
ಶೇಡ್ಗರ್ ಅಂಚೆ,
ತೀರ್ಥಹಳ್ಳಿ ತಾಲ್ಲೂಕು.

6. ವಾಸುದೇವ ಎನ್.ಜಿ
ಹಾರೋಗೊಳಿಗೆ
ಹಾರೋಗೊಳಿಗೆ ಅಂಚೆ
ತೀರ್ಥಹಳ್ಳಿ ತಾಲ್ಲೂಕು

7 ವಿಶ್ವನಾಥ್ ಡಿ. ಪಿ
ದೇಮ್ಹಾಪುರ
ದೇಮ್ಹಾಪುರ ಅಂಚೆ
ತೀರ್ಥಹಳ್ಳಿ ತಾಲ್ಲೂಕು.

8 ಬಾಬು
ಹೊಸಕೊಪ್ಪ
ಕುರುವಳ್ಳಿ ಅಂಚೆ
ತೀರ್ಥಹಳ್ಳಿ ತಾಲ್ಲೂಕು

9 ನಾಗರತ್ನ ಮುರುಗರಾಜ್
ಮುಖ್ಯರಸ್ತೆ ಕೋಣಂದೂರು
ಕೋಣಂದೂರು ಅಂಚೆ
ತೀರ್ಥಹಳ್ಳಿ ತಾಲ್ಲೂಕು

10 ವಿನಂತಿ ಎಸ್ ವಿ
ಹನ್ನೊಂದು ಖಂಡಗ
ದೇಮ್ಹಾಪುರ ಅಂಚೆ
ತೀರ್ಥಹಳ್ಳಿ ತಾಲ್ಲೂಕು

1 ಅಂಜೂರ ಕೆ ವಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕುಡುಮಲ್ಲಿಗೆ ಕುಡುಮಲ್ಲಿಗೆ ಅಂಚೆ. ತೀರ್ಥಹಳ್ಳಿ ತಾ.

2 ಅಭಿನಂದನ್ ಹೆಚ್ ಜೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಗುಡ್ಡೆಕೊಪ್ಪ,
ಗುಡ್ಡೆಕೊಪ್ಪ ಅಂಚೆ. ತೀರ್ಥಹಳ್ಳಿ ತಾ.

3 ದೇವರಾಜ ಡಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಹೇರಂಭಾಪುರ
ಮಕ್ಕಿಮನೆ ಅಂಚೆ. ತೀರ್ಥಹಳ್ಳಿ ತಾ.

4 ರಮೇಶ್ ಕೆ ಎಸ್
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.. ಕಡ್ತುರು
ಕಡ್ತುರು ಅಂಚೆ. ತೀರ್ಥಹಳ್ಳಿ ತಾ.

 

ಮತ್ತೆ ನಾಗರಾಜ್ ಶೆಟ್ಟಿ ಸಾರಥ್ಯ!

ತೀರ್ಥಹಳ್ಳಿ ಸಹಕಾರ ಕ್ಷೇತ್ರದ ಹಿರಿಯ ನಾಯಕ ಹಾಲಿ ಅಧ್ಯಕ್ಷರು ಆದ ನಾಗರಾಜ್ ಶೆಟ್ಟಿ ಅವರು 40 ವರ್ಷ ತೀರ್ಥಹಳ್ಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 4 ಬಾರಿ ಅಧ್ಯಕ್ಷರಾಗಿಇದೀಗ 5ನೇ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ತೀರ್ಥಹಳ್ಳಿ ಕೃಷಿಕರ ಸೌಹಾರ್ದ, ರಾಮೇಶ್ವರ ಸೊಸೈಟಿ ಸ್ಥಾಪಕ ಅಧ್ಯಕ್ಷರು, ಹಾಲಿನ ಸೊಸೈಟಿ, ಶಿವಮೊಗ್ಗ ಜನತಾ ಬಜಾರ್ ಸೊಸೈಟಿ ನಿರ್ದೇಶಕರಾಗಿ, ಅಡಿಕೆ ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕರು, ಅಡಿಕೆ ಮಹಾ ಮಂಡಲ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಹಕಾರ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಬಿಜೆಪಿಯ 7 ಮಂದಿ ಹೊಸ ಮುಖಕ್ಕೆ ಅವಕಾಶ

ಅಭಿನಂದನ್ ಆರಗ, ಅಂಜೂರ ಕುಡುಮಲ್ಲಿಗೆ, ವಾಸು ಹಾರೋಗೋಳಿಗೆ, ದೇವರಾಜ್, ರಾಘವೇಂದ್ರ ಕುಪ್ಪಳಿ, ವಿನಂತಿ, ಬಾಬು ಸೇರಿದಂತೆ ಹೊಸ ಮುಖಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.