Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್
ಚಿನ್ನದಂಗಡಿಯಲ್ಲಿ ಮಹಿಳೆಯರ ಕಳ್ಳತನ: ಕದ್ದಿದ್ದೇ ರೋಚಕ ಸ್ಟೋರಿ!
– ಶಿವಮೊಗ್ಗ : ಜ್ಯುವೆಲರಿ ಶಾಪ್‌ನಲ್ಲಿ ಚಿನ್ನದ ಬಾಕ್ಸ್‌ ಕದ್ದರು!
– ಶಿವಮೊಗ್ಗ: ಮೈಸೂರು-ತಾಳಗುಪ್ಪ ಟ್ರೈನ್‌ ಡಿಕ್ಕಿ: ಸಾವು
– ಆಗುಂಬೆ: ಒಂಟಿ ಮನೆ ಕಳ್ಳತನ: ಇಬ್ಬರು ಅರೆಸ್ಟ್‌
– ಕಡೂರು : ನ್ಯಾಯ ಸಿಗದೆ ಕೋರ್ಟ್ ಆವರಣದಲ್ಲೇ ವಿಷ ಸೇವನೆ!
– ಸೊರಬ : ಅಡಿಕೆ ಕಳ್ಳ ಅರೆಸ್ಟ್‌, ಸಿಕ್ತು ಲಕ್ಷ ಲಕ್ಷ ಹಣ!
– ಶಿವಮೊಗ: ಅನ್ಯಕೋಮಿನ ಯುವಕರಿಂದ ಹಲ್ಲೆ: ವಿವಾದ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಮಾದವೀ ಟಾಕೀಸ್‌ ಬಳಿ ರೈಲ್ವೆ ನಿಲ್ದಾಣದ ಸಮೀಪ ಓರ್ವ ವ್ಯಕ್ತಿಯು ಟ್ರೈನ್‌ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿ ವ್ಯಕ್ತಿಯು ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಶಿವಮೊಗ್ಗದ ವಿದ್ಯಾನಗರ ಗುರುಪುರ ನಿವಾಸಿ ಎಸ್‌ ರುದ್ರಪ್ಪ ಎಂಬವರು ಸೌದೆ ಒಟ್ಟು ಮಾಡಲು ಮಾದವಿ ಟಾಕೀಸ್‌ ರೈಲ್ವೆ ನಿಲ್ದಾಣದ ಸಮೀಪ ಬಂದಿದ್ದರು ಎನ್ನಲಾಗಿದೆ ಮೇಲ್ಸೇತುವೆ ಸಮೀಪ ಟ್ರ್ಯಾಕ್‌ ಬಳಿ ಓಡಾಡುತ್ತಿದ್ದ ಅವರಿಗೆ ಮೈಸೂರಿನಿಂದ ಬರುತ್ತಿದ್ದ ತಾಳಗುಪ್ಪ ಟ್ರೈನ್‌ ಡಿಕ್ಕಿಯಾಗಿದೆ ಎನ್ನಲಾಗಿದೆ. ಅವರಿಗೆ ಕಿವಿ ಸಮಸ್ಯೆಯಿದ್ದ ಕಾರಣ ಟ್ರೈನ್‌ ಬರುವುದು ಗೊತ್ತಾಗದೇ ಹೋಗಿರಬಹುದು, ಈ ವೇಳೆ ಅವರ ಮುಖಕ್ಕೆ ಟ್ರೈನ್‌ ಡಿಕ್ಕಿಯಾಗಿ ಒಂದು ಕಡೆಯಲ್ಲಿ ಬಿದ್ದಿದ್ದಾರೆ ಎಂದು ಸ್ಥಳೀಯರು ಊಹಿಸುತ್ತಿದ್ದಾರೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮನಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ.

ಜ್ಯುವೆಲರಿ ಶಾಪ್‌ನಲ್ಲಿ ಚಿನ್ನದ ಬಾಕ್ಸ್‌ ಕದ್ದಳು ಮಹಿಳೆ

ಶಿವಮೊಗ್ಗ : ಗಾಂಧಿ ಬಜಾರಿನ ತಿರುಪಳಯ್ಯನ ಕೇರಿಯ ಸಂಪತ್‌ ಜ್ಯುವೆಲರಿ ಶಾಪ್‌ನಲ್ಲಿ ಮಹಿಳೆಯರ ಗುಂಪೊಂದು ಗ್ರಾಹಕರಂತೆ ಬಂದು ₹3.51 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದೆ. ಉಂಗುರ ಹಾಗೂ ಬೆಳ್ಳಿ ದೀಪ ಖರೀದಿಯ ನೆಪದಲ್ಲಿ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಅಂಗಡಿಯವರ ಕಣ್ತಪ್ಪಿಸಿ ಒಡವೆಗಳ್ಳಿದ್ದ ಬಾಕ್ಸ್ ದೋಚಿದ್ದಾರೆ. ಮದುವೆ ಗಿಫ್ಟ್‌ ಗಾಗಿ ಉಂಗುರ ಬೇಕು ಎಂದು ಬಂದ ಮೂವರು ಮಹಿಳೆಯರು, ಅಂಗಡಿಯಲ್ಲಿದ್ದ ಇಬ್ಬರು ಯುವತಿಯರ ಓಡಾಟವನ್ನು ಗಮನಿಸುತ್ತಾ ಅವರ ದೃಷ್ಟಿಯಲ್ಲಿ ತಾವೊಬ್ಬರು ಗ್ರಾಹಕರು ಎಂದು ನಂಬಿಕೆ ಬರುವಂತೆ ವರ್ತಿಸಿದ್ದಾರೆ. ಈ ವೇಳೆ ಡಿಸ್ಪ್ಲೇ ಬಾಕ್ಸ್‌ನಲ್ಲಿದ್ದ ಆಭರಣಕ್ಕಿಂತಲೂ ಕಡಿಮೆ ತೂಕದ ಉಂಗುರ ತೋರಿಸಲು ಕೇಳಿದ್ದಾರೆ. ಆಗ ಅಂಗಡಿಯಲ್ಲಿದ್ದ ಯುವತಿ ಒಬ್ಬರು ಲಾಕರ್ ರೂಂಗೆ ಹೋಗಿ ವಿವಿಧ ಮಾಡಲ್‌ಗಳನ್ನು ತೆರಳಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಅಲ್ಲಿದ್ದ ಓರ್ವ ಯುವತಿಗೆ ಅಡ್ಡಲಾಗಿ ನಿಂತಿ ದೀಪಗಳನ್ನ ಪರಿಶೀಲಿಸುವ ರೀತಿಯಲ್ಲಿ ವರ್ತಿಸಿದ್ದಾರೆ. ಆಗ ಹಿಂದಿದ್ದ ಹಿರಿಯ ವಯಸ್ಸಿನ ಮಹಿಳೆ ನೇರವಾಗಿ ಡಿಸ್‌ಪ್ಲೇ ಬಾಕ್ಸ್‌ಗೆ ಕೈ ಹಾಕಿ ಅಲ್ಲಿದ್ದ ಆಭರಣದ ಬಾಕ್ಸ್‌ನ ತೆಗೆದು ತನ್ನ ರವಿಕೆಯೊಳಗೆ ಇಟ್ಟುಕೊಂಡಿದ್ದಾಳೆ. ಕೆಲಸವಾದ ಬಗ್ಗೆ ಹಿಂದಿನಿಂದಲೇ ಬೆನ್ನುತಟ್ಟಿ ಸಿಗ್ನಲ್‌ ಮಹಿಳೆ ನಿಧಾನವಾಗಿ ಅಲ್ಲಿಂದ ಹೊರಡುತ್ತಾಳೆ. ಅವಳ ಹಿಂದೆಯೇ ಉಳಿದವರು ಮನೆಯವರಿಗೆ ಹೇಳಿ ಖರೀದಿ ಮಾಡುತ್ತೇವೆ ಎಂದು ಅಲ್ಲಿಂದ ಎಸ್ಕೇಪ್‌ ಆಗುತ್ತಾರೆ. ಇದಾದ ಬಳಿಕ ಯುವತಿಯರಿಗೆ ಅನುಮಾನ ಬಂದು ಸಿಸಿ ಕ್ಯಾಮರಾ ನೋಡಿದಾಗ ವಿಚಾರ ಗೊತ್ತಾಗಿದೆ. ಈ ಸಂಬಂಧ ಅಂಗಡಿಯ ಮಾಲೀಕ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ಲಾಸ್ಟಿಕ್ ಬಾಕ್ಸ್‌ನಲ್ಲಿದ್ದ ₹84 ಸಾವಿರ ಬೆಲೆಯ 16 ಗ್ರಾಂ ತೂಕದ ಮಾಂಟಿಕಾ, ₹ 73 ಸಾವಿರ ಮೌಲ್ಯದ 14 ಗ್ರಾಂ ತೂಕದ 10 ಲಕ್ಷ್ಮಿ ಕಾಸುಗಳು, ₹1.10 ಲಕ್ಷ ಮೌಲ್ಯದ 9 ಚಿನ್ನದ ತಾಳಿಗಳು, ₹63 ಸಾವಿರ ಬೆಲೆಯ 7 ಜೊತೆ ಬುಗಡಿ, ₹21 ಸಾವಿರ ಬೆಲೆಯ ಮೂಗುಬೊಟ್ಟುಗಳು ಸೇರಿದಂತೆ ₹3,51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

– ತೀರ್ಥಹಳ್ಳಿ: ಆಗುಂಬೆ ಪೊಲೀಸರಿಂದ ಇಬ್ಬರು ಅರೆಸ್ಟ್‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಧ ಸಂಬಂಧವಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮಂಜುನಾಥ ಅಲಿಯಾನ್‌ ಕೊಪ್ಪ ಮಂಜ (45), ಚೇತನ್ (35) ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಉಂಟೂರುಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗಳಕೊಪ್ಪ ಮಜರೆ ಗ್ರಾಮದ ಶಿವಪ್ಪ ಹೆಗ್ಡೆ ಮನೆಯಲ್ಲಿ ಕಳ್ಳತನವಾಗಿತ್ತು. ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಮನೆಯಲ್ಲಿ ಕಳುವಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರು ಮಲೆನಾಡು ಭಾಗದ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕಡೂರು : ನ್ಯಾಯ ಸಿಗದೆ ಕೋರ್ಟ್ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕಡೂರು : ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ರೈತನೊಬ್ಬ ನ್ಯಾಯಾಲಯದ ಆವರಣ ಸಮೀಪವೇ ವಿಷ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕಾರೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ (50) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೈತ. ಜಮೀನಿನ ವಿಚಾರದ ವ್ಯಾಜ್ಯ ಕಡೂರು ಸಿವಿಲ್ ಕೋರ್ಟ್‌ನಲ್ಲಿತ್ತು, ಪ್ರಕರಣದ ತೀರ್ಪು. ರೈತನ ವಿರುದ್ಧ ಬಂದಿತ್ತು. ತೀರ್ಪಿನ ವಿರುದ್ಧ ರೈತ ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಿದ್ದರು. ಕಡೂರು ಪಟ್ಟಣದ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆದಿದ್ದು, ತೀರ್ಪು ರೈತ ಮಲ್ಲಿಕಾರ್ಜುನ ವಿರುದ್ಧ ಬಂದಿತ್ತು, ಇದರಿಂದ ಅಸಮಾಧಾನಗೊಂಡ ರೈತ ನನಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಆವರಣ ಸಮೀಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ರೈತನನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹಾಸನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ನನ್ನ ತಂದೆ ನಿಧನವಾದ ಬಳಿಕ ನನ್ನ ಜಮೀನು ಲಪಟಾಯಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಮ್ಮ ವಕೀಲರು ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ. ನನ್ನ ಸಾವಿಗೆ ಎಂಬಿ ಷಡಕ್ಷರಪ್ಪ ತಮ್ಮಂದಿರು, ಅವರ ಅಣ್ಣನ ಮಕ್ಕಳು ಮತ್ತು ರಾಜು ಕಾರಣ. ಅಮ್ಮ ನನ್ನ ಕ್ಷಮಿಸು, ನೀನು ಚೆನ್ನಾಗಿರು. ಕೈ, ಕಾಲು ಮುಗಿದರೂ ನ್ಯಾಯಾಲಯದಲ್ಲಿ ನನ್ನನ್ನು ಏನು ಕೇಳಲಿಲ್ಲ. ನಾನು ಜಮೀನು ಉಳಿಸಿಕೊಳ್ಳಲು 20 ಲಕ್ಷ ರೂ. ಸಾಲ ಮಾಡಿದ್ದೇನೆ. ನಾನು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ನನ್ನ ಪತ್ರಕ್ಕೆ ಸ್ಪಂದಿಸಿಲ್ಲ. ಈ ಮೂಲಕ ಸಿಎಂ ಮತ್ತು ಗೃಹ ಸಚಿವರಲ್ಲಿ ಬೇಡಿಕೊಳ್ಳುವೆ ನನಗೆ ನ್ಯಾಯ ಒದಗಿಸಿಕೊಡಿ. ಈ ಔಷಧಿ ಕುಡಿದು ನ್ಯಾಯಾಲಯದಲ್ಲೇ ಸಾಯುತ್ತಿದ್ದೇನೆ ಎಂದು ಮಲ್ಲಿಕಾರ್ಜುನ್ ವಿಷ ಸೇವಿಸಿದ್ದಾನೆ.

– ಸೊರಬ : ಅಡಿಕೆ ಕಳ್ಳ ಅರೆಸ್ಟ್‌

ಸೊರಬ : ಅಡಿಕೆ, ಗೇರುಬೀಜ ಕಳವು ಮಾಡಿದ್ದ ಆರೋಪಿಯನ್ನು ಸೊರಬ ಪೊಲೀಸರು ಬಂಧಿಸಿದ್ದು ನಾಲ್ವರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 4.70 ಲಕ್ಷ ರೂ. ನಗದು, 8 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ಶಿಕಾರಿಪುರದ ಜಕ್ಕನಹಳ್ಳಿಯ ನಂದೀಶ್‌ ಬಂಧಿತ. ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಜಯಕುಮಾರ್ ಎಂಬುವರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆ, ಗೇರುಬೀಜ ಕಳ್ಳತನ ಆಗಿರುವ ಕುರಿತು ಮೇ 10ರಂದು ಸೊರಬ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಾವಲಿ ಗ್ರಾಮದ ಸಮೀಪ ಆರೋಪಿ ಬಂಧಿಸಿದ್ದಾರೆ. ಡಿವೈಎಸ್ಪಿ ಕೆ.ಇ.ಕೇಶವ ಮೇಲ್ವಿಚಾರಣೆಯಲ್ಲಿ ಸೊರಬ ಇನ್ಸ್‌ಪೆಕ್ಟರ್‌ ರಮೇಶ್ ರಾವ್ ನೇತೃತ್ವದಲ್ಲಿ ಪಿಎಸ್‌ಐ ಹೆಚ್.ಎನ್.ನಾಗರಾಜ್, ಎಎಸ್‌ಐಗಳಾದ ಲಿಂಗರಾಜ, ಪ್ರಭಾಕರ, ಸಿಬ್ಬಂದಿ ರಾಜುನಾಯ್, ನಾಗರಾಜ, ಅಶೋಕ, ನಾಗೇಶ್, ಕೆ.ಎನ್.ಲೋಕೇಶ್, ರಾಘವೇಂದ್ರ, ಲೋಕೇಶ್, ಆನವಟ್ಟಿ ಠಾಣೆಯ ಮಂಜುನಾಥ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

– ಶಿವಮೊಗ: ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಯುವಕ

ಶಿವಮೊಗ: ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಯುವಕನೊಬ್ಬನ ಬಗ್ಗೆ ಸ್ವತಃ ಶಾಸಕ ಎಸ್‌ಎನ್‌ ಚನ್ನಬಸಪ್ಪ ಧ್ವನಿ ಎತ್ತಿದ್ದು, ಈ ಬಗ್ಗೆ ತಮ್ಮದೆ ಫೇಸ್‌ಬುಕ್‌ ಪುಟದಲ್ಲಿ ಬರಹವೊಂದನ್ನ ಪೋಸ್ಟ್‌ ಮಾಡಿದ್ದು ಗೃಹಸಚಿವರನ್ನ ನಮೂದು ಮಾಡಿ ಗಮನವಹಿಸುವಂತೆ ಆಗ್ರಹಿಸಿದ್ದಾರೆ. ಇಲಿಯಾಸ್ ನಗರದಲ್ಲಿ ತನ್ನ ಸಹೋದ್ಯೋಗಿಯ ಜೊತೆ ಕೆಲಸದಲ್ಲಿದ್ದಾಗ ಅನ್ಯ ಕೋಮಿನ ಪುಂಡರಿಂದ ಮಾರಣಾಂತಿಕ ಹಲ್ಲೆಗೊಳಗಾಗಿರುವ ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ಹಿಂದೂ ಯುವಕ ನಂದನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಯುವಕನಿಗೆ ಹಾಗೂ ಅವನ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.ಸದ್ಯ ಚನ್ನಬಸಪ್ಪರವರ ಈ ಎಫ್‌ಬಿ ಪೋಸ್ಟ್‌ ಎಲ್ಲೆಡೆ ಹರಿದಾಡುತ್ತಿದ್ದು, ಶಿವಮೊಗ್ಗ ಪೊಲೀಸ್‌ ಇಲಾಖೆ, ಕಾನೂನು ವ್ಯವಸ್ಥೆ ಮತ್ತು ಪೋಸ್ಟ್‌ನ ಬಗ್ಗೆಯೇ ಹಲವು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.